ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿ (BJP) ತೊರೆದು ಕಾಂಗ್ರೆಸ್ (Congress) ಸೇರಿದ ಬಳಿಕ ಪಕ್ಷದಲ್ಲಿ ಉಂಟಾಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J.P Nadda) ಮುಂದಾಗಿದ್ದಾರೆ.
Advertisement
ಬಿಜೆಪಿ ವಿರುದ್ಧ ಉತ್ತರ ಕರ್ನಾಟಕ ಭಾಗದಲ್ಲಿ ಅತೀ ದೊಡ್ಡ ಹೊಡೆತ ಕೊಡಲು ಮುಂದಾಗಿರುವ ಶೆಟ್ಟರ್ ನಡೆಗೆ ಬಿಜೆಪಿ ವಲಯದಲ್ಲಿ ಗಲಿಬಿಲಿ ಶುರುವಾಗಿದ್ದು, ಇದಕ್ಕೆ ಮುಲಾಮು ಹಚ್ಚಲು ನಡ್ಡಾ ಮಂಗಳವಾರ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಈಗಾಗಲೇ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿರುವ ಅವರು ಮುನಿಸಿಕೊಂಡಿರುವ ಲಿಂಗಾಯತ ಸಮುದಾಯದ ಅಸಮಾಧಾನವನ್ನ ಶಮನಮಾಡಲು ಹೊಸದೊಂದು ತಂತ್ರಕ್ಕೆ ಮುಂದಾಗಿದ್ದಾರೆ. ನಗರದಲ್ಲಿ ಎರಡು ದಿನಗಳ ಕಾಲ ಉಳಿದುಕೊಳ್ಳಲಿರುವ ಅವರು ವಿವಿಧ ವಿಷಯಗಳ ಕುರಿತು ಪಕ್ಷದ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಇದನ್ನೂ ಓದಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನ ಬರ್ಬರ ಹತ್ಯೆ
Advertisement
Advertisement
ಹುಬ್ಬಳ್ಳಿ (Hubballi), ಧಾರವಾಡ (Dharwad) ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ಬಿವಿಬಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ವಿವಿಧ ಸಂಘ ಸಂಸ್ಥೆಗಳು, ಉದ್ಯಮಿಗಳು, ಶಿಕ್ಷಕರ ಸಂಘಟನೆ ಹಾಗೂ ಯುವಕರೊಂದಿಗೆ ನಡ್ಡಾ ಸಂವಾದ ನಡೆಸಿದ್ದಾರೆ. ಹಾಗೂ ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ.
Advertisement
ಜಗದೀಶ್ ಶೆಟ್ಟರ್ ಕಾಂಗ್ರೆಸ್‍ನಿಂದ ಪ್ರತಿನಿಧಿಸುವ ಸೆಂಟ್ರಲ್ ಕ್ಷೇತ್ರ ಅಷ್ಟೇ ಅಲ್ಲದೆ ಜಿಲ್ಲೆಯ ಏಳೂ ಕ್ಷೇತ್ರ ಹಾಗೂ ಶೆಟ್ಟರ್ ಪ್ರಭಾವ ಬೀರುವ ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳಲ್ಲಿ ಯಾವುದೇ ಪ್ರಭಾವ ಬೀರದಂತೆ ಬಿಜೆಪಿ ಪಡೆಯನ್ನು ಸಜ್ಜು ಮಾಡಿದ್ದಾರೆ. ಇದನ್ನೂ ಓದಿ: ಮತ್ತೊಂದು ವಿಕೆಟ್ ಪತನ – ಆಯನೂರು ಮಂಜುನಾಥ್ ಬಿಜೆಪಿಗೆ ಗುಡ್ ಬೈ