ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಯವರಂಥ ನಾಯಕ ಸಿಕ್ಕಿರೋದು ನಮ್ಮ ಸೌಭಾಗ್ಯ. ಕೊರೊನಾ ಸಂದರ್ಭದಲ್ಲಿ ಪರಿಹಾರ ನೀಡಿದ್ದಾರೆ, ಆರೋಗ್ಯ ರಕ್ಷಿಸಿ ದೇಶ ರಕ್ಷಿಸಿದ್ದಾರೆ. ದೇಶವು ಆರ್ಥಿಕ ಪ್ರಗತಿ ಆಗಿದೆ, ಜಗತ್ತಿನಲ್ಲೇ ನಮ್ಮ ದೇಶ ಆರ್ಥಿಕತೆಯಲ್ಲಿ ಐದನೇ ಸ್ಥಾನದಲ್ಲಿದೆ. ಮುಂದೆ ಒಂದನೇ ಸ್ಥಾನದಲ್ಲಿ ಬರೋದ್ರಲ್ಲಿ ಸಂಶಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ಹೇಳಿದರು.
Advertisement
ಖಾಸಗಿ ಹೊಟೇಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರದ ಅಗತ್ಯ ಇದೆ. ಮೋದಿಯವರಂಥ ಮುತ್ಸದ್ಧಿ ಪ್ರಧಾನಿ ನಾಯಕ ಈದೇಶದ ಅಭಿವೃದ್ಧಿ ಬಗ್ಗೆ ಹಗಲಿರುಳು ಚಿಂತೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಮೋದಿ, ಅಮಿತ್ ಶಾ, ನಡ್ಡಾ ಅವರು ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ವಿದೇಶದಿಂದ ಬಂದ ನಂತರ ವಿಶ್ರಾಂತಿ ಇಲ್ಲದೇ ಮೋದಿಯವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
Advertisement
Advertisement
ಜಾತಿ ಧರ್ಮದ ಎಲ್ಲೆ ಮೀರಿ ಬಸವತತ್ವದಂತೆ ಮೋದಿ ಆಡಳಿತ ಇದೆ. ಅವರ ಹೆಜ್ಜೆಗೆ ಹೆಜ್ಜೆ ಹಾಕುವ ಸರ್ಕಾರ ಕರ್ನಾಟಕದಲ್ಲಿ ಬೇಕಾಗಿದೆ. ರಾಜ್ಯದ ಅಭಿವೃದ್ಧಿ ಮುಖ್ಯ, ರೈತರು, ಮಕ್ಕಳು, ಮಹಿಳೆಯರು, ದುರ್ಬಲ ಸಬಲೀಕರಣಕ್ಕೆ ಮೋದಿಯವರ ಕೈ ಬಲಪಡಿಸಬೇಕಿದೆ. ರಾಜ್ಯದಲ್ಲಿ ಸಮಗ್ರ ಅಭಿವೃದ್ಧಿ ಆಗುತ್ತಿದೆ. ಮನೆಮನೆಗೂ ಶುದ್ಧ ಕುಡಿಯುವ ನೀರು, ಶೌಚಾಲಯಗಳ ನಿರ್ಮಾಣ ಆಗಿದೆ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿ ಪಿಎಂ ಆಗಿದ್ದರೆ ನಮ್ಮ ದೇಶ ದಿವಾಳಿ ಆಗುತ್ತಿತ್ತು: ವಿಜಯೇಂದ್ರ
Advertisement
ಮೋದಿ, ಅಮಿತ್ ಶಾ (AmitShah), ನಡ್ಡಾ ರಾಜ್ಯದ ಉದ್ದಗಲ ಓಡಾಡಿದ್ದಾರೆ. ಪ್ರಧಾನಿಯವರು ರೋಡ್ ಶೋ ಮಾಡಿದ್ದಾರೆ. ರಾಜ್ಯದ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದಾರೆ. ಈ ಸಲ 130-135 ಸೀಟ್ ಗೆಲ್ಲೋದು ನಿಶ್ಚಿತ. 2008 ರಲ್ಲಿ 110, 2018 ರಲ್ಲಿ 104 ಗೆದ್ದಿದ್ದೇವೆ. ಸೂರ್ಯ ಚಂದ್ರರಷ್ಟೇ ಸತ್ಯ ನಾವು ಅಧಿಕಾರಕ್ಕೆ ಬರೋದು. ಮೀಸಲಾತಿ ಹೆಚ್ಚಳ ಮಾಡಿದ್ದೇವೆ. 80% ಭಾಗ ಎಸ್ಸಿ, ಎಸ್ಟಿ ಸಮುದಾಯದವರು ಬಿಜೆಪಿ ಬೆಂಬಲಿಸುತ್ತಾರೆ ಎಂದು ತಿಳಿಸಿದರು.
ನಮ್ಮ ಸರ್ಕಾರ ರೈತರ ಮಕ್ಕಳಿಗೆ ವಿದ್ಯಾ ನಿಧಿ, ಸಂಧ್ಯಾ ಸುರಕ್ಷೆ ತಂದಿದ್ದೇವೆ. ನಾವು ಜಾತಿ ರಾಜಕಾರಣ ಮಾಡಿಲ್ಲ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು. ಆಧಾರದಲ್ಲಿ ಸರ್ಕಾರ ನಡೆಸಿದ್ದೇವೆ. ಒಕ್ಕಲಿಗ, ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸಿದ್ದೇವೆ. ದೇಶ, ರಾಜ್ಯದಲ್ಲಿ ಕಾಂಗ್ರೆಸ್- ಮುಳುಗ್ತಿರುವ ಹಡಗು. ರಾಹುಲ್, ಪ್ರಿಯಾಂಕ ಉತ್ತರ ಪ್ರದೇಶದಲ್ಲಿ ಅಷ್ಟೊಂದು ಸಲ ಓಡಾಡಿ ನಾಲ್ಕು ಐದು ಸ್ಥಾನ ಗೆದ್ರು. ರಾಹುಲ್ ಮೋದಿಯವರಿಗೆ ಸಮ ಆಗಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ನಮ್ಮ ಪ್ರಣಾಳಿಕೆಯಲ್ಲಿ ಹಲವು ಭರವಸೆ ಕೊಟ್ಟಿದ್ದೇವೆ. ನಮ್ಮ ಸರ್ಕಾರ ಬಂದ ಕೂಡಲೇ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಹೆಚ್ಚಿಸ್ತೇವೆ. ರೈತಸಿರಿ ಯೋಜನೆಯಡಿ ಸಿರಿಧಾನ್ಯ ಬೆಳೆಯುವ ರೈತರಿಗೆ ಹತ್ತು ಸಾವಿರ ಪ್ರೋತ್ಸಾಹ ಧನ ಕೊಡ್ತೇವೆ. ಅಡಿಕೆ ಮಂಡಳಿ ಸ್ಥಾಪಿಸ್ತೇವೆ. ಪ್ರಣಾಳಿಕೆ ಭರವಸೆಗಳನ್ನು ಅಕ್ಷರಶಃ ಜಾರಿ ಮಾಡ್ತೇವೆ. ವೀರಶೈವ ಲಿಂಗಾಯತ ಸಮಾಜ ಎತ್ತಿ ಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ. ಒಟ್ಟಿನಲ್ಲಿ ಮತದಾರರು ದೊಡ್ಡ ಪ್ರಮಾಣದಲ್ಲಿ ಬಂದು ಮತ ಚಲಾಯಿಸಿ ಎಂದು ಯಡಿಯೂರಪ್ಪ ಮನವಿ ಮಾಡಿಕೊಂಡರು.