ರಾಯಚೂರು: ಸೋನಿಯಾ ಗಾಂಧಿ (Sonia Gandhi) ಬಗ್ಗೆ ಶಿವಕುಮಾರ್ (DK Shivakumar) ಹತ್ತಿರ ಪ್ರಶ್ನೆ ಕೇಳಿದೆ. ಮಿಸ್ಟರ್ ಯತ್ನಾಳ್ ನನ್ನ ತಾಯಿ ಬಗ್ಗೆ ಮಾತನಾಡಿದ್ರೆ, ನಾಲಿಗೆ ಕತ್ತರಿಸ್ತೀನಿ ಅಂದ್ರು. ಮಿಸ್ಟರ್ ಶಿವಕುಮಾರ್ ನಿಂಗೆ ತಾಕತ್ತು ಧಮ್ಮಿದ್ರೆ, ನನ್ನ ನಾಲಿಗೆ ಮುಟ್ಟಿ ನೋಡು. ಏನು ಧಮ್ಕಿ ಹಾಕುತ್ತಿಯಾ ಅಂತ ಏಕವಚನದಲ್ಲಿಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagauda Patil Yatnal) ಸವಾಲೆಸೆದರು.
Advertisement
ಜಿಲ್ಲೆಯ ಮಸ್ಕಿಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ (Pratap Gowda Patil) ಪರ ಪ್ರಚಾರ ವೇಳೆ ಯತ್ನಾಳ್, ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ನನ್ನಂತ ಎಂಎಲ್ಎ ಗೆ ಈ ರೀತಿಯಾಗಿ ಮಾತನಾಡುತ್ತಿ. ಇನ್ನು ನೀನು ಸಿಎಂ ಆದರೆ ಜನಸಾಮಾನ್ಯರ ಗತಿ ಏನಾಗಬೇಡ. ನಿನಗೆ ತಾಯಿ ಎಷ್ಟು, ತಂದೆ ಎಷ್ಟು ಅನ್ನೋದು ನನಗೆ ಗೊತ್ತಿಲ್ಲ. ನೀನು ಇದ್ದರೆ ಆ ಕಡೆ ಕನಕಪುರದಲ್ಲಿ ಇರಬೇಕು. ಉತ್ತರ ಕರ್ನಾಟಕದಲ್ಲಿ ನಾವು ಗಂಡುಗಲಿ ಇದ್ದೀವಿ. ನಾವು ಏನು ಕೈಗೆ ಬಳೆ ತೊಟ್ಟಿಲ್ಲ ಅಂತ ಹರಿಹಾಯ್ದರು.
Advertisement
Advertisement
ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆ (Congress Manifesto) ಯಲ್ಲಿ ಬಜರಂಗದಳ ಸಂಘಟನೆ ಬ್ಯಾನ್ ವಿಚಾರವಾಗಿ ಮಾತನಾಡಿದ ಯತ್ನಾಳ್, ಬಜರಂಗದಳ ನಿಷೇಧ ಮಾಡ್ತೀವಿ ಅಂತಾರೆ. ಬಜರಂಗದಳ ನಿಷೇಧ ಆದ್ರೆ ಹಿಂದೂಗಳ ನಾಶ ಪ್ರಾರಂಭವಾಗುತ್ತೆ. ಬಜರಂಗದಳ ನಿಷೇಧ ಮಾಡಲು ಹತ್ತು ಜನ್ಮ ತಾಳಿದರೂ ಆಗಲ್ಲ ಎಂದರು. ಇದನ್ನೂ ಓದಿ: ನಾನ್ ಬೆಳಗಾವಿಗೆ ಬರ್ತಿದೀನಿ – ಮೇ 6ರಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರ ಶಿವಣ್ಣ ಪ್ರಚಾರ..!
Advertisement
ಮೋದಿ (Narendra Modi) ಯವರನ್ನ ಕಾಂಗ್ರೆಸ್ನವರು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ರು. ನಮ್ಮ ಕರ್ನಾಟಕದ ಕಾಂಗ್ರೆಸ್ ಹಿರಿಯ ನಾಯಕರು ವಿಷ ಹಾವು ಅಂದ್ರು. ನೀವು ಏನು ಹೆಬ್ಬಾವುನಾ ಅಂತ ಪ್ರಶ್ನಿಸಿದ ಯತ್ನಾಳ್, ಪ್ರಧಾನ ಮಂತ್ರಿಗೆ ಗೌರವ ಕೊಡುವುದು ಗೊತ್ತಿಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ (Rahul Gandhi) ಅರೆ ಹುಚ್ಚಾ ಐತಿ. ಆತನ ಬಿಟ್ಟುಬಿಡಿ. ರಾಹುಲ್ ಗಾಂಧಿಗೆ ಲೀಟರ್, ಕೆ.ಜಿ ಬಗ್ಗೆ ವ್ಯತ್ಯಾಸ ಗೊತ್ತಿಲ್ಲ. ಭಾರತ್ ಜೋಡೋ ಅಂತೆ ಮಾಡಿದ್ರು, ತೋಡೋ ಎಲ್ಲಿ ಐತಿ ಪಾ. ತೋಡೋ ಮಾಡಿದವರು ನಿಮ್ಮ ಮುತ್ಯಾ. ಅವರು ನೆಹರು ಗಾಂಧಿ ಇದು ಡುಬ್ಲಿಕೇಟ್ ಗಾಂಧಿ. ಮೈಕ್ರೋ ಬೀಜ್ ಇದ್ದಂಗೆ ರಾಹುಲ್ ಗಾಂಧಿ ಅಂತ ಲೇವಡಿ ಮಾಡಿದರು.