ಬೆಳಗಾವಿ: ಬೊಮ್ಮಾಯಿ (Basavaraj Bommai) ಸರ್ಕಾರ ಅಲಿಬಾಬ ಮತ್ತು 40 ಕಳ್ಳರ ಸರ್ಕಾರ. ಬಿಜೆಪಿಯವರು ಯದ್ವಾತದ್ವಾ ಭ್ರಷ್ಟಾಚಾರ (Corruption) ಮಾಡಿದ್ದಾರೆ. ಬಿಜೆಪಿ (BJP) ಅತ್ಯಂತ ಭ್ರಷ್ಟ ಸರ್ಕಾರ ಎಂದು ಜನರು ಬೀದಿ ಬೀದಿಗಳಲ್ಲಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವ್ಯಂಗ್ಯವಾಡಿದರು.
ಗೋಕಾಕ್ ನಗರದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾವೆಲ್ಲಾ 2013ರಲ್ಲಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಿರಿ. ನಾನು ಸಿಎಂ ಆಗಿದ್ದೆ. ನಮ್ಮ ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಸಮಾಜದ ಎಲ್ಲಾ ಬಡವರಿಗೆ ಕಾರ್ಯಕ್ರಮ ಕೊಡುವ ಕೆಲಸ ಮಾಡಿದ್ದೇನೆ. ನಮ್ಮದು ನುಡಿದಂತೆ ನಡೆದ ಸರ್ಕಾರ. ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇವೆ. 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಅನ್ನಭಾಗ್ಯ, ಶೂ ಭಾಗ್ಯ, ವಿದ್ಯಾಸಿರಿ, ಮಾತೃಪೂರ್ಣ ಯೋಜನೆಗಳನ್ನು ಜಾರಿಗೆ ತಂದಿದ್ದೇನೆ. ಬಿಜೆಪಿ 2018ರಲ್ಲಿ 600 ಭರವಸೆಗಳನ್ನು ನೀಡಿತ್ತು. ಅದರಲ್ಲಿ ಕೇವಲ 50 ಭರವಸೆಗಳನ್ನು ಈಡೇರಿಸಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಬಿಜೆಪಿ ಭ್ರಷ್ಟ ನಾಯಕರನ್ನು ಜೈಲಿಗೆ ಕಳುಹಿಸುತ್ತೇವೆ: ಬಿಕೆ ಹರಿಪ್ರಸಾದ್
Advertisement
Advertisement
ಗೋಕಾಕ್ (Gokak) ಮತದಾರರು ಬದಲಾವಣೆ ಬೇಕು ಎಂದು ಈಗಾಗಲೇ ತೀರ್ಮಾನ ಮಾಡಿದ್ದಾರೆ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಜನರು ಬದಲಾವಣೆ ಬಯಸಿದ್ದಾರೆ. ಜನವಿರೋಧಿ, ಭ್ರಷ್ಟಾಚಾರ ಸರ್ಕಾರ ಇರುವುದರಿಂದ ಬಿಜೆಪಿ ಸರ್ಕಾರವನ್ನು ಬದಲಾವಣೆ ಮಾಡಬೇಕೆಂಬುದು ಜನರ ಅಭಿಲಾಷೆಯಾಗಿದೆ ಎಂದರು.
Advertisement
ಗುತ್ತಿಗೆದಾರರರ ಸಂಘ, ರುಪ್ಸಾದಿಂದ ಪ್ರಧಾನಿ ನರೇಂದ್ರ ಮೋದಿಗೆ (Narendra Modi) ಕಮಿಷನ್ ಬಗ್ಗೆ ಪತ್ರ ಬಂದಿವೆ. ನಾನೂ ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದೇಕೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪ್ರಶ್ನೆ ಮಾಡಿದರು. ಇದನ್ನೂ ಓದಿ: ನಾವು ಅಣ್ಣ, ತಮ್ಮಂದಿರ ಹಾಗೇ ಇದ್ದೇವೆ : ಮುಸಲ್ಮಾನರನ್ನು BJPಗೆ ಸ್ವಾಗತಿಸಿದ ಬೊಮ್ಮಾಯಿ
Advertisement
ನಾಲ್ಕು ವರ್ಷಗಳಲ್ಲಿ ಬಿಜೆಪಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ರಮೇಶ್ ಜಾರಕಿಹೊಳಿ (Ramesh Jarkiholi) ಒಬ್ಬ ಹಿರಿಯ ನಾಯಕ. ನಾಲ್ಕು ವರ್ಷಗಳಲ್ಲಿ ಒಂದೇ ಒಂದು ಮನೆ ಕೊಡಿಸಲಾಗದವರು ಅಧಿಕಾರದಲ್ಲಿರಲು ಲಾಯಕ್ಕಾ ಅಥವಾ ನಾಲಾಯಕ್ಕಾ ಎಂದು ನೀವೇ ಹೇಳಿ? ನಾನು 14 ಲಕ್ಷ ಮನೆ ಕಟ್ಟಿಸಿ ಕೊಟ್ಟಿದ್ದೇನೆ. ಬಿಜೆಪಿಯವರು ಒಂದು ಮನೆ ಕೊಟ್ಟಿಲ್ಲ. ಇವರ ಮನೆ ಹಾಳಾಗಿ ಹೋಗಲಿ. ಲಜ್ಜೆಗೆಟ್ಟವರು ಅನ್ನಭಾಗ್ಯ ಅಕ್ಕಿಯ ಪ್ರಮಾಣ ಕಡಿತ ಮಾಡಿದರು ಎಂದು ಹರಿಹಾಯ್ದರು.
ಗೋಕಾಕಿನಲ್ಲಿ ಭಯದ ವಾತಾವರಣವಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. 2018ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ರಮೇಶ್ ಅಧಿಕಾರದ ಆಸೆಗೆ ಸಮ್ಮಿಶ್ರ ಸರ್ಕಾರ ಪತನಗೊಳಿಸಿದರು. ಅಲ್ಲೂ ಜಾಸ್ತಿ ದಿನ ಮಂತ್ರಿ ಆಗಿ ಉಳಿಯಲಿಲ್ಲ. ಅವರಿಗೆ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಆಗಲಿಲ್ಲ. ಯಾಕೆ ಮಂತ್ರಿ ಸ್ಥಾನ ಕಳೆದುಕೊಂಡರು ಎಂಬುದನ್ನು ನಾನು ಹೇಳಲ್ಲ ಎಂದರು. ಇದನ್ನೂ ಓದಿ: ಪ್ರೀತಂಗೌಡ ಮಾಡಿರುವ ಕೆಲಸದ ಆಧಾರದ ಒಂದಲ್ಲ 4 ಸೀಟ್ ಗೆಲ್ತೀವಿ: ಅಮಿತ್ ಶಾ
ಈ ಸಲ ನಮ್ಮದೇ ಸರ್ಕಾರ ಬರಲಿದೆ. ನೂರಕ್ಕೆ ನೂರು ನಮ್ಮದೇ ಸರ್ಕಾರ ಬರಲಿದೆ. ಬಾಲಂಗೋಚಿ ಪೊಲೀಸರನ್ನು ನಮ್ಮ ಸರ್ಕಾರ ಬಂದಮೇಲೆ ಬದಲಾಯಿಸುತ್ತೇವೆ. ಈ ಸಲ ಭಯಪಡದೇ ಡಾ.ಕಡಾಡಿಗೆ ಮತ ಹಾಕಬೇಕು. ನಾವು ಇಲ್ಲಿನ ವ್ಯವಸ್ಥೆ ಬದಲಿಸುತ್ತೇವೆ. ಕಾಂಗ್ರೆಸ್ ನಿಮಗೆ ರಕ್ಷಣೆ ನೀಡುತ್ತದೆ. ಡಾ.ಮಹಾಂತೇಶ ಕಡಾಡಿ (Dr.Mahantesh Kadadi) ಅವರಿಗೆ ಮತ ನೀಡಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಲಕ್ಷ್ಮಣ ಸವದಿಯವರನ್ನು (Laxman Savadi) ಕುತ್ತಿಗೆ ಹಿಡಿದು ಆಚೆ ತಳ್ಳಿದರು. ಶೆಟ್ಟರ್ (Jagadish Shettar) ಅವರನ್ನು ಹೊರಹಾಕಿದರು. ಯಡಿಯೂರಪ್ಪ (B.S.Yediyurappa) ಅವರನ್ನು ಒತ್ತಾಯಪೂರ್ವಕವಾಗಿ ಅಧಿಕಾರದಿಂದ ಕೆಳಗಿಳಿಸಿದರು. ನಾನು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದೇ ಬಸವ ಜಯಂತಿಯಂದು. ಬಸವಾದಿ ಶರಣರ ಹಾದಿಯಲ್ಲಿ ನಡೆಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಬಸವಣ್ಣನವರ ಭಾವಚಿತ್ರ ಕಚೇರಿಯಲ್ಲಿ ಇಡಬೇಕು ಎಂದು ಆದೇಶ ಮಾಡಿದ್ದೇ ನಾನು. ಅಧಿಕಾರಿಗಳಿಗೆ, ಶಾಸಕರಿಗೆ ಬಸವೇಶ್ವರನ ಆದರ್ಶಗಳು ಪ್ರೇರಣೆಯಾಗಲಿ ಎಂದು ಭಾವಚಿತ್ರ ಹಾಕಿಸಿದ್ದೇನೆ. ಆದರೆ ಬಸವಣ್ಣನ ವಿಚಾರಗಳಿಗೆ ಬಿಜೆಪಿಯವರೇ ಎಳ್ಳುನೀರು ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ಹೈಡ್ರಾಮಾ – ಅಧಿಕಾರಿಗಳೇ ಎದುರಲ್ಲೇ ರಸ್ತೆ ಮೇಲೆ ಬಿದ್ದು ಉರುಳಾಡಿದ ಇಓ
ಬಸವಣ್ಣನ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಅವರ ದಾರಿಯಲ್ಲಿ ನಡೆಯುತ್ತಿಲ್ಲ. ನಮಗೆ ಇನ್ನೊಮ್ಮೆ ಅಧಿಕಾರ ಕೊಡಿ. ನುಡಿದಂತೆ ನಡೆಯುತ್ತೇವೆ. ನಾಳೆ ನಮ್ಮ ಪ್ರಣಾಳಿಕೆ ಬಿಡುಗಡೆ ಆಗಲಿದೆ. ಈಗಾಗಲೇ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದಾರೆ. ಬಿಜೆಪಿಯವರು ಜನರ ರಕ್ತ ಹೀರುತ್ತಿದ್ದಾರೆ. ಇಂತಹ ಸರ್ಕಾರ ಬೇಕಾ ಎಂದು ಪ್ರಶ್ನಿಸಿದರು.
200 ಯುನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ, ವಿದ್ಯಾನಿಧಿ ಯೋಜನೆ, ಅನ್ನಭಾಗ ಯೋಜನೆ ಕೊಡುತ್ತೇವೆ. 10 ಕೆಜಿ ಅಕ್ಕಿಯ ಬಗ್ಗೆ ಮೊದಲ ಕ್ಯಾಬಿನೆಟ್ ಸಭೆಯಲ್ಲೇ ನಿರ್ಧಾರ ತೆಗೆದುಕೊಳ್ಳುವೆ. ಡಾ.ಮಹಾಂತೇಶ ಕಡಾಡಿ ಗೆದ್ದ ಮೇಲೆ ಇಲ್ಲಿಗೆ ಬರುತ್ತೇನೆ. ಈ ಸಲ ನಮ್ಮನ್ನು ಗೆಲ್ಲಿಸಿ. ಭಯ ಬಿಟ್ಟು ಆಶೀರ್ವಾದ ಮಾಡಿ. ನಿಮಗೆ ನಾವು ರಕ್ಷಣೆ ಕೊಡುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ದೋಸ್ತಿಗಳ ನಡುವೆ ಜಂಗಿ ಕುಸ್ತಿ – ಬಳ್ಳಾರಿ ಅಖಾಡ ಹೇಗಿದೆ?