ಬೆಂಗಳೂರು: ಇಂದಿನಿಂದ ಕರ್ನಾಟಕ ಕುರುಕ್ಷೇತ್ರ ಮತ್ತಷ್ಟು ಬಿಸಿಯೇರಲಿದೆ. ಕಾರಣ ಮೇ 12 ರಂದು ನಡೆಯೋ ವಿಧಾನಸಭೆ ಚುನಾವಣೆಗೆ ಇವತ್ತು ಅಧಿಸೂಚನೆ ಹೊರಬೀಳಲಿದ್ದು, ಇಂದಿನಿಂದಲೇ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗಲಿದೆ. ಇಂದಿನಿಂದ ಏಪ್ರಿಲ್ 24ರವರೆಗೂ ವಿಧಾನಸಭೆ ಚುನಾವಣೆಗೆ ಉಮೇದುವಾರು ನಾಮಪತ್ರ ಸಲ್ಲಿಸಬಹುದಾಗಿದೆ.
ಈಗಾಗಲೇ ಕಾಂಗ್ರೆಸ್ ಬಹುತೇಕ ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಮಾಡಿದ್ದು, ಬಿಜೆಪಿ ಜೆಡಿಎಸ್ ಪಕ್ಷಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದ್ರೂ, ಬಿ ಫಾರಂ ಹಂಚಿಕೆಯಲ್ಲಿ ಬಿಜೆಪಿ ಫಸ್ಟ್ ಇದೆ. ಗೌರಿಬಿದನೂರಿನ ಜೈಪಾಲ್ ರೆಡ್ಡಿ, ನೆಲಮಂಗಲ ನಾಗರಾಜು, ಹರಿಹರದ ಬಿ.ಪಿ. ಹರೀಶ್, ಕುಣಿಗಲ್‍ನ ಕೃಷ್ಣಕುಮಾರ್ ಬಿ.ಫಾರಂ ಪಡೆದುಕೊಂಡಿದ್ದಾರೆ. ಬಿ ಪಾರಂ ಹಂಚಿಕೆ ಪ್ರಕ್ರಿಯೆ ಇವತ್ತು ಮತ್ತಷ್ಟು ಚುರುಕು ಪಡೆದುಕೊಳ್ಳಲಿದೆ.
ಮೊದಲ ದಿನವಾದ ಇವತ್ತು ಹಲವರು ನಾಮಪತ್ರ ಸಲ್ಲಿಸೋ ಸಾಧ್ಯತೆಗಳಿವೆ. ಸಿಎಂ ಸಿದ್ದರಾಮಯ್ಯ ಇದೇ 20ಕ್ಕೆ ನಾಮಿನೇಷನ್ ಹಾಕಲಿದ್ದಾರೆ. ಏಪ್ರಿಲ್ 25ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏಪ್ರಿಲ್ 27ರಂದು ನಾಮಪತ್ರ ಹಿಂಪಡೆಯಲು ಕಡೇ ದಿನವಾಗಿದೆ. ಅಂದ ಹಾಗೇ, ಉಮೇದುವಾರರು ನಾಮಪತ್ರ ಸಲ್ಲಿಸಲು ಕೆಲ ಷರತ್ತುಗಳನ್ನು ಪೂರೈಸಲೇಬೇಕಾಗುತ್ತದೆ.
ನಾಮಪತ್ರ ಸಲ್ಲಿಕೆಗೆ ಷರತ್ತುಗಳು:
* ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ.
* ನಾಮಪತ್ರ ಸಲ್ಲಿಸಲು ಬರುವ ಅಭ್ಯರ್ಥಿಯ ಜೊತೆಯಲ್ಲಿ ಐವರು ಬೆಂಬಲಿಗರಿಗೆ ಅವಕಾಶ.
* ನಾಮತ್ರ ಸಲ್ಲಿಸಲು ಒಬ್ಬ ಅಭ್ಯರ್ಥಿ ಕೇವಲ ಮೂರು ವಾಹನಗಳ ಜೊತೆ ಮಾತ್ರ ಬರಬೇಕು.
* ನಾಮಪತ್ರ ಸಲ್ಲಿಸುವವರು ಬೇರೆ ಕ್ಷೇತ್ರದ ಅಭ್ಯರ್ಥಿ ಆಗಿದ್ದರೆ, ಎರಡು ರೀತಿಯ ಅಫಿಡವಿಟ್ ಸಲ್ಲಿಸಬೇಕು.
* ಅರ್ಜಿಯಲ್ಲಿ ಎಲ್ಲಾ ಮಾಹಿತಿ ನೀಡೋದು ಕಡ್ಡಾಯ.. ಇಲ್ಲದಿದ್ರೆ ನಾಮಪತ್ರ ತಿರಸ್ಕøತಗೊಳ್ಳುತ್ತದೆ.
* ನಾಮಪತ್ರ ಸಲ್ಲಿಸುವ ಎಸ್.ಸಿ, ಎಸ್.ಟಿ ಅಭ್ಯರ್ಥಿಗಳು ಐದು ಸಾವಿರ ಹಣ ಠೇವಣಿ ಇಡಬೇಕು.
* ಇತರೆ ವರ್ಗದ ಅಭ್ಯರ್ಥಿಗಳು ಕಡ್ಡಾಯವಾಗಿ ಹತ್ತು ಸಾವಿರ ಡೆಪಾಸಿಟ್ ಹಣ ಕಟ್ಟಬೇಕು.
* ಅಭ್ಯರ್ಥಿಗಳು ಹೊಸ ಬ್ಯಾಂಕ್ ಅಕೌಂಟ್ ತೆರೆದು, ಅಲ್ಲಿಂದಲೇ ಹಣ ಖರ್ಚು ಮಾಡಬೇಕು.