ಬೆಂಗಳೂರು: ರಾಜರಾಜೇಶ್ವರಿ ನಗರದ (RR Nagar) ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಮುನಿರತ್ನ (Munirathna) ಅವರು ಸೋಮವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಬಿಜೆಪಿ (BJP) ಅಭ್ಯರ್ಥಿಯಾಗಿರುವ ಮುನಿರತ್ನ ಅವರು ಇಂದು ಬೆಳಗ್ಗೆ ಮಲ್ಲೇಶ್ವರಂನ ತಿರುಮಲ ತಿರುಪತಿ ದೇವಾಲಯಕ್ಕೆ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬೆಳಗ್ಗೆ ಸಾವಿರಾರು ಕಾರ್ಯಕರ್ತರೊಂದಿಗೆ ಯಶವಂತಪುರದ ಜೆಪಿ ಪಾರ್ಕ್‍ನಿಂದ ರ್ಯಾಲಿ ಹೊರಟು ಆರ್‍ಆರ್ ನಗರದಲ್ಲಿರುವ ಆರ್‍ಓ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿದರು.
ಬಳಿಕ ಮಾತಾನಾಡಿದ ಅವರು, ಮತದಾರ ದೇವರು ಇಲ್ಲಿ ಅಭಿವೃದ್ಧಿಗೆ ಮತ ಹಾಕಿದ್ದಾರೆ. ಈ ಬಾರಿಯೂ ಅಭಿವೃದ್ಧಿಗೆ ಮತ ಹಾಕುತ್ತಾರೆ ಎನ್ನುವ ನಂಬಿಕೆ ಇದೆ. ಮತದಾರ ದೇವರ ಬಳಿ ಮತಭೀಕ್ಷೆ ಬೇಡುತ್ತೇನೆ ಎಂದು ಹೇಳಿದರು.
ಆರ್‌ಆರ್ ನಗರ ಮುಖ್ಯ ರಸ್ತೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ (Congress) ಅಭ್ಯರ್ಥಿಗಳು ಮುಖಾಮುಖಿಯಾದರು. ಅದಾದ ಬಳಿಕ ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ನಾಮಪತ್ರ ಸಲ್ಲಿಸಿದರು. ಇದನ್ನೂ ಓದಿ: 1 ರೂ. ಲಂಚ ಪಡೆದಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ – ಸುಧಾಕರ್
ಇದೇ ವೇಳೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿರುವ ವಿಚಾರವಾಗಿ ಮಾತನಾಡಿದ ಅವರು, ನಾನು ಜಗದೀಶ್ ಶೆಟ್ಟರ್ ಅವರಿಗೆ ಸಲಹೆ ನೀಡುವಷ್ಟು ದೊಡ್ಡ ವ್ಯಕ್ತಿಯಲ್ಲ. ಪಕ್ಷ ಜಗದೀಶ್ ಶೆಟ್ಟರ್‌ಗೆ ಎಲ್ಲವನೂ ನೀಡಿದೆ. ಪ್ರಧಾನಿಗಳೊಂದಿಗೆ ನೇರವಾಗಿ ಮಾತಾನಾಡುವಷ್ಟು ಹಿರಿಯರಾಗಿದ್ದಾರೆ. ಅಮಿತಾ ಶಾ, ನಡ್ಡಾ ಜೊತೆ ನೇರ ಸಂಪರ್ಕ ಇರುವ ವ್ಯಕ್ತಿಯಾಗಿದ್ದರು. ಯಡಿಯೂರಪ್ಪ ಅವರು 224 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸೋದಕ್ಕೆ ಪಣ ತೊಟ್ಟಿದ್ದಾರೆ. ಅವರು ಸಿಎಂ ಆಗಿದ್ದವರು, ಪಕ್ಷ ಇನ್ನೇನು ಕೊಡಬೇಕು ಹೇಳಿದರು. ಇದನ್ನೂ ಓದಿ: 3 ಪಕ್ಷದ ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ