ಮಂಗಳೂರು: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ (Belthangady Vidhanasabha Constituency) ರಾಜಕೀಯವಾಗಿ ವರ್ಣರಂಜಿತವಾದುದು. ಜಾಗತಿಕ ಮಟ್ಟದ ನಾಯಕಿಯಾಗಿದ್ದ ದಿವಂಗತ ಇಂದಿರಾ ಗಾಂಧಿ (Indira Gandhi) ಯವರಿಗೂ ಬೆಳ್ತಂಗಡಿಗೂ ನಿಕಟ ನಂಟಿದೆ. ಇದಕ್ಕೆ ಕಾರಣ ಇದು ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಭಾಗವಾಗಿದ್ದಿದ್ದು.
Advertisement
ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದ ಬೆಳ್ತಂಗಡಿ ಮಾತ್ರ 2009ರವರೆಗೂ ಚಿಕ್ಕಮಗಳೂರು ಸಂಸದೀಯ ಕ್ಷೇತ್ರದ ಅಂಗವಾಗಿದ್ದು, ಕ್ಷೇತ್ರ ಮರುವಿಂಗಡಣೆಯಾದ ಬಳಿಕ 2009ರಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಸೇರಿತು. 1977ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (Congress) ದೇಶದಲ್ಲಿ ಅಧಿಕಾರ ಕಳೆದುಕೊಂಡು ರಾಯ್‍ಬರೇಲಿಯಲ್ಲಿ ಇಂದಿರಾ ಗಾಂಧಿ ಸೋತರು. ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರ್ಕಾರ ಇಂದಿರಾರನ್ನು ಬಂಧಿಸಿತು. ಈ ವಿದ್ಯಮಾನದ ಬಳಿಕ ಇಂದಿರಾ ಗಾಂಧಿ ಮತ್ತೆ ಲೋಕಸಭೆ ಪ್ರವೇಶಿಸಲು ನಿರ್ಧರಿಸಿದರು. ಕಾಂಗ್ರೆಸ್ ಸಂಸದ ಡಿ.ಬಿ ಚಂದ್ರೇಗೌಡ (D B Chandregowda) ಚಿಕ್ಕಮಗಳೂರು ಸ್ಥಾನಕ್ಕೆ ರಾಜೀನಾಮೆ ನೀಡಿ ನಾಯಕಿ ಇಂದಿರಾ ಗಾಂಧಿಗೆ ಅನುವು ಮಾಡಿಕೊಟ್ಟರು. ಅದರಂತೆ 1978ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರಿನಿಂದ ಕಣಕ್ಕಿಳಿದರು.
Advertisement
Advertisement
ಜನತಾ ಪಾರ್ಟಿಯಿಂದ ವೀರೇಂದ್ರ ಪಾಟೀಲ್ (Veerendra Patil) ಎದುರಾಳಿಯಾದರು. ಚುನಾವಣಾ ಪ್ರಚಾರಕ್ಕೆ ಬಂದಿದ್ದ ಇಂದಿರಾ ಗಾಂಧಿ ಬೆಳ್ತಂಗಡಿ, ಉಜಿರೆಗಳಲ್ಲಿ ಸುತ್ತಾಡಿದ್ದರು. ಆಗ ಇಡೀ ದೇಶದ ಗಮನವನ್ನು ಬೆಳ್ತಂಗಡಿ ಸೇರಿದಂತೆ ಚಿಕ್ಕಮಗಳೂರು ಕ್ಷೇತ್ರ ಸೆಳೆದಿತ್ತು. ಇದೀಗ ಇದೇ ಕ್ಷೇತ್ರ ಕಾಂಗ್ರೆಸ್ ಗೆ ಹೈ ಟೆನ್ಷನ್ ಕ್ಷೇತ್ರವಾಗಿದೆ. ಪ್ರಸ್ತುತ ಕಾಂಗ್ರೆಸ್ ಮುಖಂಡರಾದ ವಸಂತ ಬಂಗೇರ ಮತ್ತು ಗಂಗಾಧರ ಗೌಡ ಇಬ್ಬರೂ ಬಿಜೆಪಿ (BJP), ಜೆಡಿಎಸ್ (JDS) ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಉಂಡವರು. ಗಂಗಾಧರ ಗೌಡ-ಬಂಗೇರ 5 ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮುಖಾಮುಖಿಯಾಗಿದ್ದಾರೆ. ಬಂಗೇರರ ವಿರುದ್ಧ ಗಂಗಾಧರ ಗೌಡರ ಪುತ್ರ ರಂಜನ್ ಗೌಡ ಕೂಡ ಸ್ಪರ್ಧಿಸಿದ್ದರು. ಬಂಗೇರರು ಜೆಡಿಎಸ್‍ನಲ್ಲಿದ್ದಾಗ ಕಾಂಗ್ರೆಸ್‍ನಿಂದ ಹರೀಶ್ ಕುಮಾರ್ ಎದುರಾಳಿಯಾಗಿ ಸ್ಪರ್ಧಿಸಿದ್ದರು. ಆಗ ಎದುರಾಳಿಯಾಗಿದ್ದ ಈ ಎಲ್ಲರೂ ಈಗ ಕಾಂಗ್ರೆಸ್‍ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇದನ್ನೂ ಓದಿ: ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಟಿಕೆಟ್ ಫೈಟ್‍ನ ಲಾಭ ಪಡೆಯಲಿದೆಯೇ ಬಿಜೆಪಿ?
Advertisement
ಕಳೆದ ಚುನಾವಣೆ ಸಂದರ್ಭ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವವರು ಯಾರು ಎಂಬ ಪ್ರಶ್ನೆ ಇತ್ತು. ಪೈಪೋಟಿಗೆ ಹಲವು ಮುಖಗಳಿದ್ದವು. ಈ ಬಾರಿ ಗೊಂದಲಗಳಿಲ್ಲ. ದೆಹಲಿವರೆಗೂ ವರ್ಚಸ್ಸು ವಿಸ್ತರಿಸಿಕೊಂಡು ಸ್ಥಾನ ಗಟ್ಟಿ ಮಾಡಿಕೊಂಡಿರುವ ಶಾಸಕ ಹರೀಶ್ ಪೂಂಜ (Harish Poonja) ಬಿಜೆಪಿಯಿಂದ ಮತ್ತೆ ಕಣಕ್ಕಿಳಿಯುವುದು ಖಚಿತ. ಹಾಗೆಂದು ಪಕ್ಷದಲ್ಲಿ ಬೇರೆ ಆಕಾಂಕ್ಷಿಗಳಿಲ್ಲ ಎಂದಲ್ಲ, ಈ ಹಿಂದೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಆರ್.ಎಸ್.ಎಸ್ (RSS). ಹಿನ್ನೆಲೆಯುಳ್ಳ ಸಂಪತ್ ಬಿ.ಸುವರ್ಣ (Sampath B Suvarna) ಅವರು ತಾವೂ ಆಕಾಂಕ್ಷಿ ಎಂದು ಹೇಳಿದ್ದಾರೆ. ಉಳಿದಂತೆ ಉದ್ಯಮಿ ಬರೋಡ ಶಶಿಧರ್ ಶೆಟ್ಟಿ ಹೆಸರೂ ಕೇಳಿಬರುತ್ತಿದೆ.
ಆದರೆ ಕಾಂಗ್ರೆಸ್‍ನಲ್ಲಿ ಕೆಪಿಸಿಸಿ ಕಾರ್ಯದರ್ಶಿ, ಯುವನಾಯಕ ರಕ್ಷಿತ್ ಶಿವರಾಂ (Rakshit Shivaram) ಗೆ ಬೆಳ್ತಂಗಡಿ ಟಿಕೆಟ್ ನೀಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸಹೋದರ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಪುತ್ರ ರಕ್ಷಿತ್ ಶಿವರಾಂಗೆ ಟಿಕೆಟ್ ನೀಡುವುದನ್ನು ಮಾಜಿ ಶಾಸಕ ವಸಂತ ಬಂಗೇರಾ (vasantha Bangera), ಗಂಗಾಧರ ಗೌಡ (Gangadhar Gowda) ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ದಾಖಲೆ ಬರೆದ ಸುಳ್ಯದ ಎಸ್ ಅಂಗಾರ
ಜೆಡಿಎಸ್ (JDS) ನಲ್ಲಿ ಈವರೆಗೆ ಬೆಳ್ತಂಗಡಿ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಗತಿ ಚರ್ಚೆಗೆ ಬಂದಿಲ್ಲ. ಬಹುತೇಕ ನಾಯಕರು ಬಿಜೆಪಿ, ಕಾಂಗ್ರೆಸ್ ಪಾಳಯದಲ್ಲಿ ಸಮ್ಮಿಳಿತಗೊಂಡಿದ್ದಾರೆ. ಈ ಮಧ್ಯೆ ಎಸ್.ಡಿ.ಪಿ.ಐ. ಈಗಾಗಲೇ ಅಕ್ಬರ್ ಬೆಳ್ತಂಗಡಿಯನ್ನು ಅಭ್ಯರ್ಥಿಯೆಂದು ಘೋಷಿಸಿದೆ. ಹಾಗೆಯೇ ತುಳುನಾಡ ಪಕ್ಷದ ಅಭ್ಯರ್ಥಿಯಾಗಿ ಶೈಲೇಶ್ ಆರ್.ಜೆ (Shailesh R J). ಸ್ಪರ್ಧೆಗೆ ಸಜ್ಜಾಗುತ್ತಿದ್ದಾರೆ. ಬೆಳ್ತಂಗಡಿಯಲ್ಲಿ ಪಕ್ಷಗಳಿಗೇನು ಕಮ್ಮಿ ಇಲ್ಲ ಎಂಬಂತೆ ಸರ್ವೋದಯ ಕರ್ನಾಟಕ ಪಕ್ಷವೂ ಆದಿತ್ಯ ನಾರಾಯಣ ಕಲ್ಲಾಜೆಯನ್ನು ಅಭ್ಯರ್ಥಿಯಾಗಿಸಿದೆ.
ಹರೀಶ್ ಪೂಂಜ- ರಕ್ಷಿತ್ ಶಿವರಾಂ ನಡುವೆ ಹಲವು ಸಾಮ್ಯತೆಗಳಿವೆ. ಇಬ್ಬರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನ ಯುವಕರು. ಹೈಕೋರ್ಟ್ ವಕೀಲರಾಗಿದ್ದ ಹರೀಶ್ ಪೂಂಜ 2018ರ ವಿಧಾನಸಭಾ ಚುನಾವಣೆಗಿಂತ ಕೆಲವರ್ಷ ಮೊದಲು ಕ್ಷೇತ್ರದಲ್ಲಿ ತಿರುಗಾಟ ಆರಂಭಿಸಿ ಜನಪ್ರಿಯರಾದವರು. ದೇವಸ್ಥಾನ ಬ್ರಹ್ಮಕಲಶೋತ್ಸವಗಳು, ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಹಲವು ಹೋರಾಟ ಸಂಘಟಿಸಿದ್ದರು. ರಕ್ಷಿತ್ ಶಿವರಾಂ ಕೂಡ ಹೈಕೋರ್ಟ್ ವಕೀಲ. ಮೂರ್ನಾಲ್ಕು ವರ್ಷಗಳಿಂದ ಕ್ಷೇತ್ರದಲ್ಲಿ ಶಿಕ್ಷಣ, ಸಮಾಜ ಸೇವೆ, ದೇವಸ್ಥಾನಗಳ ಬ್ರಹ್ಮಕಲಶೋತ್ಸವ ಮತ್ತಿತರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್‍ನಿಂದ ಹಲವು ಹೋರಾಟಗಳನ್ನು ಸಂಘಟಿಸುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ಎರಡನೇ ಗೆಲುವಿನ ಕೊಡುಗೆ ನೀಡಲಿದೆಯೇ ಮೂಡುಬಿದಿರೆ ಕ್ಷೇತ್ರ?
ಹರೀಶ್ ಪೂಂಜಾ ಬಂಟ ಸಮುದಾಯಕ್ಕೆ ಸೇರಿದ್ದರೆ, ರಕ್ಷಿತ್ ಶಿವರಾಂ ಬಿಲ್ಲವ ಸಮಾಜಯದ ಯುವಕ. ಈ ಕ್ಷೇತ್ರದಲ್ಲಿ ಅತೀ ಹೆಚ್ಚು ಬಿಲ್ಲವ ಮತದಾರರಿದ್ದು ಕಾಂಗ್ರೆಸ್ ಗೆ ವರದಾನ ಆಗುತ್ತೆ ಅನ್ನೋ ಲೆಕ್ಕಾಚಾರ ಇದ್ರೂ ಬಿಲ್ಲವ ಮತದಾರರು ಹಿಂದುತ್ವ, ಬಿಜೆಪಿ, ಹರೀಶ್ ಪೂಂಜಾ ಅನ್ನುತ್ತಿರೋದು ಬಿಜೆಪಿಗೆ ಲಾಭ ಆಗುತ್ತೆ ಅನ್ನೋ ಲೆಕ್ಕಾಚಾರವೂ ಇದೆ. ಈ ಬಾರಿ ನಾರಾಯಣಗುರು ಪುಸ್ತಕ ವಿವಾದ ಸಡೆರಿದಂತೆ ಹಲವು ವಿಚಾರಗಳಲ್ಲಿ ಬಿಲ್ಲವರನ್ನು ಎದುರು ಹಾಕಿಕೊಂಡಿರುವ ಬಂಟ ಸಮುದಾಯದ ಹರೀಶ್ ಪೂಂಜಾಗೆ ಬಿಲ್ಲವರು ತಕ್ಕ ಉತ್ತರ ನೀಡ್ತಾರೆ ಅನ್ನೋ ಮಾತೂ ಕೇಳಿ ಬರ್ತಿದೆ. ಒಟ್ಟಿನಲ್ಲಿ ಈಗ ಇಬ್ಬರು ಯುವನಾಯಕರ ನಡುವೆ ಸ್ಪರ್ಧೆ ಏರ್ಪಡುವುದು ಖಚಿತವಾಗಿದೆ.