ಹುಬ್ಬಳ್ಳಿ: ನನ್ನ ರಕ್ತದಲ್ಲಿ ಬರೆದುಕೊಡ್ತೇನೆ. ಯಾವ ಕಾರಣಕ್ಕೂ ಶೆಟ್ಟರ್ (Jagadish Shettar) ಈ ಕ್ಷೇತ್ರದಿಂದ ಗೆಲ್ಲಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ( BS Yediyurappa) ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ.
ಲಿಂಗಾಯತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ (Election) ದಿನಾಂಕ ನಿಶ್ಚಯ ಆಗಿದೆ. ಅಭ್ಯರ್ಥಿಗಳೂ ನಿಶ್ಚಯವಾಗಿದ್ದಾರೆ. ಜಗದೀಶ್ ಶೆಟ್ಟರ್ ನಡೆ ಬಗ್ಗೆ ಸತ್ಯ ಸಂಗತಿ ಹೇಳಲು ವೀರಶೈವ ಸಭೆ ಕರೆದಿದ್ದೇನೆ. ಶೆಟ್ಟರ್ ಅನ್ನು ಸಿಎಂ, ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದೇವೆ. ಬಿ.ಬಿ.ಶಿವಪ್ಪ ಅವರನ್ನು ಬಿಟ್ಟು ಶೆಟ್ಟರ್ ಪರವಾಗಿ ನಿಂತು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಿದ್ದೆವು. ಅವರಿಗೆ ಏನು ಅನ್ಯಾಯ ಮಾಡಿದ್ದೆವು? ಸ್ವತಃ ಪ್ರಧಾನಿಗಳೇ ಮಾತನಾಡಿದರು. ನಿಮ್ಮ ಶ್ರೀಮತಿಯವರನ್ನು ನಿಲ್ಲಿಸಿ, ಅವರಿಗೆ ಟಿಕೆಟ್ ಕೊಡ್ತೇವೆ ಅಂದರು. ಜೊತೆಗೆ ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಮಂತ್ರಿ ಆಗುವಂತೆ ಆಫರ್ ನೀಡಲಾಯಿತು ಎಂದರು.
Advertisement
Advertisement
ಇಷ್ಟೆಲ್ಲ ಆಫರ್ ನೀಡಿದರೂ, ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್‍ಗೆ ಹೋಗಿದ್ದಾರೆ. ಇದನ್ನು ಸವಾಲಾಗಿ ಸ್ವೀಕಾರ ಮಾಡಿ. ಯಾವುದೇ ಕಾರಣಕ್ಕೂ ಶೆಟ್ಟರ್ ಪರವಾಗಿ ನಿಲ್ಲಬೇಡಿ. ಚುನಾವಣೆಯಲ್ಲಿ ದಯನೀಯ ಸೋಲಾಗುವಂತೆ ಮಾಡಬೇಕು. ಅದೇ ಅವರಿಗೆ ಪಾಠವಾಗಲಿದೆ ಎಂದ ಅವರು, ನಾಳೆ ರ‍್ಯಾಲಿ ಏರ್ಪಡಿಸಲಾಗಿದೆ. ಹತ್ತಾರು ಸಾವಿರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ. ರಾಜಕೀಯ ನಾಟಕ ಮಾಡೋರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
Advertisement
ಹತ್ತು, ಹನ್ನೆರಡು ಸಾವಿರ ಜನರನ್ನು ಸೇರಿಸಿ ಬೃಹತ್ ಮೆರವಣಿಗೆ ಆಯೋಜಿಸಬೇಕು. ಇದನ್ನು ನೋಡಿದ ಮನೆಯಲ್ಲಿ ಕುಳಿತ ಶೆಟ್ಟರ್‌ಗೆ ನಡುಕ ಉಂಟಾಗಬೇಕು. ಪ್ರಧಾನಿ ಮತ್ತೊಮ್ಮೆ ರಾಜ್ಯಕ್ಕೆ ಬರುವ ಸಂಭವ ಇದೆ. ಇವತ್ತಿನಿಂದ ಜಗದೀಶ್ ಶೆಟ್ಟರ್ ಹೆಸರನ್ನು ಹೇಳಲ್ಲ. ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿ, ಪಕ್ಷಾಂತರಿಗಳನ್ನು ಕ್ಷಮಿಸೋದಿಲ್ಲ ಅನ್ನೋ ಸುದ್ದಿ ಎಲ್ಲೆಡೆ ಹೋಗಬೇಕು ಎಂದು ಶೆಟ್ಟರ್ ವಿರುದ್ಧ ಹರಿಹಾಯ್ದರು.
Advertisement
ಪ್ರಹ್ಲಾದ್ ಜೋಶಿ ಮತ್ತು ಇತರೆ ನಾಯಕರು ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ. ಜಗದೀಶ್ ಶೆಟ್ಟರ್ ಕಂಪನಿಗೆ ಪಾಠ ಕಲಿಸಿ. ಶೆಟ್ಟರ್ ಸೋಲಿಸುವುದೇ ಒಂದು ಕಾರ್ಯಕ್ರಮವಾಗಬೇಕು. ಲೋಕಸಭೆ ಚುನಾವಣೆ ಮುಗಿಯೋವರೆಗೂ ಓಡಾಡ್ತೇನೆ ಎಂದರು. ಇದನ್ನೂ ಓದಿ: ಇಂದಿರಾ ಗಾಂಧಿಯ ಪ್ರತಿರೂಪ ಎಂದಿದ್ದಕ್ಕೆ ಮಹಿಳೆಗೆ ಪ್ರೀತಿಯ ಅಪ್ಪುಗೆ ನೀಡಿದ ಪ್ರಿಯಾಂಕಾ
ಬೆಂಗಳೂರಲ್ಲಿ 30 ಜನ ಮುಖಂಡರ ಸಭೆ ಮಾಡಿದ್ದೇನೆ. ಕಾಂಗ್ರೆಸ್ ನನ್ನ ಬಗ್ಗೆ ಸಿಂಪಥಿ ಕ್ರಿಯೇಟ್ ಮಾಡುತ್ತಿದಾರೆ. ಬೇರೆಯವರಿಗೆ ಸಿಎಂ ಮಾಡಲು ನಾನು ಸ್ವತಃ ರಾಜೀನಾಮೆ ನೀಡಿದ್ದೇನೆ. ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಎನ್ನುವ ಮಾತನ್ನ ಪಿಎಂಗೆ ಹೇಳಿದ್ದೆ. ಅದರಂತೆಯೇ ಬಿಜೆಪಿಯನ್ನು ಅಧಿಕಾರಕ್ಕೆ ತರೋಕೆ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಯಾವುದೇ ಸಮೀಕ್ಷೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ತಿಳಿಸಿದರು. ಇದನ್ನೂ ಓದಿ: ಪಂಜಾಬ್‌ನ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ಇನ್ನಿಲ್ಲ