ಮತದಾನ ಮಾಡುವುದು ಬಹಳ ಮುಖ್ಯ, ಅದು ನಮ್ಮ ಜವಬ್ದಾರಿ: ರಕ್ಷಿತ್ ಶೆಟ್ಟಿ

Public TV
1 Min Read
rakshit shetty 2

ಉಡುಪಿ: ಮತದಾನ ಮಾಡುವುದು ಬಹಳ ಮುಖ್ಯ ಅದು ನಮ್ಮ ಜವಬ್ದಾರಿ. ಹೀಗಾಗಿ ಮತದಾನ ಮಾಡಲು ನಾನು ಬೆಂಗಳೂರಿನಿಂದ ಬಂದಿದ್ದೇನೆ ಎಂದು ನಟ ರಕ್ಷಿತ್ ಶೆಟ್ಟಿ (Rakshit Shetty) ಹೇಳಿದ್ದಾರೆ.

ಉಡುಪಿಯಲ್ಲಿ ಮತದಾನ (Vote) ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಪಕ್ಷದ ಮೇಲೆ ಒಲವಿದೆ, ಪ್ರಚಾರಕ್ಕೆ ಹೋಗಲ್ಲ. ಜನರಿಗಾಗಿ ಕೆಲಸ ಮಾಡುವ ನಾಯಕರನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates

rakshith shetty

ನಾನು ಚಿಕ್ಕವನಾಗಿದ್ದಾಗ ಉಡುಪಿ ನಗರ ಬೆಳೆಯಬೇಕು ಎಂದು ಆಸೆ ಇತ್ತು. ಈಗ ಬಂದು ನೋಡಿದರೆ ಮೊದಲೇ ಚೆನ್ನಾಗಿತ್ತು ಎಂದು ಅನಿಸುತ್ತಿದೆ. ನಾಯಕನಾದವ ಊರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಕ್ಷೇತ್ರದ ಜನರ ಬೇಡಿಕೆಗಳನ್ನು ಈಡೇರಿಸಬೇಕು. ಹಳ್ಳಿ ಭಾಗದಲ್ಲಿ ಮತದಾನ ಬಗ್ಗೆ ಜನಕ್ಕೆ ಕಾಳಜಿ ಜಾಸ್ತಿ ಎಂದು ಹೇಳಿದರು.

ನಮ್ಮ ನಾಯಕ ಯಾರಾಗಬೇಕು ಎಂದು ಜನ ಹೆಚ್ಚೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡುತ್ತಾರೆ. ಸಿಟಿ ಲೈಫ್ ಬೇರೆ ಆಗಿರುತ್ತದೆ. ಯಾವ ನಾಯಕರು ಅಧಿಕಾರಕ್ಕೆ ಬರುತ್ತಾರೆ ಅಂತ ನಾವು ನಿರೀಕ್ಷೆ ಮಾಡುತ್ತಿದ್ದೇವೆ. ಯುವಜನರು ಯಾರನ್ನು ಆಯ್ಕೆ ಮಾಡುತ್ತಾರೆ ಅವರು ನಮ್ಮ ದೇಶದ ಭವಿಷ್ಯ ಆಗಿರುತ್ತಾರೆ. ಚುನಾವಣಾ ಪ್ರಕ್ರಿಯೆಗೆ ಹೊಸ ಹೊಸ ಮುಖಗಳು ಬರಲೇಬೇಕು. ಹೊಸ ನಾಯಕರು ಬಂದಾಗ ಹೊಸ ಹೊಸ ನಿರೀಕ್ಷೆಗಳು ಇರುತ್ತದೆ ಎಂದು ರಕ್ಷಿತ್ ತಿಳಿಸಿದರು.

Share This Article