ಮೈಸೂರು: ದಕ್ಷಿಣ ಭಾರತದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ (BJP) ಅಧಿಕಾರಕ್ಕೆ ಬರಲ್ಲ. ಹಿಂದೆ ನಾವು ಕುಮಾರಸ್ವಾಮಿ ಅಂತಹವರ ಸಹಾಯದಿಂದ ಅಧಿಕಾರಕ್ಕೆ ಬಂದಿರೋದು. ನೀವು ಇಲ್ಲಿ ಹೊಸದಾಗಿ ಹೇಳುವುದು ಏನೂ ಇಲ್ಲ. ಹೊಸದಾಗಿ ಹೇಳುವುದು ಏನಾದರೂ ಇದ್ದರೆ ಕಳ್ಳತನ ಮಾಡುವುದನ್ನು ಹೇಳಿಕೊಡಬೆಕು ಅಷ್ಟೆ. ನಿಮ್ಮ ತತ್ವ ಸಿದ್ಧಾಂತಗಳಿಂದ ಯಾವುದೇ ಕಾರಣಕ್ಕೂ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ (H.Vishwanath) ಕಿಡಿಕಾರಿದರು.
ಮೈಸೂರಿನ (Mysuru) ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಬಿಜೆಪಿ ಕಸದ ತೊಟ್ಟಿಯಾಗಿದೆ. ಮೋದಿಯವರು (Narendra Modi) ಕರ್ನಾಟಕಕ್ಕೆ ಬಂದಿದ್ದಾರೆ. ಭಾನುವಾರ ಮೈಸೂರಿಗೆ ಬಂದು ಕಸದ ತೊಟ್ಟಿಯಾಗಿರುವ ಕರ್ನಾಟಕ ಬಿಜೆಪಿಯನ್ನು ಸ್ವಚ್ಛಗೊಳಿಸಿ ಎಂದು ಮೋದಿಯವರಿಗೆ ಮನವಿ ಮಾಡಿದರು. ಕರ್ನಾಟಕ ಸರ್ಕಾರ ಮೀಸಲಾತಿಯ (Reservation) ಅರ್ಥವನ್ನೇ ಹಾಳು ಮಾಡಿದೆ. ಎಸ್ಸಿ (SC) ಹಾಗೂ ಎಸ್ಟಿಗಳಿಗೆ (ST) ಸುಳ್ಳು ಹೇಳಿ ಮೋಸ ಮಾಡಿದ್ದೀರಿ. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಎಷ್ಟು ಬಾರಿ ಚಾಟಿ ಏಟು ಕೊಟ್ಟಿದೆ. ಜಟ್ಕಾ ಕಟ್, ಹಲಾಲ್ ಎಂದು ಹೇಳುತ್ತೀರಾ. ಅದರಿಂದ ಜನರಿಗೆ ಏನು ಉಪಯೋಗ? ಮೋದಿಯವರೇ ಇದಕ್ಕೆಲ್ಲಾ ಉತ್ತರ ಕೊಡಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸನ್ ಸ್ಟ್ರೋಕ್ – ಪ್ರಚಾರಕ್ಕೆ ತೆರಳುವಾಗ ದಿಢೀರನೆ ಕುಸಿದು ಬಿದ್ದ ಸಿದ್ದರಾಮಯ್ಯ
ನಡ್ಡಾ (J.P.Nadda) ಬಿಜೆಪಿಗೆ ವೋಟ್ ಹಾಕದಿದ್ದರೆ ಮೋದಿ ಆಶೀರ್ವಾದ ಸಿಗಲ್ಲ ಎಂದು ಹೇಳುತ್ತಾರೆ. ಸ್ವಾಮಿ ನಮಗೆ ಮೋದಿ ಆಶೀರ್ವಾದ ಬೇಡ. ನಮಗೆ ಬಸವಣ್ಣ, ಕನಕದಾಸ, ಕುವೆಂಪು, ನಾರಾಯಣ ಗುರು ಅವರಂತಹ ಆಶೀರ್ವಾದ ಬೇಕು. ನಡ್ಡಾ ಅವರ ದಡ್ಡತನದ ಹೇಳಿಕೆಗಳನ್ನು ನಿಲ್ಲಿಸಬೇಕು. ಅಮಿತ್ ಶಾ (Amit Shah) ಅವರು ಕಾಂಗ್ರೆಸ್‌ಗೆ (Congress) ವೋಟ್ ಹಾಕಿದರೆ ದಂಗೆ ಏಳುತ್ತೆ ಎಂದು ಹೇಳುತ್ತಾರೆ. ಛೇ, ಇವರ ಬಾಯಲ್ಲಿ ದಂಗೆ ಪದ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ – ಕನ್ನಡದಲ್ಲೇ ಮೋದಿ ಘೋಷಣೆ
ಮೋದಿಯವರೇ ರಾಜ್ಯಕ್ಕೆ ಏನು ಕೊಡುತ್ತೀರಾ ಎನ್ನುವುದನ್ನು ಹೇಳಿ. ದಯಮಾಡಿ ಕರ್ನಾಟಕ ಬಿಜೆಪಿ ಸರಿ ಮಾಡಿ. ಹಿಂದಿ ಹೇರಿಕೆ ಮಾಡಬೇಡಿ. ನಮ್ಮ ನಂದಿನಿ ಹೊತ್ತುಕೊಂಡು ಹೋಗಬೇಡಿ. ರಾಜ್ಯಕ್ಕೆ ನೀಡುವ ಕೊಡುಗೆಯ ಬಗ್ಗೆ ಹೇಳುವುದರ ಜೊತೆಗೆ ಬಿಜೆಪಿಯನ್ನು ಸರಿ ಮಾಡಿ ಹೋಗಿ. ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ನಾಯಕರು ತಾತ್ವಿಕ ಟೀಕೆಗಳನ್ನು ಮಾಡಿ. ತೀರಾ ವೈಯಕ್ತಿಕ ಟೀಕೆಗಳನ್ನು ಮಾಡಬೇಡಿ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: 2 ವರ್ಷ 10Kg ಅಕ್ಕಿ, 40 ಲಕ್ಷ ಮನೆಗೆ ನೀರು, ರೈತರಿಗೆ ನೆರವು ಕೊಟ್ರು ಮೋದಿ – ಬೊಮ್ಮಾಯಿ ಗುಣಗಾನ