ಬೆಂಗಳೂರು: ವಿಧಾನಸಭೆ ಚುನಾವಣೆ (Assembly Election) ಸಮೀಪ ಬಿಜೆಪಿ (BJP) ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಚುನಾವಣೆ ಹೊತ್ತಿಗೆ ಪಕ್ಷದ ಒಳಗಿನ ಹಾಗೂ ಹೊರಗಿನ ಗೊಂದಲಗಳಿಗೆ ತೆರೆ ಎಳೆಯಲು ವರಿಷ್ಠರು ಕಸರತ್ತು ನಡೆಸುತ್ತಿದ್ದಾರೆ. ಮುಖ್ಯವಾಗಿ ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಹಾಗೂ ಅವರ ಪುತ್ರ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರರ (BY Vijayendra) ವಿಚಾರದಲ್ಲಿ ಈಗಿಂದಲೇ ಎಚ್ಚೆತ್ತುಕೊಂಡು ಕೆಲವೊಂದು ಮುಂಜಾಗ್ರತಾ ನಡೆಗಳನ್ನು ಬಿಜೆಪಿ ವರಿಷ್ಠ ಮಂಡಳಿ ಪ್ರದರ್ಶಿಸಿದೆ.
Advertisement
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿಚಾರದಲ್ಲಿ ಈಗಾಗಲೇ ಆಗಿ ಹೋದ ಒಂದಷ್ಟು ಎಡವಟ್ಟುಗಳಿಗೆ ಚುನಾವಣೆ ಮುನ್ನವೇ ಮದ್ದು ಅರೆಯಲಾಗಿದೆ. ಯಡಿಯೂರಪ್ಪ, ವಿಜಯೇಂದ್ರ ಕಡೆಗಣನೆ ಆರೋಪಕ್ಕೆ ತೆರೆ ಎಳೆಯುವ ಪ್ರಯತ್ನದಲ್ಲಿ ವರಿಷ್ಠರು ಬಹುತೇಕ ಯಶಸ್ಸಾಗಿದ್ದಾರೆ. ಈಗಾಗಲೇ ಬಿಎಸ್‌ವೈ ಅವರಿಗೆ ರಾಜ್ಯ ಬಿಜೆಪಿಯಲ್ಲಿ ಅಗ್ರ ಪ್ರಾಧಾನ್ಯತೆ ಮರಳಿಸುವಂತಹ ಕಸರತ್ತು ನಡೆಸಲಾಗಿದೆ. ಇದನ್ನೂ ಓದಿ: ಹೆಚ್‌ಡಿಕೆಯ ಬ್ರಾಹ್ಮಣ ಸಿಎಂ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ: ಬಿಎಸ್‌ವೈ
Advertisement
ಪಕ್ಷದ ಎಲ್ಲಾ ವೇದಿಕೆಗಳಲ್ಲೂ ಯಡಿಯೂರಪ್ಪಗೆ ಮೊದಲ ಪಂಕ್ತಿ ಗೌರವ ಸಿಗುತ್ತಿದೆ. ಯಡಿಯೂರಪ್ಪ ವಿಚಾರದಲ್ಲಿ ಯಾರೂ ಅನಗತ್ಯ ನಡೆ ತೋರಬಾರದು, ಅವರ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೂ ಹೈಕಮಾಂಡ್ ತಾಕೀತು ಮಾಡಿದೆ. ಇತ್ತೀಚಿನ ಎಲ್ಲಾ ಕಾರ್ಯಕ್ರಮ, ಸಭೆಗಳಲ್ಲೂ ಯಡಿಯೂರಪ್ಪ ಅವರನ್ನು ಹೈಲೈಟ್ ಮಾಡಲಾಗುತ್ತಿದೆ.
Advertisement
Advertisement
ಬಿಎಸ್‌ವೈ ಜೊತೆಗೆ ಅವರ ಪುತ್ರ ವಿಜಯೇಂದ್ರ ಅವರಿಗೂ ಈಗ ಪ್ರಾಮುಖ್ಯತೆ ನೀಡಿ ಮಹತ್ವದ ಹೊಣೆ ವಹಿಸಲಾಗಿದೆ. ಚುನಾವಣೆ ಸಮೀಪ ಬಿವೈ ವಿಜಯೇಂದ್ರ ಅವರಿಗೆ ಮಹತ್ವದ ಸಂಘಟನಾತ್ಮಕ ಜವಾಬ್ದಾರಿ ಕೊಡಲಾಗಿದೆ. ಪಕ್ಷದ 7 ಮೋರ್ಚಾಗಳ ಸಮಾವೇಶಗಳ ಆಯೋಜನೆಗೆ ವಿಜಯೇಂದ್ರ ಅವರೇ ಲೀಡರ್. ಮೋರ್ಚಾಗಳ ಸಮಾವೇಶಗಳ ಆಯೋಜನೆಯ ಸಂಚಾಲಕ ಸ್ಥಾನಕ್ಕೆ ವಿಜಯೇಂದ್ರರನ್ನು ನೇಮಕ ಮಾಡಲಾಗಿದೆ. ಕೆಲ ತಿಂಗಳ ಹಿಂದೆ ವಿಜಯೇಂದ್ರ ಅವರ ವಿಚಾರದಲ್ಲಿ ಕೆಲ ವ್ಯತಿರಿಕ್ತ ನಡೆಗಳನ್ನು ಪ್ರದರ್ಶಿಸಲಾಗಿತ್ತು. ಆದರೆ ಯಾವಾಗ ವಿಪಕ್ಷಗಳು ಇದನ್ನೇ ಒಂದು ಪ್ರಬಲ ಅಸ್ತ್ರವಾಗಿ ಮಾಡಿಕೊಂಡು ಬಿಜೆಪಿ ವಿರುದ್ಧ ಟೀಕಾ ಪ್ರಹಾರಗಳನ್ನು ಮುಂದುವರಿಸಿತೋ ಆಗ ಸಂಭಾವ್ಯ ಅಪಾಯಗಳನ್ನು ಅರ್ಥ ಮಾಡಿಕೊಂಡ ಬಿಜೆಪಿ ಹೈಕಮಾಂಡ್ ಗೊಂದಲಗಳಿಗೆ ತೆರೆ ಎಳೆಯುವ ಕಸರತ್ತು ನಡೆಸಿದೆ.
ಯಡಿಯೂರಪ್ಪ ಅವರಿಗೆ ಬಹುಪರಾಕ್, ಪುತ್ರ ವಿಜಯೇಂದ್ರ ಅವರಿಗೆ ಮೋರ್ಚಾ ಸಮಾವೇಶಗಳ ಉಸ್ತುವಾರಿ ಪಟ್ಟ. ಹೀಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿಚಾರದಲ್ಲಿ ಹೈಕಮಾಂಡ್ ಪಾಸಿಟಿವ್ ನಡೆ ತೋರಿದೆ. ಬಿಜೆಪಿ ಹೈಕಮಾಂಡ್‌ನ ಈ ನಡೆಯ ಹಿಂದೆ ರಾಜಕೀಯ ತಂತ್ರಗಾರಿಕೆಯೂ ಇದೆ. ಎಲೆಕ್ಷನ್ ವೇಳೆ ಆಗುವ ಡ್ಯಾಮೇಜ್ ಕಂಟ್ರೋಲ್ ಮಾಡುವ ತಂತ್ರವೂ ಅಡಗಿದೆ. ಅಪ್ಪ-ಮಗನಿಗೆ ಅಗ್ರ ಮಾನ್ಯತೆ ಮೂಲಕ ಲಿಂಗಾಯತ ಮತ ಬ್ಯಾಂಕ್ ಚದುರದಂತೆ ತಡೆಯುವ ಉದ್ದೇಶವೂ ಇದೆ. ಅಷ್ಟೇ ಅಲ್ಲದೇ, ವೀರಶೈವ ಲಿಂಗಾಯತ ಸಮುದಾಯದೊಳಗಿದ್ದ ಗೊಂದಲವೂ ನಿವಾರಣೆ ಮಾಡುವ ಪ್ರಯತ್ನ ಇದಾಗಿದೆ. ಇದರಿಂದ ವಿಪಕ್ಷಗಳ ಜಾತಿ ಅಸ್ತ್ರಗಳೂ ಠುಸ್ ಆದಂತಾಗಲಿದೆ. ಈ ಮೂಲಕ ಒಂದೇ ಕಲ್ಲಿಗೆ ಎರಡು ಹಣ್ಣುಗಳನ್ನು ಬಿಜೆಪಿ ಹೈಕಮಾಂಡ್ ಉದುರಿಸಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ 5 ಹೊಸ ಟ್ರಾಫಿಕ್ ಪೊಲೀಸ್ ಠಾಣೆ: ಬೊಮ್ಮಾಯಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k