20ಕ್ಕೂ ಹೆಚ್ಚು ಬಿಜೆಪಿ ಶಾಸಕರಿಗೆ ಕೊಕ್‌ – ಲಿಸ್ಟ್‌ನಲ್ಲಿ ಯಾರಿದ್ದಾರೆ?

Public TV
2 Min Read
BJP Meting modi nadda amit shah yediyurappa bl santosh

ನವದೆಹಲಿ: ಅಭ್ಯರ್ಥಿಗಳ ಆಯ್ಕೆಗೆ ತೀವ್ರ ಕಸರತ್ತು ನಡೆಸುತ್ತಿರುವ ಬಿಜೆಪಿ (BJP) ಇಂದು ತನ್ನ ಮೊದಲ ಪಟ್ಟಿ ಪ್ರಕಟಿಸುತ್ತಿದೆ. ಇಂದು ಮಧ್ಯಾಹ್ನದ ವೇಳೆಗೆ 175 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಿದೆ. ಭಾನುವಾರ ಚುನಾವಣಾ ಸಮಿತಿ ಸಭೆ ನಡೆಸಿರುವ ವರಿಷ್ಠರು ಸಚಿವರು ಸೇರಿದಂತೆ 85ಕ್ಕೂ ಹೆಚ್ಚು ಹಾಲಿ ಶಾಸಕರ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಕರ್ನಾಟಕದಲ್ಲಿ ಗುಜರಾತ್, ಉತ್ತರ ಪ್ರದೇಶದ ಮಾದರಿಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಹಿಂದೇಟು ಹಾಕಿರುವ ಬಿಜೆಪಿ ಹೈಕಮಾಂಡ್‌ (BJP High Command) ಬಹುತೇಕ ಸಚಿವರು ಮತ್ತು ಹಾಲಿ ಶಾಸಕರಿಗೆ ಟಿಕೆಟ್ ನೀಡಲು ನಿರ್ಧರಿಸಿದೆ. ಸುಮಾರು 20 ಶಾಸಕರಿಗೆ ಟಿಕೆಟ್ ತಪ್ಪಬಹುದು ಎನ್ನಲಾಗಿದ್ದು ಸರ್ವೆ ವರದಿಗಳಲ್ಲಿ ಖುಣಾತ್ಮಕ ವರದಿ ಬಂದಿರುವ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಕೈ ಬಿಡಲಾಗುತ್ತಿದೆ.

ಈ ಬಾರಿ ಬಿಜೆಪಿಗೆ ಹಿನ್ನಡೆಯಾಗಬಹುದು ಎಂದು ಚುನಾವಣಾ ಸಮೀಕ್ಷೆಗಳು ತಿಳಿಸಿದ ಬೆನ್ನಲ್ಲೇ ಹೈಕಮಾಂಡ್‌  ನಾಯಕರು ಸರಣಿ ಸಭೆ ನಡೆಸಿ ಅಭ್ಯರ್ಥಿಗಳ ಹೆಸರನ್ನು ಫೈನಲ್‌ ಮಾಡುತ್ತಿದ್ದಾರೆ.  ಈ ಬಾರಿ ಎರಡು ಡಜನ್‌ಗೂ ಹೆಚ್ಚು ಶಾಸಕರನ್ನು ಕೈ ಬಿಡುವ ಸಾಧ್ಯತೆ ಇದ್ದು,  ಆಡಳಿತ ವಿರೋಧಿ ಅಲೆ, ಭ್ರಷ್ಟಾಚಾರ ಆರೋಪ, ಚಾರಿತ್ರ್ಯ ಕಾರಣದಿಂದ ಇಮೇಜ್ ಕಳೆದುಕೊಂಡ ನಾಯಕರಿಗೆ ಗೇಟ್ ಪಾಸ್ ನೀಡಲು ಸಭೆ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.  ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಫೈನಲ್ – 85ಕ್ಕೂ ಹೆಚ್ಚು ಹಾಲಿ ಶಾಸಕರ ಹೆಸರು ಫೈನಲ್?

BJP meeting2 e1681091958588

ಈ ಶಾಸಕರಿಗೆ ಟಿಕೆಟ್‌ ಕೈತಪ್ಪುತ್ತಾ?
ಚನ್ನಗಿರಿ – ಮಾಡಾಳ್ ವಿರೂಪಾಕ್ಷಪ್ಪ
ಹಾವೇರಿ – ನೆಹರೂ ಓಲೆಕಾರ್
ಮೂಡಿಗೆರೆ – ಎಂ ಪಿ ಕುಮಾರಸ್ವಾಮಿ
ಚಿತ್ರದುರ್ಗ – ಜಿ ಎಚ್ ತಿಪ್ಪಾರೆಡ್ಡಿ
ಯಾದಗಿರಿ – ವೆಂಕಟರೆಡ್ಡಿ ಮುದ್ನಾಳ

ಕನಕಗಿರಿ – ಬಸವರಾಜ ದಡೇಸುಗೂರು
ಶಿವಮೊಗ್ಗ – ಕೆ ಎಸ್ ಈಶ್ವರಪ್ಪ
ಅಥಣಿ – ಮಹೇಶ್ ಕುಮಟಳ್ಳಿ
ರಾಣೆಬೆನ್ನೂರು – ಅರುಣ್ ಕುಮಾರ್ ಪೂಜಾರ್
ರಾಯಚೂರು – ಡಾ.ಶಿವರಾಜ್ ಪಾಟೀಲ್
ಪುತ್ತೂರು – ಸಂಜೀವ್ ಮಠಂದೂರು

ಉಡುಪಿ – ರಘುಪತಿ ಭಟ್
ಭಟ್ಕಳ – ಸುನೀಲ್ ನಾಯ್ಕ
ಸೊರಬ – ಕುಮಾರ್ ಬಂಗಾರಪ್ಪ
ಆಳಂದ – ಸುಭಾಷ್ ಗುತ್ತೇದಾರ್
ಹೊಸದುರ್ಗ – ಗೂಳಿಹಟ್ಟಿ ಶೇಖರ್

ಧಾರವಾಡ – ಅಮೃತ ದೇಸಾಯಿ
ದಾವಣಗೆರೆ ಉತ್ತರ – ಎಸ್ ಎ ರವೀಂದ್ರನಾಥ್
ಕಾಪು – ಲಾಲಾಜಿ ಮೆಂಡನ್
ಚಿಕ್ಕಪೇಟೆ – ಉದಯ್ ಗರುಡಾಚಾರ್
ಎಸ್.ಎ.ರವೀಂದ್ರನಾಥ್– ದಾವಣಗೆರೆ ಉತ್ತರ (ನಿವೃತ್ತಿ ಘೋಷಣೆ)

ಲಿಂಗಣ್ಣ– ಮಾಯಕೊಂಡ
ಅಥಣಿ – ಮಹೇಶ್ ಕುಮಟಳ್ಳಿ
ಕಾಗವಾಡ- ಶ್ರೀಮಂತ ಪಾಟೀಲ್
ಬೈಂದೂರು- ಸುಕುಮಾರ್ ಶೆಟ್ಟಿ

Share This Article