ಚಿಕ್ಕಮಗಳೂರು: ರಾಜ್ಯಾದ್ಯಂತ ಮತದಾನ ನಡೆಯುತ್ತಿದ್ದರೆ ಇತ್ತ ಚಿಕ್ಕಮಗಳೂರಿನಲ್ಲಿ ಬಿಜೆಪಿ- ಕಾಂಗ್ರೆಸ್ (BJP- Congress) ಕಾರ್ಯಕರ್ತರ ಮಧ್ಯೆ ಗಲಾಟೆ ನಡೆದಿದೆ.
Advertisement
ಯಾಕೋ, ಹಿಂದುತ್ವದ ಶಾಲು ಕಣೋ, ನಿಮ್ಮ ಅಪ್ಪನ ಮನೆದಾ ಎಂದು ಮತ ಕೇಂದ್ರದ ಮುಂದೆ ಬಿಜೆಪಿ-ಕಾಂಗ್ರೆಸ್ ಮಧ್ಯೆ ಕಲಹ ನಿರತ ಘಟನೆ ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಆವರಣದಲ್ಲಿ ನಡೆದಿದೆ. ಇದನ್ನೂ ಓದಿ: ಮತದಾನ ಮಾಡದೇ ಇದ್ದರೆ ಪ್ರಶ್ನೆ ಮಾಡುವ ಹಕ್ಕು ಇರಲ್ಲ : ಸುಮಲತಾ ಅಂಬರೀಶ್
Advertisement
Advertisement
ಬೆಳಗ್ಗೆಯಿಂದಲೂ ಕೂಡ ಬಿಜೆಪಿ ಕಾರ್ಯಕರ್ತರು ಕೇಸರಿ ಶಲ್ಯಧರಿಸಿ ಮತ ಕೇಂದ್ರದ ಮುಂದೆ ಓಡಾಡುತ್ತಿದ್ದರು. ಬೆಳಗ್ಗಿನಿಂದಲೂ ಕೂಡ ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ತೆಗೆಯುವಂತೆ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡುತ್ತಿದ್ದರು. ಹಾಗಾಗಿ ಸಣ್ಣಪುಟ್ಟ ಕಿರಿಕ್ ಕೂಡ ನಡೆಯುತ್ತಿತ್ತು. ಸ್ಥಳಕ್ಕೆ ಬಂದ ನಗರಸಭೆಯ ಬಿಜೆಪಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಶಲ್ಯ ತೆಗೆಯಿರಿ ಅಂದ ಕಾಂಗ್ರೆಸ್ಸಿಗರಿಗೆ ರಸ್ತೆ ಮಧ್ಯೆಯೇ ಯಾಕೋ ಹಿಂದುತ್ವದ ಶಾಲು ಕಣೋ, ನಿಮ್ಮ ಅಪ್ಪನ ಮನೆದ್ದಾ? ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ಕೂಡ ನಡೆದಿದೆ. ಬಳಿಕ ಬಳಕೆ ಬಂದ ಪೊಲೀಸರು ಎಲ್ಲರನ್ನು ಮತಗಟ್ಟೆ ಕೇಂದ್ರದಿಂದ ದೂರ ಕಳಿಸಿದ್ದಾರೆ. ಕಿರಿಕ್ ಆದ ಬಳಿಕವು ಬಿಜೆಪಿ ಕಾರ್ಯಕರ್ತರು ಕೇಸರಿ ಶಲ್ಯ ಧರಿಸಿ ಓಡಾಡುತ್ತಿದ್ದಾರೆ.