ಬೆಂಗಳೂರು: ಕಾಂಗ್ರೆಸ್ (Congress) ಸ್ಟಾರ್ ಪ್ರಚಾರಕಿಯಾಗಿರುವ ಮಾಜಿ ಸಂಸದೆ, ನಟಿ ರಮ್ಯಾ (Ramya) ಚುನಾವಣೆ ಸಲುವಾಗಿ ಕಾಂಗ್ರೆಸ್‌ನ ಹಲವು ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ.
ಚುನಾವಣೆ (Election) ಸಂದರ್ಭದಲ್ಲಿ ಜನರ ಮತಗಳನ್ನು ತನ್ನತ್ತ ಸೆಳೆಯುವ ಸಲುವಾಗಿ ವಿವಿಧ ಪಕ್ಷಗಳು ಸ್ಟಾರ್ ಪ್ರಚಾರಕರ ಮೂಲಕ ಮತಯಾಚನೆ ಮಾಡಿಸುತ್ತಾರೆ. ಅದರಂತೆ ನಟಿ ರಮ್ಯಾ ಕಾಂಗ್ರೆಸ್ ಸ್ಟಾರ್ ಪ್ರಚಾರಕಿಯಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಮೇ 4ರಂದು ರಮ್ಯಾ ವರುಣಾ (Varuna) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಪರ ಪ್ರಚಾರ ನಡೆಸಲಿದ್ದಾರೆ. ಇದನ್ನೂ ಓದಿ: ತಪ್ಪಿ ಮೋದಿಯತ್ತ ಎಸೆದ ಮೊಬೈಲ್ ಮರಳಿ ಮಹಿಳೆಯ ಕೈಗೆ ಸಿಕ್ತು!
ಮೇ 6ರಂದು ಬಬಲೇಶ್ವರ (Babaleshwar) ಕ್ಷೇತ್ರದಲ್ಲಿ ಪ್ರಚಾರ ನಡೆಸಲಿರುವ ರಮ್ಯಾ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ (M.B.Patil) ಪರ ಮತಯಾಚಿಸಲಿದ್ದಾರೆ. ನಂತರ ಬೆಂಗಳೂರಿನ (Bengaluru) ಸರ್ವಜ್ಞ ನಗರದಲ್ಲಿ (Sarvagnanagar) ಕೆ.ಜೆ.ಜಾರ್ಜ್ (K.J.George) ಪರ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ. ಅಲ್ಲದೇ ಮಂಡ್ಯ (Mandya) ಜಿಲ್ಲೆಯಲ್ಲೂ ಸಹ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಹಳೇ ಮೈಸೂರು ಕ್ಷೇತ್ರಗಳನ್ನು ಕಬ್ಜ ಮಾಡಲು ಮೋದಿ ಪಣ – 25+ ಸ್ಥಾನ ಗೆಲ್ಲಲು ರಣತಂತ್ರ