ಬೆಂಗಳೂರು: ಕರ್ನಾಟಕದಲ್ಲಿ ಮತದಾನಕ್ಕೆ (Karnataka Election) ಬೆಂಗಳೂರು (Bengaluru) ನಗರ ಹೊರತು ಪಡಿಸಿ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಮಧ್ಯಾಹ್ನ 3 ಗಂಟೆಯ ವೇಳೆ ರಾಜ್ಯದಲ್ಲಿ ಒಟ್ಟು 52.18% ರಷ್ಟು ಮತದಾನ ನಡೆದಿದೆ. ರಾಮನಗರ 63.36%, ಉಡುಪಿ 60.29% ಬೆಂಗಳೂರು ಗ್ರಾಮಾಂತರ 60.14% ರಷ್ಟು ಮತದಾನ ನಡೆದಿದೆ. ಇದನ್ನೂ ಓದಿ: ಮತಯಂತ್ರಗಳನ್ನು ಒಡೆದು ದಾಂಧಲೆ ಪ್ರಕರಣ – 30 ಜನ ಪೊಲೀಸರ ವಶಕ್ಕೆ
Advertisement
Advertisement
ಪ್ರತಿ ಚುನಾವಣೆಯಂತೆ ಈ ಬಾರಿಯೂ ಬೆಂಗಳೂರಿನಲ್ಲಿ ಮತದಾನ ಕಡಿಮೆ ಪ್ರಮಾಣದಲ್ಲಿ ನಡೆದಿದೆ. ಬೆಳಗ್ಗೆ ಬೆಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಹಳ ಸಮಯ ಕಾದು ಮತವನ್ನು ಹಾಕಿದ್ದರು. ಆದರೆ ಮಧ್ಯಾಹ್ನದ ವೇಳೆ ಮತ ಪ್ರಮಾಣ ಕಡಿಮೆಯಾಗಿದೆ. ಇದನ್ನೂ ಓದಿ: Karnataka Election 2023 Live – ಕರ್ನಾಟಕದಲ್ಲಿ ಮಧ್ಯಾಹ್ನ 3 ಗಂಟೆವರೆಗೆ 52.18% ಮತದಾನ
Advertisement
ಬೆಂಗಳೂರಿನಲ್ಲಿಎಲ್ಲಿ ಎಷ್ಟು?
ಬಿಬಿಎಂಪಿ ಕೇಂದ್ರ – 40.69%
ಬಿಬಿಎಂಪಿ ಉತ್ತರ – 41.19%
ಬಿಬಿಎಂಪಿ ದಕ್ಷಿಣ – 40.28%
ಬೆಂಗಳೂರು ಗ್ರಾಮೀಣ – 60.14%
ಬೆಂಗಳೂರು ನಗರ – 41.82%