ಜೆಡಿಎಸ್‌ಗೆ ಸರಣಿ ಆಘಾತ – ಐವರು ನಾಯಕರು ಗುಡ್‌ಬೈ

Public TV
1 Min Read
Karnataka Election 2023 5 JDs leader joined congress ysv datta srinivas gowda gubbi srinivas at ramaswamy Shivalingedgowda

ಬೆಂಗಳೂರು: ಚುನಾವಣಾ ರಣೋತ್ಸಾಹದಲ್ಲಿರುವ (Karnataka Election 2023) ಜೆಡಿಎಸ್‍ಗೆ (JDS) ಸರಣಿ ಆಘಾತವಾಗಿದ್ದು ಐವರು ನಾಯಕರು ಗುಡ್‍ಬೈ ಹೇಳಿದ್ದಾರೆ.

ಕಡೂರಿನ ವೈಎಸ್‍ವಿ ದತ್ತಾ, ಕೋಲಾರದ ಶ್ರೀನಿವಾಸಗೌಡ, ಗುಬ್ಬಿ ಶ್ರೀನಿವಾಸ್, ಅರಕಲಗೂಡು ಎಟಿ ರಾಮಸ್ವಾಮಿ, ಅರಸೀಕೆರೆಯ ಶಿವಲಿಂಗೇಗೌಡ ಜೆಡಿಎಸ್‍ಗೆ ವಿದಾಯ ಹೇಳಿದ್ದಾರೆ.


ಇಂದು ವಿಧಾನಸಭೆ ಕಾರ್ಯದರ್ಶಿಗಳಿಗೆ ಎಟಿ ರಾಮಸ್ವಾಮಿ ರಾಜೀನಾಮೆ ಸಲ್ಲಿಸಿದ್ದಾರೆ. ಐವರು ನಾಯಕರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಸಾಧ್ಯತೆಯಿದೆ. ಇದನ್ನೂ ಓದಿ: ಜೆಡಿಎಸ್ ಪಕ್ಷ ನಾನು ಬಿಡ್ಲಿಲ್ಲ, ಅವರೇ ನನ್ನ ಹೊರಗೆ ಹಾಕಿದ್ರು: ಎಟಿ ರಾಮಸ್ವಾಮಿ

ಜೆಡಿಎಸ್‌ ಕೋಟೆ ಎಂದೇ ಪರಿಗಣೆನೆಯಾಗುತ್ತಿರುವ ಹಳೇ ಮೈಸೂರು ಭಾಗದಲ್ಲಿನ ನಾಯಕರೇ ಕಾಂಗ್ರೆಸ್‌ಗೆ ಜಂಪ್‌ ಆಗಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕೈ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ.

Share This Article