ಗದಗ: ಚುನಾವಣೆ (Election) ಹಿನ್ನೆಲೆ ಇಂದು ಮತದಾನ (Voting) ನಡೆಯುತ್ತಿದ್ದು, ಗದಗದಲ್ಲಿ (Gadag) 10 ದಿನದ ಬಾಣಂತಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ವರ್ಷಾ ಪವಾರ್ ಗದಗ ನಗರದ ಮತಗಟ್ಟೆ ಸಂಖ್ಯೆ 85ರಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಬಾಣಂತಿಯಾಗಿದ್ದರಿಂದ ಇತರೆ ಮತದಾರರು ಅವರಿಗೆ ಮೊದಲು ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ಬಾಣಂತಿ ಮೊದಲು ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates
Advertisement
Advertisement
ಬಾಣಂತಿಯಾಗಿದ್ದರೂ ಮರೆಯದೇ ಬಂದು ಮತದಾನ ಮಾಡಿ, ಹಕ್ಕು ಚಲಾವಣೆ ಮಾಡಿದ್ದಕ್ಕಾಗಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತದಾನ ಮಾಡುವುದು ಬಹಳ ಮುಖ್ಯ, ಅದು ನಮ್ಮ ಜವಬ್ದಾರಿ: ರಕ್ಷಿತ್ ಶೆಟ್ಟಿ