ಬಾಗಲಕೋಟೆ: ಜಿಲ್ಲೆಯ 7 ಕ್ಷೇತ್ರಗಳಲ್ಲಿನ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ. 7 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಜಯಗಳಿಸಿದ್ದು, 2 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ.
ಮುಧೋಳ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ತಿಮ್ಮಾಪುರ ರಾಮಪ್ಪ ಬಾಳಪ್ಪ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ವಿರುದ್ಧ ಗೆದ್ದಿದ್ದಾರೆ. ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ಚಿನ್ನಪ್ಪ, ಆಪ್ ಅಭ್ಯರ್ಥಿ ಗಣೇಶ್ ಪರಶುರಾಮ್ ಪವಾರ್ ಹಾಗೂ ಜೆಡಿಎಸ್‌ನಿಂದ ಧರ್ಮರಾಜ್ ವಿಠಲ್ ದೊಡ್ಡಮನಿ ಸ್ಪರ್ಧಿಸಿದ್ದರು.
Advertisement
Advertisement
ತೆರದಾಳ: ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಕಾಂಗ್ರೆಸ್ ಅಭ್ಯರ್ಥಿ ಸಿದ್ದು ರಾಮಪ್ಪ ವಿರುದ್ಧ ಜಯ ಗಳಿಸಿದ್ದಾರೆ. ಕ್ಷೇತ್ರದಲ್ಲಿ ಆಪ್ ಪಕ್ಷದಿಂದ ಅರ್ಜುನ್ ಹಳಗಿಗೌಡರ್ ಹಾಗೂ ಜೆಡಿಎಸ್‌ನಿಂದ ಸುರೇಶ್ ಅರ್ಜುನ್ ಮಡಿವಾಳರ್ ಸ್ಪರ್ಧಿಸಿ ಸೋತಿದ್ದಾರೆ.
Advertisement
ಜಮಖಂಡಿ: ಬಿಜೆಪಿ ಅಭ್ಯರ್ಥಿ ಜಗದೀಶ್ ಶಿವಯ್ಯ ಗುಡಗುಂಟಿ ಅವರು ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿದ್ದು ನ್ಯಾಮಗೌಡ ವಿರುದ್ಧ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
Advertisement
ಬೀಳಗಿ: ಕಾಂಗ್ರೆಸ್ ಅಭ್ಯರ್ಥಿ ಜೆಟಿ ಪಾಟಿಲ್ ಬೀಳಗಿ ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದ್ದಾರೆ. ಬಿಜೆಪಿ ಪಕ್ಷದಿಂದ ಮುರುಗೇಶ್ ನಿರಾಣಿ, ಆಪ್‌ನಿಂದ ಕೋಮರ್ ಮುತ್ತಪ್ಪ ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಿದ ರುಕ್ಮುದ್ದೀನ್ ಸೌದಾಗರ್ ಸೋತಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ 7ರಲ್ಲಿ 6 ಕಾಂಗ್ರೆಸ್ ತೆಕ್ಕೆಗೆ – ಬಿಜೆಪಿಗೆ ಹೀನಾಯ ಸೋಲು
ಬಾದಾಮಿ: ಕ್ಷೇತ್ರದಲ್ಲಿ ಮೂರೂ ಪಕ್ಷಗಳಲ್ಲಿ ಭಾರೀ ಪೈಪೋಟಿ ನಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿಬಿ ಚಿಮ್ಮನಕಟ್ಟಿ ಗೆದ್ದಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಶಾಂತಗೌಡ ಪಾಟೀಲ್ ಹಾಗೂ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಹನುಮಂತ್ ಬಿ. ಮಾವಿನಮರದ್ ಸೋತಿದ್ದಾರೆ.
ಬಾಗಲಕೋಟೆ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್‌ವೈ ಮೇಟಿ ಗೆದ್ದಿದ್ದಾರೆ. ಬಿಜೆಪಿ ಪಕ್ಷದ ವೀರಭದ್ರಯ್ಯ ಚರಂತಿಮಠ, ಜೆಡಿಎಸ್ ಪಕ್ಷದ ದೇವರಾಜ್ ಪಾಟೀಲ್ ಸೋತಿದ್ದಾರೆ.
ಹುನಗುಂದ: ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ್ ಹನಗುಂದ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಬಿಜೆಪಿಯಿಂದ ದೊಡ್ಡನಗೌಡ ಪಾಟೀಲ್ ಹಾಗೂ ಜೆಡಿಎಸ್‌ನಿಂದ ಬೋಳಿ ಶಿವಪ್ಪ ಮಹದೇವಪ್ಪ ಸೋತಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್ 136, ಬಿಜೆಪಿ 65, ಜೆಡಿಎಸ್ 19 ಮುನ್ನಡೆ LIVE Updates