– ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರವಾನೆ
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಗೆ ವರುಣಾ ಟಿಕೆಟ್ ಫಿಕ್ಸ್ ಆಗಿದೆ. ಈ ಬೆನ್ನಲ್ಲೇ ವಿಜಯೇಂದ್ರ ಕೂಡ ವರುಣಾ (Varuna Constituency) ದಿಂದಲೇ ಸ್ಪರ್ಧಿಸ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.
Advertisement
ವಿಜಯೇಂದ್ರ ಸ್ಪರ್ಧೆಗೆ ಯಡಿಯೂರಪ್ಪ (BS Yediyurappa) ರೆಡ್ ಸಿಗ್ನಲ್ ಕೊಟ್ಟರು. ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ ಅಂತ ಬಿಎಸ್‍ವೈ ಹೇಳಿದರು. ಇದರ ಹಿಂದೆ ನಾನಾ ಲೆಕ್ಕಾಚಾರಗಳು ಇದ್ಯಾ ಅನ್ನೋ ಮಾತುಗಳು ಶುರುವಾಗಿದೆ. ವರುಣಾಕ್ಕೆ ವಿಜಯೇಂದ್ರ ಬಿಟ್ಟು ಕಾರ್ಯರ್ತರ ಹೆಸರನ್ನಷ್ಟೇ ಹೈಕಮಾಂಡ್‍ಗೆ ರಾಜ್ಯ ಬಿಜೆಪಿ ಶಿಫಾರಸು ಮಾಡಿದೆ. ಇದನ್ನೂ ಓದಿ: ಸೆಕೆಂಡ್ ಲಿಸ್ಟ್ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಬಂಡಾಯ- ಬಿಜೆಪಿ, ಜೆಡಿಎಸ್ ಸೇರ್ಪಡೆ ಸಾಧ್ಯತೆ
Advertisement
Advertisement
ಪ್ರತಾಪ್, ಸದಾನಂದ, ಕಾ.ಪು.ಸಿದ್ದಲಿಂಗಸ್ವಾಮಿ ಹೆಸರುಗಳು ಶಿಫಾರಸು ಮಾಡಲಾಗಿದೆ. ಶಿಕಾರಿಪುರ ಕ್ಷೇತ್ರಕ್ಕೆ ವಿಜಯೇಂದ್ರ ಹೆಸರು ಶಿಫಾರಸ್ಸು ಮಾಡಿದ್ದರ ಅಸಲಿಯತ್ತೇನು..? ಯಡಿಯೂರಪ್ಪಗೆ ಬೆದರಿ ಶಿಫಾರಸ್ಸೋ..? ಅನ್ನೋ ಪ್ರಶ್ನೆಗಳು ಶುರುವಾಗಿದೆ. ಹೈಕಮಾಂಡ್ ಹೇಳಿದ್ರೆ ಮಾತ್ರ ವರುಣಾದಲ್ಲಿ ವಿಜಯೇಂದ್ರ ಸ್ಪರ್ಧೆ ಅಂತ ಬಿಎಸ್‍ವೈ ಹೇಳಿದ್ರು. ಹಾಗಾದ್ರೆ ಶಿಕಾರಿಪುರದ ಜೊತೆಗೆ ವರುಣಾ ಕ್ಷೇತ್ರ ಕೊಟ್ಟರೆ ಎರಡು ಕಡೆ ಸ್ಪರ್ಧೆ ಎಂಬ ಸಂದೇಶ ರವಾನಿಸಿದ್ರಾ..? ಅನ್ನೋ ಚರ್ಚೆಗಳು ಶುರುವಾಗಿದೆ. ಈ ಮಧ್ಯೆ ವರುಣಾದಲ್ಲಿ ಕಾಂಗ್ರೆಸ್-ಬಿಜೆಪಿ ಒಳ ಒಪ್ಪಂದದ ಅನುಮಾನವನ್ನು ಮಾಜಿ ಸಿಎಂ ಕುಮಾರಸ್ವಾಮಿಯವರು ವ್ಯಕ್ತಪಡಿಸಿದ್ದಾರೆ… ದೇವೇಗೌಡರು ಕೂಡ ಪರೋಕ್ಷವಾಗಿ ಅಡ್ಜೆಸ್ಟ್‍ಮೆಂಟ್ ರಾಜಕೀಯದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ರು.
Advertisement
ಇತ್ತ ಹೈಕಮಾಂಡ್ ಅಂಗಳಕ್ಕೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ರವಾನೆ ಆಗಿದೆ. ಕ್ಷೇತ್ರವಾರು ತಲಾ ಮೂರು ಸಂಭಾವ್ಯ ಅಭ್ಯರ್ಥಿಗಳ ಹೆಸರು ಶಿಫಾರಸು ಮಾಡಲಾಗಿದೆ. ಟಿಕೆಟ್‍ಗೆ ಇರುವ ವಯಸ್ಸಿನ ಮಿತಿ ಬಗ್ಗೆಯೂ ವರಿಷ್ಠರೇ ನಿರ್ಧರಿಸಬೇಕು. ಕೆಲವರ ಕುಟುಂಬಕ್ಕೆ ಟಿಕೆಟ್ ಕೊಡಬೇಕಾ ಬೇಡ್ವಾ ಅನ್ನೋದು ದೆಹಲಿಯಲ್ಲೇ ಇತ್ಯರ್ಥ ಆಗುತ್ತೆ. ಹಲವು ಕ್ಷೇತ್ರಗಳಲ್ಲಿರುವ ಆಡಳಿತ ವಿರೋಧಿ ಅಲೆ ಪರಿಗಣಿಸಿ ಟಿಕೆಟ್ ಹಂಚಿಕೆ ಮಾಡಲಾಗುತ್ತೆ. ಜೊತೆಗೆ ಹಲವು ಹಾಲಿ ಶಾಸಕರ ವಿರುದ್ಧ ಇರುವ ಸ್ವಪಕ್ಷೀಯರ ವಿರೋಧ ಬಗ್ಗೆಯೂ ದೆಹಲಿಯಲ್ಲೇ ಡಿಸಿಷನ್ ಆಗಲಿದೆ. ಎಲ್ಲ ಸಮಸ್ಯೆ, ಮಾನದಂಡ, ಯೋಗ್ಯತೆ, ಜಾತಿ ನೋಡಿಕೊಂಡು ವರಿಷ್ಠರು ಟಿಕೆಟ್ ಹಂಚಲಿದ್ದಾರೆ. ಈ ವಾರಾಂತ್ಯ ಅಥವಾ ಮುಂದಿನ ವಾರದ ಮೊದಲೆರಡು ದಿನಗಳಲ್ಲೇ ಪಟ್ಟಿ ಪ್ರಕಟ ಆಗುವ ಸಾಧ್ಯತೆ ಇದೆ.