ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಭಾರತೀಯ ಜನತಾ ಪಕ್ಷ ಕೇವಲ ನಗರದ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳಿಸುವುದರ ಜೊತೆಗೆ ಗ್ರಾಮೀಣ ಭಾಗದಲ್ಲೂ ತನ್ನ ಸಾಮರ್ಥ್ಯವನ್ನು ವೃದ್ಧಿಸಿದೆ.
ಬಿಜೆಪಿಯನ್ನು ನಗರದ ಜನತೆ ಜಾಸ್ತಿ ಬೆಂಬಲಿಸಿದರೆ, ಗ್ರಾಮೀಣ ಭಾಗದ ಜನತೆ ಕಾಂಗ್ರೆಸ್ ಬೆಂಬಲಿಸುತ್ತಾರೆ ಎನ್ನುವ ಮಾತಿದೆ. ಗುಜರಾತ್ ಚುನಾವಣೆಯಲ್ಲಿ ಇದು ಸಾಬೀತಾಗಿತ್ತು. ಹೀಗಾಗಿ ಈ ಬಾರಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನವಾಗಿರುವ ಕಾರಣ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಬಹುದು ಎನ್ನುವ ಲೆಕ್ಕಾಚಾರವನ್ನು ರಾಜಕೀಯ ಪಂಡಿತರು ಮುಂದಿಟ್ಟಿದ್ದರು. ಆದರೆ ಈ ಲೆಕ್ಕಾಚಾರ ತಲೆಕೆಳಗಾಗಿದ್ದು ಗ್ರಾಮೀಣ ಭಾಗದಲ್ಲೂ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನವನ್ನು ಗೆದ್ದುಕೊಂಡಿದೆ.
Advertisement
Advertisement
ಈ ಬಾರಿ ಎಷ್ಟು ಏರಿಕೆಯಾಗಿದೆ?
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗ್ರಾಮೀಣ ಭಾಗದಲ್ಲಿ 82, ನಗರದಲ್ಲಿ 40 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಗ್ರಾಮೀಣ ಭಾಗದಲ್ಲಿ 51 ಸ್ಥಾನ, ನಗರಗಳಲ್ಲಿ 27 ಸ್ಥಾನಗಳನ್ನು ಗೆದ್ದುಕೊಂಡಿದೆ.
Advertisement
2013ರಲ್ಲಿ ಗ್ರಾಮೀಣದಲ್ಲಿ 22, ನಗರದಲ್ಲಿ 18 ಸ್ಥಾನ ಗೆದ್ದಿದ್ದ ಬಿಜೆಪಿ, ಈ ಬಾರಿ ಗ್ರಾಮೀಣ ಭಾಗದಲ್ಲಿ ಗೆದ್ದ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ 69, ನಗರದಲ್ಲಿ 35 ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡಿದೆ.
Advertisement
ಜನತಾ ದಳ ಸ್ಥಾನದ ಪ್ರಮಾಣದಲ್ಲಿ ನಿಖರತೆಯನ್ನು ಮುಂದುವರೆಸಿದ್ದು, 2013 ರಲ್ಲಿ ಗ್ರಾಮೀಣದಲ್ಲಿ 30, ನಗರದಲ್ಲಿ 10 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಗ್ರಾಮೀಣ ಭಾಗದಲ್ಲಿ 2 ಕ್ಷೇತ್ರ ಕಳೆದುಕೊಂಡು 28 ಸ್ಥಾನ ಗೆದ್ದರೆ, ನಗರ ಭಾಗದಲ್ಲಿ ಒಟ್ಟು 9 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಈ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬಿಜೆಪಿ ಗೆದ್ದರೂ ಶೇಖಡವಾರು ಮತಗಳಿಕೆಯ ಪ್ರಮಾಣದಲ್ಲಿ ಕಾಂಗ್ರೆಸ್ ಮುಂದಿದೆ. 2013 ರಲ್ಲಿ ಕಾಂಗ್ರೆಸ್ 36.6% ಮತ ಪಡೆದಿದ್ದರೆ, ಈ ಬಾರಿ 38% ಮತ ಪ್ರಮಾಣ ಪಡೆದಿದೆ. ಬಿಜೆಪಿ 2013 ರಲ್ಲಿ ಕೇವಲ 19.9% ಮತಗಳನ್ನು ಪಡೆದಿದ್ದರೆ, ಈ ಬಾರಿ 36.2% ರಷ್ಟು ಮತ ಪಡೆದಿದೆ. ಉಳಿದಂತೆ ಜೆಡಿಎಸ್ 2013ರಲ್ಲಿ 20.2% ಮತ ಪಡೆದಿದ್ದರೆ, ಈ ಬಾರಿ 18.4% ರಷ್ಟು ಮತ ಪಡೆಯುವಲ್ಲಿ ಯಶಸ್ವಿಯಾಗಿದೆ.