ಬೆಳಗಾವಿ: ಟಿಕೆಟ್ ಹಂಚಿಕೆಯ ಬಳಿಕ ಬೆಳಗಾವಿ ಬಿಜೆಪಿಯಲ್ಲಿ (Belagavi BJP) ಭುಗಿಲೆದ್ದ ಭಿನ್ನಮತ ಶಮನಕ್ಕೆ ಬಿಜೆಪಿ ಹೈಕಮಾಂಡ್ (High Command) ಹರಸಾಹಸ ಮಾಡುತ್ತಿದೆ.
ಇಂದು ಬೆಳಗಾವಿಗೆ ಧಾವಿಸಿದ ಧಮೇಂದ್ರ ಪ್ರಧಾನ್, ಮನ್ಸೂಖ್ ಮಾಂಡವಿಯಾ ಸೇರಿ ಐವರು ನಾಯಕರ ತಂಡ ಬಿಜೆಪಿ ಬಿಡಲು ಮುಂದಾದ ಟಿಕೆಟ್ ವಂಚಿತರನ್ನು ಓಲೈಸಲು ನೋಡಿದೆ. ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ, ಮಾರುತಿ ಅಷ್ಟಗಿ ಸೇರಿ ಹಲವರ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನೊಂದು ಕಡೆ ಬಿಎಲ್ ಸಂತೋಷ್ ಅವರನ್ನು ಅನಿಲ್ ಬೆನಕೆ ಭೇಟಿ ಮಾಡಿದ್ದಾರೆ.
Advertisement
Advertisement
ಬೆಂಗಳೂರಿಗೆ ಬರುವುದಕ್ಕೂ ಮೊದಲು ಮಾತಾಡಿದ ಶಾಸಕ ಅನಿಲ್ ಬೆನಕೆ, ಮತ್ತೆ ತಮಗೆ ಬಿಜೆಪಿ ಟಿಕೆಟ್ ಸಿಗಬಹುದು ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆಯನ್ನು ಭೇಟಿಯಾದ ಸೊಗಡು ಶಿವಣ್ಣ – ತುಮಕೂರಲ್ಲೂ ಅಭ್ಯರ್ಥಿ ಬದಲಾವಣೆ?
Advertisement
ಟಿಕೆಟ್ ಬದಲಾವಣೆ ಮಾಡದೇ ಇದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮಹಾದೇವಪ್ಪ ಯಾದವಾಡ ನಿರ್ಧಾರ ಮಾಡಿದ್ದಾರೆ. ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಮಹಾದೇವಪ್ಪ ಯಾದವಾಡ ಮುಂದಾಗಿದ್ದು ಅವರನ್ನು ಧರ್ಮೇಂದ್ರ ಪ್ರಧಾನ್ ಮನವೊಲಿಸುತ್ತಾರಾ ಎಂಬದುನ್ನು ಕಾದುನೋಡಬೇಕಿದೆ.