ಬೆಂಗಳೂರು: ಕೋಲಾರ ಕಣದಲ್ಲಿ ಸಿದ್ದರಾಮಯ್ಯ (Siddaramaiah) ವಿರುದ್ಧ ಬಿಜೆಪಿಯು ಸದ್ದಿಲ್ಲದೇ ಭಾರೀ ರಣತಂತ್ರ ಹೆಣೆಯುತ್ತಿದೆ. ಬೂತ್ ಮಟ್ಟದಿಂದಲೇ ಸಿದ್ದರಾಮಯ್ಯಗೆ ಖೆಡ್ಡಾ ತೋಡಲು ಸ್ಕೆಚ್ ರೂಪಿಸಲಾಗಿದೆ.
ರಾಷ್ಟ್ರೀಯ ಬಿಜೆಪಿ (BJP) ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ನೇತೃತ್ವದಲ್ಲಿ ಚುನಾವಣಾ ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಕೋಲಾರದಲ್ಲಿ (Kolara) ಸ್ಥಳೀಯ ಮಟ್ಟದಲ್ಲಿ ಬಲವನ್ನು ವೃದ್ಧಿಸಿಕೊಳ್ಳುವತ್ತಾ ಬಿಜೆಪಿ ಗಮನ ಹರಿಸಿದೆ. ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಸ್ಥಳೀಯ ಮುಖಂಡರ ಸೇರ್ಪಡೆಗೆ ಬಿಜೆಪಿ ತನ್ನ ಬಾಗಿಲನ್ನು ತೆರೆದಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಕಾವು ಪಡೆದ ರಾಜಕೀಯ – ಕನಕಪುರದ ಬಂಡೆ ಮದ್ದೂರಿನಲ್ಲಿ ಸ್ಪರ್ಧೆ?
Advertisement
Advertisement
Advertisement
ಕೋಲಾರದಲ್ಲಿ ಸ್ಥಳೀಯ ನಾಯಕರಿಗೆ ಆಪರೇಷನ್ ಕಮಲ (Operation Kamala) ಮೂಲಕ ಗಾಳ ಹಾಕಲು ತಂತ್ರಗಾರಿಕೆ ಮಾಡಲಾಗಿದೆ. ಜೆಡಿಎಸ್ (JDS) ಮುಖಂಡರೇ ಆಪರೇಷನ್‌ಗೆ ಮುಖ್ಯ ಟಾರ್ಗೆಟ್ ಆಗಿದ್ದಾರೆ ಎನ್ನಲಾಗಿದೆ. ಜೆಡಿಎಸ್ ನಾಯಕರನ್ನು ಆಪರೇಷನ್ ಮಾಡಿದರೆ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಪ್ಲಸ್ ಆಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕೋಲಾರದಲ್ಲಿ ರೂಪಿಸಿರುವ ಒಕ್ಕಲಿಗ ಜಾತಿವ್ಯೂಹ ಲೆಕ್ಕಾಚಾರಕ್ಕೆ ಆಪರೇಷನ್ ಕಮಲವೇ ಅಸ್ತ್ರವಾಗಿದೆ.
Advertisement
ಮೊದಲ ಆದ್ಯತೆ ತೆನೆ ಮುಖಂಡರಾದರೆ, ನಂತರದ ಆದ್ಯತೆ ಕಾಂಗ್ರೆಸ್ (Congress) ಮುಖಂಡರು. ಕೈ-ತೆನೆಯಿಂದ ಯಾರೇ ಬಂದರೂ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ದೆಹಲಿಯಿಂದಲೇ ರಾಜ್ಯ ಘಟಕಕ್ಕೆ ಸೂಚನೆ ಬಂದಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಹಾಲಿ-ಮಾಜಿ ಸದಸ್ಯರನ್ನು ಪಕ್ಷಕ್ಕೆ ಕರೆತರಲು ಆಪರೇಷನ್ ಪ್ಲಾನ್ ರೂಪಿಸಲಾಗಿದೆ. ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ವರ್ತೂರು ಪ್ರಕಾಶ್ (Varthur Prakash) ಅವರಿಗೆ ಇರುವ ಪ್ರಭಾವವನ್ನು ಬಳಸಿಕೊಂಡು ಹಾಲಿ-ಮಾಜಿ ಲೋಕಲ್ ಜನಪ್ರತಿನಿಧಿಗಳಿಗೆ ಗಾಳ ಹಾಕಲಾಗುತ್ತಿದೆ.
ಕಾಂಗ್ರೆಸ್, ಜೆಡಿಎಸ್‌ನಲ್ಲಿ ಅಸಮಧಾನಗೊಂಡವರನ್ನು ಪಕ್ಷಕ್ಕೆ ಸೆಳೆಯುವ ತಂತ್ರ ಹೆಣೆಯಲಾಗಿದೆ. ಆ ಮೂಲಕ ಕೋಲಾರ ಕ್ಷೇತ್ರದಲ್ಲಿ ಸ್ಥಳೀಯವಾಗಿ ಪಕ್ಷ ಸಂಘಟನೆ, ಮುಖಂಡರು, ಕಾರ್ಯಕರ್ತರ ಸಂಖ್ಯೆ ಹೆಚ್ಚಿಸಿಕೊಳ್ಳುವುದು ಬಿಜೆಪಿಯ ಗುರಿಯಾಗಿದೆ. ಆಪರೇಷನ್ ಕಮಲ ಮೂಲಕ ಜೆಡಿಎಸ್ ಮತ್ತು ಕಾಂಗ್ರೆಸ್ ಶಕ್ತಿ ಕುಂದಿಸುವ ಹಿಡನ್ ತಂತ್ರವೂ ಇದರ ಹಿಂದೆ ಇದೆ. ಅಸಮಧಾನಿತರನ್ನು ಸೆಳೆದು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಆಂತರಿಕ ಕಚ್ಚಾಟದ ಲಾಭ ಪಡೆಯಲು ಬಿಜೆಪಿ ಮುಂದಾಗಿದೆ.
ಕಾಂಗ್ರೆಸ್ ವಿರುದ್ಧ ಸಣ್ಣ ವಿರೋಧವೂ ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ಟೀಮ್ ಸಜ್ಜಾಗಿದೆ. ಕಾಂಗ್ರೆಸ್, ಜೆಡಿಎಸ್ ನಾಯಕರ ಬಗ್ಗೆ ಅಸಮಾಧಾನಗೊಂಡ ಸಂಘ ಸಂಸ್ಥೆಗಳು, ಸಂಘಟನೆಗಳು, ಸಮಿತಿ, ಒಕ್ಕೂಟಗಳು, ಹಳ್ಳಿಗಳ ಮೇಲೂ ಬಿಜೆಪಿ ನಾಯಕರು ಗಮನ ಹರಿಸಿದ್ದಾರೆ. ಒಟ್ಟಾರೆ ಈ ಎಲ್ಲ ತಂತ್ರಗಳ ಜಾರಿಗೆ ಪಕ್ಷದ ಮುಖಂಡರಿಗೆ ಜವಾಬ್ದಾರಿಗಳ ಹಂಚಿಕೆ ಮಾಡಲಾಗಿದೆ. ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿಯ ಈ ಮೈಕ್ರೋ ಲೆವೆಲ್ ಸ್ಟ್ರಾಟೆಜಿ ಯಶಸ್ವಿಯಾಗುತ್ತಾ ಎಂಬ ಕುತೂಹಲ ಮೂಡಿಸಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k