ಬೆಂಗಳೂರು : ಬೆಳಗಾವಿಯಲ್ಲಿ ಬಿಜೆಪಿ (BJP) ಬಣ ಮಾತ್ರ ಇದೆ ಎಂದು ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (Arun Singh) ತಿಳಿಸಿದರು.
ಬೆಳಗಾವಿಯಲ್ಲಿ (Belagavi) ಬಣ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬೆಳಗಾವಿಯಲ್ಲಿ ಯಾವುದೇ ಬಣ ರಾಜಕೀಯ ಇಲ್ಲ. ಎಲ್ಲಾ ನಾಯಕರು ಒಟ್ಟಾಗಿ ಇದ್ದಾರೆ. ಬಿಜೆಪಿಯಲ್ಲಿ ಇರುವುದು ಒಂದೇ ಒಂದು ಬಣ ಅದು ಬಿಜೆಪಿ ಬಣವಾಗಿದೆ. ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡುತ್ತೇವೆ. ಮೋದಿ (Narendra Modi), ನಡ್ಡಾ (JP Nadda), ಯಡಿಯೂರಪ್ಪ (BS Yediyurappa) ಸಿಎಂ ನೇತೃತ್ವದಲ್ಲಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ವಿಚಾರವು ಹಳೆ ವಿಚಾರವಾಗಿದೆ. ಹೊಸದು ಏನಾದರೂ ಇದ್ದರು ಹೇಳಿ ಎಂದು ಯತ್ನಾಳ್‌ಗೆ ನೋಟಿಸ್ ನೀಡಿದ ಬಗ್ಗೆ ಉತ್ತರ ನೀಡಲು ನಿರಾಕರಿಸಿದರು. ಎಲ್ಲ ನಾಯಕರು ಒಂದೇ ಹೇಳುತ್ತಿರೋದು ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತ. ಎಲ್ಲರೂ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ 150 ಸ್ಥಾನ ಪಡೆಯುತ್ತದೆ. ಇದಕ್ಕೆ ಬೇಕಾದ ಕೆಲಸ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಕುಮಾರಸ್ವಾಮಿಯನ್ನು ಬಿಟ್ಟು ನಾನು ಏನೂ ಮಾಡಲ್ಲ – ಟಿಕೆಟ್ ದಂಗಲ್ ಬಗ್ಗೆ ಮೌನ ಮುರಿದ ರೇವಣ್ಣ
ಮಂಡ್ಯದಲ್ಲಿ ಸಚಿವ ಅಶೋಕ್‌ಗೆ ಗೋ ಬ್ಯಾಕ್ ಅಶೋಕ್ ಎಂಬ ಅಭಿಯಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅಶೋಕ್ ಪಕ್ಷದ ಸಿನಿಯರ್ ಲೀಡರ್. ಅನೇಕ ವರ್ಷಗಳಿಂದ ಪಕ್ಷಕ್ಕೆ ಕೆಲಸ ಮಾಡುತ್ತಿದ್ದಾರೆ. ಏನಾಗಿದೆ ಅದನ್ನು ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಭವಾನಿ ಅಮ್ಮ – ಸಾಮಾಜಿಕ ಜಾಲತಾಣದಲ್ಲಿ JDS ಬೆಂಬಲಿಗರ ಬ್ಯಾಟಿಂಗ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k