ಬೆಳಗಾವಿ: ಕಾಂಗ್ರೆಸ್‌ನವರು (Congress) ಮುಸ್ಲಿಮರಿಗೆ ಶೇ.6ರಷ್ಟು ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ನಿರಂತರ ತುಷ್ಟೀಕರಣ ನೀಡುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಸವದತ್ತಿಯಲ್ಲಿ (Savadatti) ನಡೆದ ಬಿಜೆಪಿ (BJP) ಚುನಾವಣಾ (Election) ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ಗೆ ಮರಾಠರ ನೆನಪಾಗುತ್ತದೆ. ಆದರೆ ಬಿಜೆಪಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಸಂವಿಧಾನ ಬಾಹಿರವಾಗಿ ಮುಸ್ಲೀಮರ ಶೇ.4ರಷ್ಟು ಮೀಸಲಾತಿಯನ್ನು ಕಾಂಗ್ರೆಸ್ ನೀಡಿತ್ತು. ಇದನ್ನು ತೆಗೆದು ಲಿಂಗಾಯತರಿಗೆ ಮೀಸಲಾತಿ ನೀಡಲಾಗಿದೆ ಎಂದರು. ಇದನ್ನೂ ಓದಿ: ಬಜರಂಗಬಲಿ ಕೀ ಜೈ ಎಂದಿರೋ ಹೆಬ್ಬಾಳ್ಕರ್ ವೀಡಿಯೋ ವೈರಲ್
Advertisement
Advertisement
ರೈತ ಸಮ್ಮಾನ್ ಯೋಜನೆಗೆ ರೈತರ ಪಟ್ಟಿ ಕೊಡುವಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಹಿಂದೇಟು ಹಾಕಿತ್ತು. ಬಿಜೆಪಿ ಭದ್ರಾ ಮತ್ತು ಕೃಷ್ಣ ಮೇಲ್ದಂಡೆ ಯೋಜನೆಗೆ ಅನುಮೋದನೆ ನೀಡಿದೆ. ಮೂರು ವರ್ಷಗಳಲ್ಲಿ ರೈತರಿಗೆ ವರ್ಷಕ್ಕೆ ಎರಡು ಬೆಳೆ ತೆಗೆಯುವಷ್ಟು ನೀರು ಕೊಡಲಾಗುವುದು. ಎಥನಾಲ್ ಯೋಜನೆ ಅನುಷ್ಠಾನ ಮಾಡಿ ರೈತರಿಗೆ ಅನುಕೂಲ ಮಾಡಿದೆ. ಉತ್ತರ ಕರ್ನಾಟಕದ ರೈತರ ಜೊತೆಗೆ ನರೇಂದ್ರ ಮೋದಿ (Narendra Modi) ಬೆಟ್ಟದಂತೆ ನಿಂತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಡಿಜಿಟಲ್ ಮೀಡಿಯಾ ಹವಾ ಹೇಗಿದೆ?
Advertisement
ಕಾಂಗ್ರೆಸ್ ನಾಯಕರೇ ಕಿವಿಯೊಡ್ಡಿ ಕೇಳಿ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಯಾರ ಮೀಸಲಾತಿ ತೆಗೆಯುತ್ತೀರಿ ಎಂದು ಹೇಳಿ. ನೀವು ಅಧಿಕಾರಕ್ಕೆ ಬರಲ್ಲ, ಲಿಂಗಾಯತ ಮೀಸಲಾತಿ ತೆಗೆಯಲು ಸಾಧ್ಯವಿಲ್ಲ. ಪ್ರಭು ಶ್ರೀರಾಮನನ್ನು ಕಾಂಗ್ರೆಸ್‌ನವರು ಬಂಧಿಸಿ ಇಟ್ಟಿದ್ದರು. 2024ರಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗಲಿದೆ. ಬಜರಂಗದಳ (Bajarang Dal) ನಿಷೇಧ ಮಾಡುವ ಮಾತನ್ನು ಕಾಂಗ್ರೆಸ್ ಆಡಿದೆ. ಹನುಮಾನ್ ಜನ್ಮದಿನದ ಬಗ್ಗೆ ದಾಖಲೆ ಕೇಳಿ ಕಾಂಗ್ರೆಸ್ ನಾಯಕರು ಅಪಮಾನ ಮಾಡಿದ್ದಾರೆ. ಇಡೀ ದೇಶಕ್ಕೆ ಹನುಮಾನ್ ಜಯಂತಿ ಯಾವಾಗ ಎಂದು ಗೊತ್ತು. ದೇಶ ವಿರೋಧಿ ಕೆಲಸ ಮಾಡುವವರನ್ನು ಜೈಲಿನ ಕಂಬಿಯ ಹಿಂದೆ ಕಳುಹಿಸಲಾಗುವುದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್ ಮುಸ್ಲಿಂ ಪಾರ್ಟಿ, ಕಾಂಗ್ರೆಸ್‌ನಲ್ಲಿ ಅರ್ಧಂಬರ್ಧ ಹಿಂದೂಗಳಿದ್ದಾರೆ: ಯತ್ನಾಳ್
Advertisement
ಪಿಎಫ್‌ಐ (PFI) ನಿಷೇಧ ಮಾಡಿದ್ದು ನಮ್ಮ ಸರ್ಕಾರ. ಪಿಎಫ್‌ಐ ಏಜೆಂಟ್ ರೀತಿಯಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಬಸವಣ್ಣನ ಸಿದ್ಧಾಂತದ ಮೇಲೆ ಕೆಲಸ ಮಾಡುವವರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ. ಲಿಂಗಾಯತರನ್ನು ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಬಸವಣ್ಣನ ಸಂದೇಶ ಸಾರುವವರನ್ನು ಅಪಮಾನ ಮಾಡುತ್ತೀರಿ. ಭ್ರಷ್ಟಾಚಾರವನ್ನು ಒಂದು ಸಮುದಾಯಕ್ಕೆ ಹೋಲಿಸೋದು ಎಷ್ಟರ ಮಟ್ಟಿಗೆ ಸರಿ? ಇಂದಿರಾ ಗಾಂಧಿ ನಿಜಲಿಂಗಪ್ಪರಿಗೆ ಅವಮಾನ ಮಾಡಿದರು. ರಾಜೀವ್ ಗಾಂಧಿಯವರು ವೀರೇಂದ್ರ ಪಾಟೀಲ್‌ಗೆ ಅಪಮಾನ ಮಾಡಿದರು. ಬಿಜೆಪಿ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರನ್ನು ಸಿಎಂ ಮಾಡಿದೆ. ಲಿಂಗಾಯತರಿಗೆ ಸನ್ಮಾನ ಮಾಡುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದರು. ಇದನ್ನೂ ಓದಿ: ಖರ್ಗೆ ಸಾಹೇಬ್ರು ಏನ್ ತಪ್ಪು ಮಾಡಿದ್ದಾರೆ ಸಾಯಿಸೋಕೆ?- ಪ್ರಿಯಾಂಕ್ ಖರ್ಗೆ ಕಿಡಿ
2024ರಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಆಗುತ್ತದೆ. ಟಿಕೆಟ್ ರಿಸರ್ವೇಷನ್ ಮಾಡಿ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡಿದ್ದಾರೆ. ನಿಮಗೆ ಕೇವಲ ತುಷ್ಟೀಕರಣ ನೆನಪಿದೆ. ಪಿಎಫ್‌ಐ ಬ್ಯಾನ್ ಮಾಡಿದ್ದು ಸರಿನಾ ಇಲ್ವಾ ನೀವು ಹೇಳಬೇಕು. ದೇಶ ವಿರೋಧಿ ಕೆಲಸ ಮಾಡುವವರು ಜೈಲಿಗೆ ಹೋಗುತ್ತಾರೆ. ಪಿಎಫ್‌ಐ ಅಜೆಂಡಾ ಮೇಲೆ ಸರ್ಕಾರ ನಡೆಯುತ್ತದೆ. ಕಾಂಗ್ರೆಸ್ ಅಧ್ಯಕ್ಷರು ಮೋದಿಗೆ ವಿಷ ಸರ್ಪ ಎನ್ನುತ್ತಾರೆ. ಇದು ಕಾಂಗ್ರೆಸ್‌ನ ಲೆವೆಲ್ ತೋರಿಸುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಚಿಕ್ಕಮಗಳೂರು ಅಖಾಡ ಹೇಗಿದೆ? – ಸತತ 5ನೇ ಬಾರಿ ಗೆಲ್ತಾರಾ ಸಿಟಿ ರವಿ?
ನಾವು ನಮ್ಮ ಪ್ರಣಾಳಿಕೆಯಲ್ಲಿ ಮೂರು ಉಚಿತ ಸಿಲಿಂಡರ್ ನೀಡುವುದಾಗಿ ಘೋಷಿಸಿದ್ದೇವೆ. ಗಣೇಶ ಚತುರ್ಥಿ, ಯುಗಾದಿ ಹಾಗೂ ದೀಪಾವಳಿಗೆ ಉಚಿತ ಸಿಲಿಂಡರ್ ನೀಡುತ್ತೇವೆ. ಸಮಾನ ನಾಗರಿಕ ಹಕ್ಕು ತರುವ ಭರವಸೆಯನ್ನು ಬಿಜೆಪಿ ನೀಡಿದೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಕಿತ್ತೂರು – ಧಾರವಾಡ ನೇರ ರೈಲು ಮಾರ್ಗ ಯೋಜನೆ ಆರಂಭಿಸಿದೆ. ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡಲು ಘೋಷಣೆ ಮಾಡಿದೆ. ಕರ್ನಾಟಕ ಅಭಿವೃದ್ಧಿ, ದೇಶದ ಸುರಕ್ಷತೆ ಮತ್ತು ದೇಶದ ಅಭಿವೃದ್ಧಿಯನ್ನು ಬಿಜೆಪಿ ಸರ್ಕಾರ ಮಾಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರವಿ ಕುಮಾರ್ ಶಾಸಕರಾಗುವುದು ಸತ್ಯ, ಕುಮಾರಸ್ವಾಮಿ ಸಿಎಂ ಆಗೋದು ಅಷ್ಟೇ ಸತ್ಯ: ಹೆಚ್‌ಡಿಡಿ