ಬೀದರ್: ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು, ಬೀದರ್ (Bidar) ಜಿಲ್ಲೆಯ 6 ಕ್ಷೇತ್ರಗಳಲ್ಲಿ 4 ಸ್ಥಾನಗಳನ್ನು ಬಿಜೆಪಿ ಗಿಟ್ಟಿಸಿಕೊಂಡಿದೆ. 2 ಕ್ಷೇತ್ರಗಳನ್ನು ಕಾಂಗ್ರೆಸ್ ಗೆದ್ದಿದೆ.
ಬೀದರ್ ಉತ್ತರ: ಕಾಂಗ್ರೆಸ್ ಅಭ್ಯರ್ಥಿ ರಹೀಂ ಖಾನ್ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಪಕ್ಷದ ಸೂರ್ಯಕಾಂತ್ ನಾಗಮಾರಪಳ್ಳಿ ಹಾಗೂ ಬಿಜೆಪಿ ಪಕ್ಷದ ಈಶ್ವರ್ ಸಿಂಗ್ ಠಾಕೂರ್ ಸೋತಿದ್ದಾರೆ.
Advertisement
ಬೀದರ್ ದಕ್ಷಿಣ: ಬಿಜೆಪಿ ಪಕ್ಷದ ಅಭ್ಯರ್ಥಿ ಶೈಲೇಂದ್ರ ಬೆಲ್ದಾಳೆ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದಾರೆ. ಜೆಡಿಎಸ್‌ನಿಂದ ಕ್ಷೇತ್ರದಲ್ಲಿ ಬಂಡೆಪ್ಪ ಖಾಶೆಂಪೂರ್ ಸ್ಪರ್ಧಿಸಿ ಸೋತಿದ್ದಾರೆ.
Advertisement
Advertisement
ಭಾಲ್ಕಿ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ್ ಬಿ ಖಂಡ್ರೆ ಗೆದ್ದಿದ್ದಾರೆ. ಬಿಜೆಪಿಯಿಂದ ಪ್ರಕಾಶ್ ಖಂಡ್ರೆ ಹಾಗೂ ಆಪ್‌ನಿಂದ ತುಕಾರಾಂ ಹಜಾರೆ ನಾರಾಯಣರಾವ್ ಸ್ಪರ್ಧಿಸಿ ಸೋತಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ 4 ಕಾಂಗ್ರೆಸ್, 3 ಕಡೆ ಬಿಜೆಪಿಗೆ ಗೆಲುವು
Advertisement
ಹುಮ್ನಾಬಾದ್: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಿದ್ದು ಪಾಟೀಲ್ ಗೆದ್ದಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಬಸವರಾಜ್ ಪಾಟೀಲ್ ಕಡಿಮೆ ಅಂತರದಲ್ಲಿ ಸೋತಿದ್ದಾರೆ.
ಔರಾದ್: ಕ್ಷೇತ್ರದಿಂದ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಪ್ರಭು ಚವ್ಹಾಣ್ ಜಯ ಗಳಿಸಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಭೀಮಸೈನ್ ರಾವ್ ಶಿಂಧೆ ಹಾಗೂ ಜೆಡಿಎಸ್ ಅಭ್ಯರ್ಥಿ ಜೈಸಿಂಗ್ ಧನಾಶಿಂಗ್ ಸೋತಿದ್ದಾರೆ.
ಬಸವಕಲ್ಯಾಣ: ಬಿಜೆಪಿ ಅಭ್ಯರ್ಥಿ ಶರುಣ ಸಲಗರ್ ಕಾಂಗ್ರೆಸ್‌ನ ವಿಜಯ್ ಸಿಂಗ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ನಿಂದ ಸಂಜುಕುಮಾರ್ ವಾಡೇಕರ್ ಹಾಗೂ ಆಪ್‌ನಿಂದ ದೀಪಕ್ ಮಲ್ಗರ್ ಸ್ಪರ್ಧಿಸಿ ಸೋತಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್ 136, ಬಿಜೆಪಿ 65, ಜೆಡಿಎಸ್ 19 ಮುನ್ನಡೆ LIVE Updates