ಉಡುಪಿ: ಸೀರೆಯ ಒಳಗಿಟ್ಟು ಮಲ್ಲಿಗೆ ಹೂವನ್ನು ಸುತ್ತಿ ಬಿಜೆಪಿ (BJP Manifesto) ಜಿಲ್ಲಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ನಟಿ ತಾರಾ ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಇದೊಂದು ಅಪ್ಯಾಯಮಾನ ಘಟನೆ ಎಂದು ತಾರಾ (Actress Thara) ಹೇಳಿದರು.
Advertisement
ಭಾರತೀಯ ಜನತಾ ಪಾರ್ಟಿ (BJP) ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಸಮಾಜ ಕಲ್ಯಾಣ- ಹಿಂದುಳಿದ ವರ್ಗಗಳ ಸಚಿವ ಕೋಟಾ ಶ್ರೀನಿವಾಸ ಪೂಜಾರಿ (Kota Srinivas Poojary), ನಟಿ ತಾರಾ ಹಾಗೂ ಬಿಜೆಪಿಯ ಜಿಲ್ಲಾ ನಾಯಕರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 24 ವಿವಿಧ ಯೋಜನೆಗಳ ಪಟ್ಟಿಯನ್ನು ಪ್ರಣಾಳಿಕೆ ಮೂಲಕ ಬಿಜೆಪಿ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಹನುಮ ಭಕ್ತ ಬಜರಂಗದಳದವರು ಸಿಡಿದು ನಿಂತ್ರೆ ಬೇರು ಸಮೇತ ಕಿತ್ತೋಗ್ತೀರಿ: ಬೊಮ್ಮಾಯಿ
Advertisement
Advertisement
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಸರ್ಕಾರಿ ಮೆಡಿಕಲ್ ಕಾಲೇಜು ಕೈಗಾರಿಕಾ ವಲಯ ಕಿರು ಬಂದರು ಐಟಿ ಪಾರ್ಕ್ ಜೊತೆಗೆ ಪಾರಂಪರಿಕ ಕ್ಷೇತ್ರಗಳ ಕಾರಿಡಾರ್ ಯೋಜನೆ ಜಾರಿಗೆ ತರುವುದಾಗಿ ಭರವಸೆ ನೀಡಿದೆ. ಉಡುಪಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿ ಒಂದು ವಿಶೇಷ ಪ್ರಣಾಳಿಕೆ ಬಿಡುಗಡೆ ಎಂದು ಅನಿಸಿತು. ತಾಯಿಯ ಸೀರೆಯ ಸೆರಗಿನಿಂದ ಪ್ರಣಾಳಿಕೆಯನ್ನು ತೆಗೆದು ಬಿಡುಗಡೆ ಮಾಡಲಾಯಿತು. ನನಗೆ ಬಹಳ ಅಪ್ಯಾಯಮಾನ ಅನ್ನಿಸಿತು. ಸೃಷ್ಟಿ ಮಾಡುವ ಗುಣ ಇರುವುದು ತಾಯಿ ಮತ್ತು ಪ್ರಕೃತಿಗೆ ಮಾತ್ರ. ಅರ್ಥಪೂರ್ಣ ಭಾವ ಆಗಿತ್ತು ಎಂದು ತಾರಾ ಹೇಳಿದರು.
Advertisement
ಉಡುಪಿ ಜಿಲ್ಲೆ ಅಭಿವೃದ್ಧಿ ಹೊಂದಿದ ಜಿಲ್ಲೆಗಳ ಪಟ್ಟಿಯಲ್ಲಿದೆ ಜಿಲ್ಲೆ ಬೆಳೆದಂತೆ ಮತ್ತಷ್ಟು ಬೇಡಿಕೆಗಳು ಇದ್ದೇ ಇರುತ್ತದೆ. ಈ ಭಾಗದ ಜನರ ಉದ್ಯೋಗ ಶಿಕ್ಷಣ ಆರೋಗ್ಯಕ್ಕೆ ಸಂಬಂಧಪಟ್ಟಂತೆ 24 ವಂಶಗಳ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ರಾಜ್ಯ ಮಟ್ಟದಲ್ಲಿ ಪ್ರಣಾಳಿಕೆಯು ಬಿಡುಗಡೆಯಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆ ಮಾಡುತ್ತದೆ ಎಂದರು. ಇದನ್ನೂ ಓದಿ: ಕೆಸರು ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತೆಯ ಸೇನಾ ಹೆಲಿಕಾಪ್ಟರ್ – ಮುಂದೇನಾಯ್ತು?