ಕಾಡಿಗೆ ಸಫಾರಿ ಹೋದಾಗ ಸಫಾರಿ ಡ್ರೆಸ್‌ನಲ್ಲಿ ಇರಬೇಕು – ಹೆಚ್‌ಡಿಕೆಗೆ ಅಶ್ವಥ್ ನಾರಾಯಣ್ ತಿರುಗೇಟು

Public TV
2 Min Read
ASHWATH NARAYAN 1

ಬೆಂಗಳೂರು: ಕಾಡಿಗೆ ಸಫಾರಿಗೆಂದು (Safari) ಹೋದಾಗ ಸಫಾರಿ ಡ್ರೆಸ್‌ನಲ್ಲಿ ಇರಬೇಕು. ನಾಡಿಗೆ ಬಂದಾಗ ನಾಡಿನ ಡ್ರೆಸ್‌ನಲ್ಲಿ ಇರಬೇಕು. ಆದರೆ ಕುಮಾರಸ್ವಾಮಿ (H.D.Kumaraswamy) ಅವರಿಗೆ ಅದು ಎರಡೂ ಹಾಕಲು ಬರುವುದಿಲ್ಲವಲ್ಲ, ಏನುಮಾಡುವುದು ಎಂದು ಮೋದಿ (Narendra Modi) ಬಂಡೀಪುರ (Bandipur) ಅರಣ್ಯ ಭೇಟಿಗೆ ಕುಮಾರಸ್ವಾಮಿ ವ್ಯಂಗ್ಯ ವಿಚಾರವಾಗಿ ಸಚಿವ ಅಶ್ವಥ್ ನಾರಾಯಣ್ (C.N.Ashwath Narayan) ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ಯಾವ ಯಾವ ಜಾಗಕ್ಕೆ ಯಾವ ಯಾವ ವೇಷಗಳನ್ನು ಹಾಕಬೇಕೋ ಅದಕ್ಕೆ ಸೂಕ್ತವಾದ ಬಟ್ಟೆಗಳನ್ನು ಹಾಕುತ್ತಾರೆ. ಇಡೀ ವಿಶ್ವವನ್ನೇ ನಾವು ಪ್ರತಿನಿಧಿಸುತ್ತಿದ್ದೇವೆ. 140 ಕೋಟಿ ಜನರಿಗೆ ನಾಯಕ ಅವರು. ಅಂತಹ ರೋಲ್ ಮಾಡೆಲ್‌ಗೆ (Roll Model) ರೋಲ್ ಮಾಡೆಲ್ ತರಹ ಇರಬೇಡಿ ಸ್ವಾಮಿ ಎಂದು ಹೇಳಲಾಗುವುದಿಲ್ಲ ಎಂದರು. ಇದನ್ನು ಓದಿ: ಮೋದಿ ಕಾಡು ಪ್ರಾಣಿಗಳನ್ನು ನೋಡಿದರೆ ಜನ ವೋಟು ಒತ್ತುತ್ತಾರಾ: ಹೆಚ್ಡಿಕೆ ವ್ಯಂಗ್ಯ 

PM Modi arrives in Bandipur to commemorate 50 years of Project Tiger

ಕೋವಿಡ್ (Covid) ಸಮಯದಲ್ಲಿ ಕುಮಾರಸ್ವಾಮಿ ಎಲ್ಲಿದ್ದರು? ಕಾಂಗ್ರೆಸ್‌ನವರು (Congress) ಲಸಿಕೆ ತೆಗೆದುಕೊಳ್ಳಬೇಡಿ ಎಂದಿದ್ದರು. ಇಡೀ ವಿಶ್ವದಲ್ಲಿ ಭಾರತ ಮಾದರಿಯಾಗಿ ಕೋವಿಡ್ ನಿರ್ವಹಣೆ ಮಾಡಿದೆ. ಸುಮ್ಮನೆ ಪಾಪ ಏನೋ ಹೇಳಬೇಕು ಎಂದು ಹೇಳುತ್ತಿದ್ದಾರೆ ಅಷ್ಟೇ. ಆದರೆ ಜನರು ಬುದ್ದಿವಂತರಿದ್ದಾರೆ ಎಂಬುದು ಗೊತ್ತಿರಲಿ. ಇಂತಹ ಹೇಳಿಕೆಗಳಿಂದ ಅವರು ಸೆಲ್ಫ್ ವಿಕೆಟ್ ಹೊಡೆದುಕೊಳ್ಳುತ್ತಿದ್ದಾರೆ. ಮೋದಿಯವರ ಬಗ್ಗೆ ಕಿಡಿಕಾರಿದರೆ ಅದು ಇವರಿಗೆ ರಿವರ್ಸ್ ಗೇರ್ ಆಗುತ್ತದೆ ಎಂದು ಹರಿಹಾಯ್ದರು. ಇದನ್ನು ಓದಿ: ಬಂಡೀಪುರದಲ್ಲಿ ಮೋದಿ ಸಫಾರಿ – ಪ್ರಕೃತಿ ಸೌಂದರ್ಯ ಸವಿದ ಪ್ರಧಾನಿ 

 

ನಂದಿನಿ (Nandini) ಉಳಿಸಿ ಅಭಿಯಾನ ವಿಚಾರದ ಕುರಿತು ಮಾತನಾಡಿದ ಅವರು, ನಮ್ಮ ನಂದಿನಿಗೆ ಯಾರೂ ಸರಿಸಾಟಿಯಲ್ಲ. ನಂದಿನಿಯ ಗುಣಮಟ್ಟಕ್ಕಾಗಲಿ, ಬೆಲೆಯಲ್ಲಾಗಲಿ, ವ್ಯವಸ್ಥೆಯಲ್ಲಾಗಲಿ ಯಾವುದೂ ಸರಿಸಾಟಿಯಲ್ಲ. ಇದನ್ನು ರಾಜ್ಯಸರ್ಕಾರವೇ ಸಂಪೂರ್ಣವಾಗಿ ಕೈಗೆತ್ತಿಕೊಂಡು ನಂದಿನಿಗೆ ಎಲ್ಲಾ ರೀತಿಯಾದ ಸಹಕಾರವನ್ನು ನೀಡುತ್ತಿದೆ. ನಂದಿನಿಗೆ ಜಮೀನು ಹಾಗೂ ಹಣ ನೀಡುವ ವಿಚಾರದಲ್ಲಿ ರಾಜ್ಯಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೇ ಒಂದು ಲೀಟರ್ ಹಾಲಿಗೆ 5 ರೂ. ಸಬ್ಸಿಡಿಯನ್ನೂ ಕೊಟ್ಟಿದೆ. ಈ ರೀತಿಯಾಗಿ ನಮ್ಮ ರಾಜ್ಯದ ಹಾಲು ಉತ್ಪಾದಕರು ಮತ್ತು ರೈತರಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದೇವೆ. ನಮ್ಮ ಅಭಿಮಾನದ ಸಂಕೇತ ನಂದಿನಿ. ಆದ್ದರಿಂದ ನಂದಿನಿಗೆ ಸರ್ಕಾರದ ಸಂಪೂರ್ಣ ಬೆಂಬಲವಿದೆ. ಹೀಗಾಗಿ ಎಂತಹ ಸ್ಪರ್ಧೆ ಬಂದರೂ ನಮ್ಮ ಹತ್ತಿರ ಯಾರೂ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಇದನ್ನು ಓದಿ: ಗದಗ ಜಿಲ್ಲೆಯಲ್ಲಿ ಮಾಜಿ, ಹಾಲಿ ಶಾಸಕರ ಕೊನೆಯ ಕಸರತ್ತು  

NANDINI MILK

ಬಿಜೆಪಿ (BJP) ಪಟ್ಟಿ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಅವರು, ನಾಳೆ ಬಿಜೆಪಿಯ ಟಿಕೆಟ್ ಪ್ರಕಟವಾಗುವ ಸಾಧ್ಯತೆಯಿದೆ. ನಾಳೆ ಮೊದಲ ಲಿಸ್ಟ್ ಬಿಡುಗಡೆಯಾಗಲಿದ್ದು, ಎರಡನೇ ಲಿಸ್ಟ್ 13ನೇ ದಿನಾಂಕದಂದು ಬಿಡುಗಡೆಯಾಗಲಿದೆ ಎಂದರು.

ಹೊಸಬರಿಗೆ ಟಿಕೆಟ್ ಸಿಗಲಿದೆಯಾ ಎಂಬ ಪ್ರಶ್ನೆಗೆ ಕಾದು ನೋಡಿ ಎಂದು ಉತ್ತರಿಸಿದರು. ಇದನ್ನು ಓದಿ: ವಿಕಲಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮೋದಿ

Share This Article