ಸಪ್ಪೆಯಾದ್ರಾ ಮೂಲ ಬಿಜೆಪಿ ಸಚಿವರು – ಪಕ್ಷದಲ್ಲಿ ಈಗ ಪ್ರಬಲರು ಯಾರು?

ಬೆಂಗಳೂರು: ಸಂಘಟನೆಯಲ್ಲೂ ಸದ್ದಿಲ್ಲ, ರಾಜಕೀಯ ಗುದ್ದಾಟದಲ್ಲೂ ಮುಂದಿಲ್ಲ. ವಲಸಿಗರಿಂದಲೇ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಮೇಲೆ ಬ್ರಹ್ಮಾಸ್ತ್ರ. ನಿತ್ಯ ಅವರದ್ದೇ ಕಾದಾಟ. ಇದು ಬಿಜೆಪಿಯ (BJP) ಎಲೆಕ್ಷನ್ ವಾರ್ ಫೀಲ್ಡ್ ನ ಸದ್ಯದ ಪರಿಸ್ಥಿತಿ. ಈ ಬಗ್ಗೆ ಬಿಜೆಪಿಯಲ್ಲಿ ಯಾರು ಪ್ರಬಲರು ಎಂಬ ಚರ್ಚೆಶುರುವಾಗಿದೆ.
ಮೂಲ ಬಿಜೆಪಿ ಸಚಿವರು (Old BJP Leaders) ಸಪ್ಪೆ ಸಪ್ಪೆ. ಎಲ್ಲಿಯೂ ಆಕ್ರಮಣಕಾರಿ ದಾಳಿ ಇಲ್ಲ ಎಂದು ಪಕ್ಷದೊಳಗೆ ಅಸಮಾಧಾನ ಎದ್ದಿದೆ. ಸಚಿವ ಮಾಧುಸ್ವಾಮಿ (Madhuswamy) ನಾವು ವಿರೋಧಿಗಳ ಹೇಳಿಕೆಯನ್ನು ಬಲವಾಗಿ ಖಂಡಿಸಬೇಕು. ಇಲ್ಲದೇ ಇದ್ದರೆ ಅದೇ ಸತ್ಯ ಎನ್ನುವ ಮಾತು ಬರಬಹುದು. ಆದರೆ ನಮ್ಮ ಪಕ್ಷದಲ್ಲಿ ಆಕ್ರಮಣಕಾರಿ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಮಾಧುಸ್ವಾಮಿ ಹೇಳಿದ ಆ ಮಾತಿನಿಂದ ಪಕ್ಷದಲ್ಲಿ ಮತ್ತೆ ಈ ವಿಚಾರ ಈಗ ಚರ್ಚೆ ಆಗುತ್ತಿದೆ. ಕಾಂಗ್ರೆಸ್ಸಿಗರನ್ನು (Congress) ಕೆಣಕುವುದರಲ್ಲಿ ವಲಸಿಗರೇ ಮುಂಚೂಣಿಯಲ್ಲಿದ್ದಾರೆ. ಸುಧಾಕರ್, ರಮೇಶ್ ಜಾರಕಿಹೊಳಿ ಮಾತಿಗೆ ಕಾಂಗ್ರೆಸ್ ಕೆಂಡವಾಗಿ ಪ್ರತಿಕ್ರಿಯೆ ನೀಡುತ್ತದೆ. ಆದರೆ ಉಳಿದ ಸಚಿವರು ಕಾಂಗ್ರೆಸ್ ಕೆರಳಿಸುವ ಹಂತಕ್ಕೆ ತಲುಪುವುದೇ ಇಲ್ಲ ಎಂಬ ಅಸಮಾಧಾನ ಇದೆ ಎನ್ನಲಾಗಿದೆ.
ಸರ್ಕಾರದ ವಿರುದ್ಧ ಕಾಂಗ್ರೆಸ್ ತಿರುಗಿ ಬಿದ್ದಾಗಲೂ ಮೂಲ ಬಿಜೆಪಿ ಸಚಿವರು ದಂಡಾಗಿ ಮುಗಿಬೀಳಲಿಲ್ಲ. ಪಕ್ಷದದ ಬಗ್ಗೆ, ಆರ್‌ಎಸ್‌ಎಸ್ (RSS) ಬಗ್ಗೆ ಮಾತನಾಡಿದಾಗಲೂ ರಾಜಕೀಯ ದಾಳಿ ಮಾಡಲಿಲ್ಲ. ಬಹಳಷ್ಟು ಸಚಿವರು ಸರ್ಕಾರವನ್ನೂ ಸಮರ್ಥಿಸಲ್ಲ, ಪಕ್ಷವನ್ನೂ ಸಮರ್ಥಿಸಲ್ಲ ಎಂಬ ಆರೋಪ ಇದೆ. ಹೀಗಾಗಿ ಪಕ್ಷದ ವೇದಿಕೆಯಲ್ಲೇ ಕೆಲ ಸಚಿವರ ನಡವಳಿಕೆಯ ವಿರುದ್ಧ ಅಸಮಾಧಾನ ವ್ಯಕ್ತವಾಗ್ತಿದೆ ಎನ್ನಲಾಗಿದೆ. ಇದನ್ನೂ ಓದಿ: ಅಲ್ಲಿ ಟಾರ್ಗೆಟ್ ಡಿಕೆಶಿ, ಇಲ್ಲಿ ಟಾರ್ಗೆಟ್ ಸಿದ್ದರಾಮಯ್ಯ- ಏನಿದು ಬಿಜೆಪಿ ತಂತ್ರ?
ಸಚಿವರ ತಂಡ ವಾರ್ ಫೀಲ್ಡ್ ಸಮಯದಲ್ಲಿ ಸಪ್ಪೆಯಾದರೆ ನಷ್ಟ ಖಂಡಿತ ಎಂಬ ಅಭಿಪ್ರಾಯ ಪಕ್ಷದಲ್ಲಿ ವ್ಯಕ್ತವಾಗಿದೆ. ಹೀಗಾಗಿ ಮೂಲ ಬಿಜೆಪಿ ಸಚಿವರು ಆಕ್ರಮಣಕಾರಿಯಾಗಿ ಫೀಲ್ಡ್‌ಗೆ ಇಳಿಯುತ್ತಾರಾ? ಇಲ್ಲ ವಲಸಿಗರೇ ಎದುರಿಸಬೇಕಾ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k