ವಿಜಯಪುರ: ಬಿಜೆಪಿ (BJP) ನಿಮ್ಮನ್ನು ಸಚಿವರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಇಷ್ಟೆಲ್ಲಾ ಅನುಭವಿಸಿ ಈಗ ಕಾಂಗ್ರೆಸ್‌ಗೆ (Congress) ಹೋಗುತ್ತೀರಲ್ಲ ನಿಮಗೆ ಮಾನ, ಮರ್ಯಾದೆ, ಸ್ವಾಭಿಮಾನ ಇದೆಯಾ? ಎಸ್‌ಡಿಪಿಐ (SDPI) ಸಂಘಟನೆ ಜೊತೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ಹೋಗಲು ನಿಮಗೆ ನಾಚಿಕೆ ಆಗುತ್ತೋ ಇಲ್ವೋ ಎಂದು ಜಗದೀಶ್ ಶೆಟ್ಟರ್ (Jagadish Shettar) ಹಾಗೂ ಲಕ್ಷ್ಮಣ ಸವದಿ (Laxman Savadi) ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಕಿಡಿಕಾರಿದರು.
ವಿಜಯಪುರದಲ್ಲಿ (Vijayapura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ದಲಿತರು, ಮುಸ್ಲಿಮರು, ಮರಾಠರು, ಬ್ರಾಹ್ಮಣರಿಗೆ ಸೇರಿದಂತೆ ಎಲ್ಲಾ ಸಮುದಾಯಗಳಿಗೂ ಅನುಕೂಲ ಮಾಡಿದೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ (Guarantee Card) ಮೋಸ ಮಾಡುವ ಯೋಜನೆಯಾಗಿದ್ದು, ಪಿಎಫ್‌ಐನ (PFI) ಸ್ವರೂಪವಾದ ಎಸ್‌ಡಿಪಿಐ ಜೊತೆಗೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ. 2047ಕ್ಕೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಹುನ್ನಾರ ನಡೆದಿದೆ. 2047ಕ್ಕೆ ಭಾರತದ ಹಿಂದೂಗಳನ್ನು ಮತಾಂತರ ಮಾಡುವುದು, ನಿರ್ನಾಮ ಮಾಡುವುದು ಎಸ್‌ಡಿಪಿಐ ಕೆಲಸವಾಗಿದೆ. ಪಿಎಫ್‌ಐ ಸಂಘಟನೆಯು ಕರ್ನಾಟಕವನ್ನು ಇಸ್ಲಾಂ (Islam) ರಾಜ್ಯವನ್ನಾಗಿಸುವ ಪ್ಲಾನ್ ಹಾಕಿಕೊಂಡಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ಸಕ್ಕರೆ ನಾಡು ಮೀಸಲು ಕ್ಷೇತ್ರದಲ್ಲಿ ಕೈ, ಕಮಲ, ತೆನೆ ಪೈಪೋಟಿ
Advertisement
Advertisement
ಪಿಎಫ್‌ಐ ಹಾಗೂ ಎಸ್‌ಡಿಪಿಐ ಭಯೋತ್ಪಾದಕರ ಮೇಲಿದ್ದ 1700ಕ್ಕೂ ಹೆಚ್ಚು ಕೇಸ್‌ಗಳನ್ನು ಸಿದ್ದರಾಮಯ್ಯ (Siddaramaiah) ಸರ್ಕಾರ ಹಿಂಪಡೆದಿದೆ. ಆದರೆ ಹಿಂದೂಪರ ಸಂಘಟನೆಗಳ ಮೇಲಿನ ಕೇಸ್ ವಾಪಸ್ ತೆಗೆದುಕೊಳ್ಳಲಿಲ್ಲ. ಗೋಹತ್ಯೆ ಮಾಡಿದವರನ್ನು ರಕ್ಷಣೆ ಮಾಡಿದ್ದಾರೆ, ಗೋರಕ್ಷಣೆ ಮಾಡಿದವರನ್ನು ಮಾಡಲಿಲ್ಲ. ಗೋಹತ್ಯೆಗೆ ಬೆಂಬಲ ಕೊಟ್ಟವರಿಗೆ 5 ಲಕ್ಷ, 10 ಲಕ್ಷ ಪರಿಹಾರವನ್ನು ಕೊಟ್ಟಂತಹ ದುರ್ದೈವ ಸಂಗತಿ ನಮ್ಮ ರಾಜ್ಯದಲ್ಲಿ ನಡೆದಿದೆ. ರಾಜ್ಯದಲ್ಲಿ ಕೋಮು ಗಲಭೆ ಹಾಗೂ ಅಶಾಂತಿ ಉಂಟುಮಾಡುವ ಸಲುವಾಗಿ ಕಾಂಗ್ರೆಸ್ ಎಸ್‌ಡಿಪಿಐ ಜೊತೆ ಮೈತ್ರಿ ಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಶೆಟ್ಟರ್ ರಾಜೀನಾಮೆಯಿಂದ ಬಿಜೆಪಿಗೆ ಯಾವುದೇ ಡ್ಯಾಮೇಜ್ ಆಗಲ್ಲ: ಅರವಿಂದ ಬೆಲ್ಲದ್
Advertisement
Advertisement
ಬಿಜೆಪಿ ಲಿಂಗಾಯತರನ್ನು ಮುಗಿಸುವ ಯತ್ನ ಮಾಡ್ತಿದೆ ಎಂದು ಆರೋಪಿಸುತ್ತಿದ್ದೀರಿ. ನೀವೆಲ್ಲಾ ಹುದ್ದೆಗಳನ್ನು ಅನುಭವಿಸಿದ್ದು ಇದೇ ಲಿಂಗಾಯತ ಆಧಾರದ ಮೇಲೆ ಎಂಬುದು ನೆನಪಿರಲಿ. ಲಿಂಗಾಯತರನ್ನು ಕಡೆಗಣಿಸಿದ್ದಾರೆ ಎಂದು ಮಾತನಾಡುತ್ತಿದ್ದೀರಲ್ಲ. ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ (D.K.Shivakumar) ಏನು ಹೇಳಿದ್ದಾರೆ? ಕಾಂಗ್ರೆಸ್ ಬಂದ ಕೂಡಲೇ ಮೀಸಲಾತಿ (Reservation) ತೆಗೆದು ಹಾಕುತ್ತೇವೆ ಎಂದಿದ್ದಾರೆ. ಹಾಗಾದರೆ ಲಿಂಗಾಯತರಿಗೆ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಾತಿ ಸಿಕ್ಕಿದ್ದು ಸಮಾಧಾನ ಇಲ್ಲವೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಈ ದೇಶದಲ್ಲಿ ಧೈರ್ಯವಾಗಿ ಮಾತನಾಡುವ ಮನುಷ್ಯ ರಾಹುಲ್ ಗಾಂಧಿ ಮಾತ್ರ – ಮಲ್ಲಿಕಾರ್ಜುನ ಖರ್ಗೆ
ನೀವು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದೀರಿ. ಇನ್ನೂ ಕಾಲ ಮಿಂಚಿಲ್ಲ. ಈಗಲೂ ವಾಪಸ್ ಬಂದು ಬಿಜೆಪಿಗೆ ಶರಣಾಗತಿಯಾಗಿ. ನಿಮಗೆಲ್ಲಾ ಅನ್ಯಾಯ ಆಗಿದೆ ಎಂದು ನನಗೆ ಕೆಲವೊಮ್ಮೆ ಅನಿಸುತ್ತದೆ. ನನ್ನನ್ನೂ ಸಚಿವನನ್ನಾಗಿ ಮಾಡಲಿಲ್ಲ. ನನಗೂ ಅನ್ಯಾಯ ಆಗಿದೆ ಎಂದು ಅನಿಸುತ್ತದೆ ಎಂದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಅಖಂಡ ಶ್ರೀನಿವಾಸಮೂರ್ತಿ ರಾಜೀನಾಮೆ