ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮದರಸಾ ಸಂಪೂರ್ಣ ಬಂದ್: ಯತ್ನಾಳ್

Public TV
2 Min Read
BASANAGAUDA PATIL YATNAL 2

ಬೆಳಗಾವಿ: ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಮದರಸಾ ಸಂಪೂರ್ಣ ಬಂದ್ ಮಾಡುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು.

ಬೆಳಗಾವಿಯಲ್ಲಿ (Belagavi) ಶಿವಚರಿತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ರೀತಿ ಕರ್ನಾಟಕದಲ್ಲಿ ಮದರಸಾ ಬಂದ್ ಮಾಡುತ್ತೇವೆ ಎಂದ ಅವರು, ಇವತ್ತು ನಾನು ಬಸನಗೌಡ ಪಾಟೀಲ್ ಯತ್ನಾಳ್ ಆಗಿ ಉಳಿಯಲು ಶಿವಾಜಿ ಮಹಾರಾಜರು ಕಾರಣರಾಗಿದ್ದಾರೆ. ಇಲ್ಲವಾದರೆ ನಾನು ಬಶೀರ್ ಅಹ್ಮದ್ ಪಟೇಲ್ ಆಗಿರುತ್ತಿದ್ದೆ. ಅದೇ ರೀತಿ ಅಭಯ್ ಪಾಟೀಲ್, ಅಜರುದ್ದೀನ್ ಪಟೇಲ್ ಆಗಿ ಇರುತ್ತಿದ್ದರು ಎಂದರು.

bjp flag

ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹಾಡಿ ಹೊಗಳಿದ ಅವರು, ಅಸ್ಸಾಂ ಹಿಂದೂಸ್ತಾನ ಬಿಟ್ಟು ಹೋಗುವ ವಾತಾವರಣ ಇತ್ತು. ಆದರೆ ಹಿಮಂತ ಬಿಸ್ವಾ ಶರ್ಮಾರಿಂದ ಅಸ್ಸಾಂನಲ್ಲಿ ಹಿಂದೂಗಳು ಜೀವನ ಮಾಡಲು ಸಾಧ್ಯವಾಯಿತು ಎಂದ ಅವರು, ನನಗೊಬ್ಬರು ಶಿವಾಜಿ ಮಹಾರಾಜರ ಬಗ್ಗೆ ಮಾತನಾಡುತ್ತೀಯಾ ಅವರಿಗೆ ಹುಟ್ಟಿದಿಯಾ ಎಂದು ಹೇಳಿದ್ದರು. ಹೌದು ನಾನು ಶಿವಾಜಿ ಸಂತಾನವಾಗಿದ್ದು, ಟಿಪ್ಪು ಸುಲ್ತಾನನ ಸಂತಾನವಲ್ಲ ಎಂದು ಹೇಳಿದರು.

Himanta Biswa Sarma

ಕರ್ನಾಟಕದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಹೇಳ್ತಾರೆ. ಆದರೆ ಟಿಪ್ಪು ಲಕ್ಷಾಂತರ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ. ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿದ. ಛತ್ರಪತಿ ಶಿವಾಜಿ ಮಹಾರಾಜರು ಯಾವುದೇ ಮುಸ್ಲಿಂ ಮಹಿಳೆ ಮೇಲೆ ಅತ್ಯಾಚಾರ ಮಾಡಿಲ್ಲ. ಹಾಗೇನಾದರೂ ಆದರೆ ಅವರ ಕೈಯನ್ನು ಕತ್ತರಿಸುತ್ತಿದ್ದರು. ಅವರು ಶಿವಾಜಿ ಮಹಾರಾಜರು ಎಂದರು. ಇದನ್ನೂ ಓದಿ: ಮೂಡಿಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರ ಆಕ್ರೋಶ – ಕಣ್ಣೀರಿಟ್ಟ ಕುಮಾರಸ್ವಾಮಿ

ಇವತ್ತು ರೈಲ್ವೆ ನಿಲ್ದಾಣದಲ್ಲಿ ಉರ್ದು ಬೋರ್ಡ್ ಬರೆದರೆ ಕೇಳಲ್ಲ. ಹಿಂದಿ ಬೋರ್ಡ್ ಬರೆದರೆ ಕೇಳುತ್ತಾರೆ. ಆದರೆ ಹಿಂದಿ ವಿರೋಧಗಳ ಬಳಿ ಧಮ್ ಇದ್ರೆ ಕಲಬುರಗಿ ರೇಲ್ವೆ ನಿಲ್ದಾಣದ ಮೇಲಿನ ಉರ್ದು ಬೋರ್ಡ್ ತಗೀರಿ ಎಂದು ಹೇಳಿದ್ದೇನೆ. ಅದಕ್ಕೆ ಕೆಲವರು ಉತ್ತರ ಭಾರತದ ಚೇಲಾಗಳು ಅಂತಾರೆ. ನಾವು ಯಾರ ಚೇಲಾಗಳು ಅಲ್ಲ, ಹಿಂದೂಸ್ತಾನದ ಚೇಲಾಗಳು, ಹಿಂದೂಗಳಾಗಿದ್ದೇವೆ ಎಂದು ತಿಳಿಸಿದರು.

ಈ ಹಿಂದೂಸ್ತಾನ ಹೊಸ ಹಿಂದೂಸ್ತಾನ ಮೋದಿ ಹಿಂದೂಸ್ತಾನವಾಗಿದೆ. ಪಾಕಿಸ್ತಾನದಲ್ಲಿ ಮೋದಿ ಎಷ್ಟು ಕೆಲಸ ಮಾಡ್ತಿದ್ದಾರೆ ಅಂತಿದ್ದಾರೆ. ಆದರೆ ಇಲ್ಲಿರುವವರೆ ನಮ್ಮ ಅನ್ನ ತಿಂದು, ನೀರು ಕುಡಿದು ಪಾಕಿಸ್ತಾನ ಪರ ಘೋಷಣೆ ಹಾಕ್ತಾರೆ. ವಿಜಯಪುರದಲ್ಲಿ ಎರಡೂವರೆ ಲಕ್ಷ ಮತದಲ್ಲಿ 1 ಲಕ್ಷ 3 ಸಾವಿರ ಟಿಪ್ಪು ಸುಲ್ತಾನ್ ಇದ್ದಾರೆ. ಶಿವಾಜಿ ಮಹಾರಾಜರ ಕನಸು ಹಿಂದವಿ ಸಾಮ್ರಾಜ್ಯ ಇತ್ತು, ಮರಾಠ ಸಾಮ್ರಾಜ್ಯ ಅಲ್ಲ. ಇದರಿಂದ ಮರಾಠಿ, ಕನ್ನಡ ಸಲುವಾಗಿ ಹೋರಾಡೋದು ಬೇಡ, ಅದು ಮುಗಿದಿದೆ ಈಗ. ಈಗ ಏನಿದ್ರು ಹಿಂದೂ, ನಾವೆಲ್ಲ ಹಿಂದೂಗಳಾಗಿ ಇದ್ರೆ ಭಾರತ ಉಳಿಯುತ್ತದೆ. ಇಲ್ಲವಾದ್ರೆ ಉರ್ದು ಕಲಿಯಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಇಂದು ಕಾಂಗ್ರೆಸ್‍ನ 150 ಅಭ್ಯರ್ಥಿಗಳ ಮೊದಲ ಪಟ್ಟಿ – ಯಾರಿಗೆ ಎಲ್ಲಿ ಟಿಕೆಟ್‌?

Share This Article
Leave a Comment

Leave a Reply

Your email address will not be published. Required fields are marked *