ಶಿವಮೊಗ್ಗ: ಬಿಜೆಪಿ (BJP) ಸರ್ಕಾರ ಭ್ರಷ್ಟಾಚಾರದಲ್ಲಿ (Corruption) ತೊಡಗಿದೆ. ಪಿಎಸ್‌ಐ (PSI) ಹಾಗೂ ಎಂಜಿನಿಯರ್ ನೇಮಕಾತಿ ಸೇರಿದಂತೆ ಹಲವು ಹಗರಣಗಳು ನಡೆದಿದೆ. ಪ್ರತಿಯೊಂದರಲ್ಲೂ ಈ ಸರ್ಕಾರದ ಅಧಿಕಾರಿಗಳಿಗೆ ಲಂಚದ ರುಚಿ ಹತ್ತಿದೆ ಎಂದು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಶಿವಮೊಗ್ಗದ (Shivamogga) ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಂಚದ ಆರೋಪ ಜನರ ನಿದ್ದೆಗೆಡಿಸಿದೆ. ಒಳ್ಳೆಯ ಆಡಳಿತ ಕೊಡುತ್ತಾರೆ, ಒಳ್ಳೆಯದು ಆಗುತ್ತದೆ ಎಂಬ ಅಭಿಪ್ರಾಯ ಎಲ್ಲರಿಗೂ ಇದೆ. ಗುತ್ತಿಗೆ ಸಂಘದವರು ರಾಷ್ಟ್ರಪತಿ, ಪ್ರಧಾನಮಂತ್ರಿ, ಲೋಕಾಯುಕ್ತಕ್ಕೆ ದೂರು ಕೊಟ್ಟರು ಏನೂ ಪ್ರಯೋಜನ ಇಲ್ಲ. ಮೋದಿ (Narendra Modi) ಯಾವಾಗಲೂ ಸ್ವಚ್ಛ ಆಡಳಿತ ಕೊಟ್ಟಿದ್ದೇವೆ ಎನ್ನುತ್ತಾರೆ. ಪ್ರತೀ ಸಭೆಯಲ್ಲಿ ಮೇ ಖಾವುಂಗ, ಮೇ ಖಾನೇದೂಂಗ ಎನ್ನುತ್ತಾರೆ. ಆದರೆ ತಿನ್ನುವವರು ಅವರ ಪಕ್ಕದಲ್ಲೇ ಕುಳಿತಿದ್ದಾರೆ. ಆದರೂ ಕಾಂಗ್ರೆಸ್‌ಗೆ (Congress) ಬೈಯೋದು ಬಿಡಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಸ್ಪಷ್ಟವಾಗಿ ಕನ್ನಡ ಮಾತಾಡಿ ಬೇಷ್ ಎನಿಸಿಕೊಂಡ ಯೋಗಿ ಆದಿತ್ಯನಾಥ್
Advertisement
Advertisement
ನಾನು ಪ್ರಚಾರಕ್ಕೆ ಅನೇಕ ಜಿಲ್ಲೆಗಳಿಗೆ ಹೋಗುತ್ತಿದ್ದೇನೆ. ಅನೇಕ ಕಡೆ ಒಳ್ಳೆಯ ವಾತಾವರಣವಿದೆ. ಜನರೂ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ರಾಜ್ಯದಲ್ಲಿ ಈ ಚುನಾವಣೆ ಬಹಳ ಮಹತ್ವದ ಚುನಾವಣೆ. ಹಿಂದೆ ಕೆಲಸ ಮಾಡಿರುವುದು ಜನರಿಗೆ ಗೊತ್ತಿದೆ. ಇಂದಿನ ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ, ಸರ್ಕಾರದ ಆಡಳಿತ ಯಾವ ರೀತಿ ನಡೆದಿದೆ ಎಂಬುದು ಗೊತ್ತಿದೆ. ಈ ಸರ್ಕಾರ ರಚನೆ ಆಗಿರುವುದು ಹೇಗೆ ಎಂದು ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೋದಿ ಸಿದ್ಧರಿದ್ರೆ ಅವರೊಂದಿಗೆ ಓಟದ ಸ್ಪರ್ಧೆಗೆ ನಾನು ರೆಡಿ: ಸಿದ್ದರಾಮಯ್ಯ