ಮೈಸೂರು: ಮೈಸೂರು ರಾಜವಂಶಸ್ಥರ ಜೊತೆಗಿನ ಮಾತುಕತೆಯ ರಹಸ್ಯವನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಮನೆತನದವರ ಜೊತೆಗಿನ ಮಾತುಕತೆ ಸೌಹಾರ್ದತೆಯುತವಾಗಿದೆ. ಹೀಗಾಗಿ ಅವರ ಜೊತೆಯ ಮಾತುಕತೆಯನ್ನು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
Advertisement
ಟಿಕೆಟ್ ಕೊಡುವಾಗ ಅಭ್ಯರ್ಥಿಯ ಸಾರ್ವಜನಿಕ ಜೀವನವನ್ನು ಮಾನದಂಡವಾಗಿ ಬಳಸುತ್ತೇವೆ. ಕರ್ನಾಟಕದಲ್ಲಿ ನಮಗೆ ಚುನಾವಣೆ ಎದುರಿಸೋಕೆ ಯಾವುದೇ ಕಷ್ಟ ಇಲ್ಲ. 21 ರಾಜ್ಯಗಳ ಚುನಾವಣೆಯಂತೆಯೂ ಇಲ್ಲಿಯೂ ಚುನಾವಣೆ ಎದುರಿಸುತ್ತೇವೆ. ಇಲ್ಲಿ ಸರಳ ಚುನಾವಣೆಯನ್ನೆ ಬಿಜೆಪಿ ಎದುರಿಸುತ್ತೇವೆ. ನಮಗೆ ಸಿದ್ದರಾಮಯ್ಯನವರನ್ನು ಎದುರಿಸುವಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇಲ್ಲಿನ ಜನರೇ ನಮ್ಮ ತೀರ್ಮಾನ ಮಾಡಿದ್ದಾರೆ ಎಂದರು.
Advertisement
ಸಿದ್ದರಾಮಯ್ಯ ಸರ್ಕಾರ ಬದಲಾಯಿಸಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಕಾಂಗ್ರೆಸ್ ಗೆ ಭ್ರಷ್ಟಾಚಾರ ಎನ್ನುವುದು ಮೀನು ಮತ್ತು ನೀರಿನ ಸಂಬಂಧ ಇದ್ದಂತೆ. ಕಾಂಗ್ರೆಸ್ ಹೈಕಮಾಂಡ್ ಗೆ ಕರ್ನಾಟಕ ಸರ್ಕಾರದ ಎನ್ನುವುದು ಭ್ರಷ್ಟಾಚಾರದ ಎಟಿಎಂ ಇದ್ದಂತೆ ಎಂದು ಹೇಳಿ ವಾಗ್ದಾಳಿ ನಡೆಸಿದರು.
Advertisement
It is only because of the Congress party, the Bill conferring constitutional status to the OBC Commision is still stuck in the Parliament. Siddaramaiah and Congress party have to answer the people of backward community for blocking the Bill on purpose. pic.twitter.com/IAxhCVUnNu
— Amit Shah (@AmitShah) March 31, 2018
Advertisement
ಮೈಸೂರು ಭಾಗದಲ್ಲಿ ನಾವು ಒಂದು ಸೀಟು ಗೆದ್ದಿಲ್ಲ. ಹೀಗಾಗಿ ಈ ಬಾರಿ ಹೆಚ್ಚು ಗಮನ ಹರಿಸಿರುವುದು ನಿಜ. ಈ ಬಾರಿ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಅನಂತ್‍ಕುಮಾರ್, ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್, ಮಾಜಿ ಸಚಿವ ಆರ್.ಅಶೋಕ್, ಸಿಟಿ.ರವಿ, ಸಂಸದ ಪ್ರತಾಪ್ ಸಿಂಹ ಉಪಸ್ಥಿತರಿದ್ದರು.
ದೇವಾಲಯಕ್ಕೆ ಭೇಟಿ: ಮೈಸೂರು ಅರಮನೆ ಮುಂಭಾಗದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹನುಮಜಯಂತಿ ಹಿನ್ನೆಲೆಯಲ್ಲಿ ಭೇಟಿ ನೀಡಿದರು. ಎಲ್ಲೆ ಹೋದರೂ ಪ್ರತಿ ಶನಿವಾರ ಆಂಜನೇಯ ದೇವಾಲಯಕ್ಕೆ ಅಮಿತ್ ಶಾ ಭೇಟಿ ನೀಡುತ್ತಿದ್ದು, ಈ ವೇಳೆ ಹಲವು ಬಿಜೆಪಿ ನಾಯಕರು ಸಾಥ್ ನೀಡಿದರು.
Visited the home of Late Shri Rajendrappa ji and paid condolence to the bereaved family. It is very disheartening to see that Siddaramaiah led state govt has constantly failed to address farmer related issues. pic.twitter.com/ti6D66E7nH
— Amit Shah (@AmitShah) March 31, 2018
On the auspicious occasion of Hanuman Jayanti, took blessings of Bhagwan Shri Hanuman at Kote Sri Anjaneya Swamy Temple in Mysuru. pic.twitter.com/xaFoOzc5mv
— Amit Shah (@AmitShah) March 31, 2018