ಬಿಜೆಪಿ: ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳು ರಣತಂತ್ರ ರೂಪಿಸುತ್ತಿದ್ದು, ಬಿಜೆಪಿಯಂತೂ(BJP) ಹೇಗಾದ್ರೂ ಮಾಡಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ನಾನಾ ತಂತ್ರ ಮಾಡುತ್ತಿದೆ.
ಗೆಲ್ಲುವ ಅಭ್ಯರ್ಥಿಗಳ ಶೋಧಕ್ಕಾಗಿ ಡಿಸೆಂಬರ್(December) ಮೊದಲ ವಾರದವರೆಗೂ ಮೊದಲ ಹಂತದ ಟಿಕೆಟ್ ಸರ್ವೇಯನ್ನು(Survey) ಬಿಜೆಪಿ ನಡೆಸಲಿದೆ. ಎಲೆಕ್ಷನ್ ಒಳಗೆ ಒಟ್ಟು ಮೂರು ಸಮೀಕ್ಷೆಗಳನ್ನು ನಡೆಸಿ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಅಂತಿಮ ಮಾಡಲಿದೆ. ಇದನ್ನೂ ಓದಿ: ಪಕ್ಷದಲ್ಲಿ ಕುರ್ಚಿ ಆಸೆಬಿಟ್ಟು ಕೆಲಸ ಮಾಡಿ – ಖರ್ಗೆ ಕರೆ
ಬೇರೆ ರಾಜ್ಯಗಳಲ್ಲಿ ಮಾಡಿದಂತೆ ಹೊಸ ಮುಖ ಬಿಜೆಪಿ ಮಣೆ ಹಾಕುವ ಸಾಧ್ಯತೆಯಿದೆ. ಸದ್ಯ ಗುಜರಾತ್ ಎಲೆಕ್ಷನ್(Gujarat Election) ಬಗ್ಗೆ ತಲೆ ಕೆಡಿಸಿಕೊಂಡಿರುವ ಬಿಜೆಪಿ ಹೈಕಮಾಂಡ್(BJP High Command) ಅಲ್ಲಿನ ಫಲಿತಾಂಶ ಹೊರಬಿದ್ದ ನಂತರ ಕರ್ನಾಟಕದ(Karnataka) ಕಡೆ ತಲೆ ಹಾಕಲಿದೆ. ಕೇಸರಿ ಪಡೆ ಪ್ರಕಾರ ಡಿಸೆಂಬರ್ ಮೂರನೇ ವಾರದಿಂದ ರಾಜ್ಯದಲ್ಲಿ ಅಸಲಿ ರಾಜಕೀಯದಾಟ ಶುರುವಾಗಲಿದೆ.
ದೆಹಲಿ ನಾಯಕರೆಲ್ಲಾ ಹೆಚ್ಚು ಕಡಿಮೆ ರಾಜ್ಯದಲ್ಲೇ ಠಿಕಾಣಿ ಹೂಡಲಿದ್ದಾರೆ. ಕಡೆಯ ನಾಲ್ಕು ತಿಂಗಳಲ್ಲಿ ದೆಹಲಿ ಟೀಂ ಆಣತಿಯಂತೆ ರಾಜ್ಯ ಬಿಜೆಪಿ ನಡೆದುಕೊಳ್ಳಲಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.