ಬೆಂಗಳೂರು: ಕಾಂಗ್ರೆಸ್ (Congress) ನ ಮೊದಲ ಪಟ್ಟಿ ಈಗಾಗಲೇ ಘೋಷಣೆಯಾಗಿದೆ. ಮೊದಲ ಲಿಸ್ಟ್ ನಲ್ಲಿ 124 ಮಂದಿ ಅಭ್ಯರ್ಥಿಗಳ ಹೆಸರನ್ನ ಘೋಷಣೆ ಮಾಡಲಾಗಿದೆ. ಆದರೆ ಇದೀಗ ಉಳಿದ ಕ್ಷೇತ್ರಗಳಲ್ಲಿ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕೊನೆಯ ಹಂತದ ಕಸರತ್ತು ನಡೆಸಿದ್ದಾರೆ.
Advertisement
100 ಕ್ಷೇತ್ರದಲ್ಲಿ 45 ಕ್ಷೇತ್ರದಲ್ಲಿ ತಮ್ಮವರಿಗೆ ಟಿಕೆಟ್ ಕೊಡಿಸಿಕೊಳ್ಳಲು ಇಬ್ಬರು ಬಿಗಿ ಪಟ್ಟು ಹಿಡಿದಿದ್ದಾರಂತೆ. 45 ಕ್ಷೇತ್ರಗಳೇ ಸಿದ್ದರಾಮಯ್ಯ ಹಾಗೂ ಡಿಕೆಶಿ ಪಾಲಿಗೆ ನಿರ್ಣಾಯಕವಾಗುತ್ತಾ. ಮಧ್ಯರಾತ್ರಿವರೆಗೆ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿದರು ಇಬ್ಬರದ್ದು ಮುಗಿಯದ ಕಥೆಯಾಗಿದೆ. ದೆಹಲಿ ಅಂಗಳದಲ್ಲಿ ಹೈಕಮಾಂಡ್ ಸಮ್ಮುಖದಲ್ಲಿ ಇಬ್ಬರಲ್ಲಿ ಯಾರು ಪವರ್ ಫುಲ್ ನಾಯಕರು ಅನ್ನೋ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಾವುಟ ಹಾರಿಸ್ತೇವೆ, ದಶಪಥ ಹೆದ್ದಾರಿ ದೊಡ್ಡ ಶಕ್ತಿ – ಪ್ರತಾಪ್ ಸಿಂಹ
Advertisement
Advertisement
ಇಲ್ಲಿವರೆಗೆ ಟಿಕೆಟ್ ಹಂಚಿಕೆ ಟ್ರಯಲ್ ಆಗಿದ್ದು, ಮುಂದಿನದು ಅಸಲಿ ಆಟದ ರಿಯಲ್ ಫೈಟಾ ಶುರುವಾಗುತ್ತಾ..? ಮೊದಲ ಪಟ್ಟಿ ಪ್ರಕಟದ ವೇಳೆ ಈ ರೀತಿ ಯಾವುದೇ ಗೊಂದಲ ಇರಲಿಲ್ಲ. ಆದರೆ ಎರಡನೇ ಪಟ್ಟಿಯಲ್ಲಿ ದೊಡ್ಡ ಮಟ್ಟದಲ್ಲಿ ಗೊಂದಲ ಉಂಟಾಗಿದೆ. 100ರಲ್ಲಿ ಅಳೆದು ತೂಗಿ 50ಕ್ಕೂ ಹೆಚ್ಚು ಸಿಂಗಲ್ ನೇಮ್ ಫೈನಲ್ ಮಾಡಲಾಗಿದೆ. ಆದರೆ ಸಿಎಂ ಖುರ್ಚಿ ಕದನದ ಕನವರಿಕೆಯಲ್ಲಿ ಇರುವ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಾತ್ರ ಉಳಿದ ಪಟ್ಟಿಯಲ್ಲಿ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಹಠಕ್ಕೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
Advertisement
ಒಟ್ಟಾರೆ ಸಿಎಂ ಕುರ್ಚಿ ಕದನ ಕಾಂಗ್ರೆಸ್ ಟಿಕೆಟ್ ಫೈಟ್ ಜೋರಾಗುವಂತೆ ಮಾಡಿದೆ ಅನ್ನೋದೇ ಸದ್ಯದ ಕುತೂಹಲ.