ಮಡಿಕೇರಿ: ಭಯೋತ್ಪಾದನೆಗೆ ಉತ್ತೇಜನ ಹಾಗೂ ಸಮಾಜದಲ್ಲಿ ಆ ಶಾಂತಿ ಕದಡುವ ಯಾವುದೇ ಸಂಘಟನೆಯಾದರೂ ಅದನ್ನು ಬ್ಯಾನ್ ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ತಿಳಿಸಿದರು.
ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಹಾಗೂ ಭಯೋತ್ಪಾದನೆಗೆ ಉತ್ತೇಜನ ಕೊಟ್ಟರೇ ಆ ಸಂಘಟನೆಗಳನ್ನು ಬ್ಯಾನ್ ಮಾಡಬಹುದು. ಅದು PFI, FIA, ಭಜರಂಗದಳ (Bajrang Dal) ಆಗಿದ್ದರೂ ನಾವು ಬ್ಯಾನ್ ಮಾಡುತ್ತೇವೆ, ಯಾರು ದೇಶದಲ್ಲಿ ಶಾಂತಿಯನ್ನು ಕದಡಿ, ಭಯೋತ್ಪಾದನೆಗೆ ಬೆಂಬಲ ಕೊಡುತ್ತದೆಯೋ ಅದನ್ನು ನಾವು ಬ್ಯಾನ್ ಮಾಡಬೇಕಾಗುತ್ತದೆ, ನಮ್ಮ ದೇಶವು ಸರ್ವಜನಾಂಗದ ಶಾಂತಿ ತೋಟವಾಗಿದೆ. ಆದರೆ ಇಲ್ಲಿ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ನಕಲು ಮಾಡಿದ್ದಾರೆ: ಕುಮಾರಸ್ವಾಮಿ
Advertisement
Advertisement
ಇಂದು ಚಾಣಕ್ಯ ಅಮಿತ್ ಶಾ ಇತರರು ರಾಜ್ಯಕ್ಕೆ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಯಾವತ್ತೂ ಬಿಜೆಪಿ ಸ್ಪಷ್ಟವಾಗಿ ಬಹುಮತ ಬಂದಿಲ್ಲ. ದೇಶದಲ್ಲಿ ತೆಗೆದುಕೊಂಡರೂ ಅವರಿಗೆ 3 ರಾಜ್ಯದಲ್ಲಿ ಮಾತ್ರ ಸ್ಪಷ್ಟ ಬಹುಮತ ಬಂದಿದೆ. ಬಾಕಿ ಎಲ್ಲಾ ರಾಜ್ಯದಲ್ಲೂ ಖರೀದಿ ಹಾಗೂ ಕುದುರೆ ವ್ಯಾಪಾರ ಮಾಡಿ ಸರ್ಕಾರ ಮಾಡುತ್ತಿದ್ದಾರೆ. ಆದ್ದರಿಂದ ಧರ್ಮ ಆಧಾರಿತ ರಾಜಕಾರಣ ಕಾಂಗ್ರೆಸ್ ಪಕ್ಷ ಮಾಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ತಂದೆ-ಮಗ ಆಯ್ತು, ಇದೀಗ ಅವರ ಮಗ: ರಾಮನಗರದಲ್ಲಿ ಸುಮಲತಾ ವಾಗ್ದಾಳಿ