ಬೆಂಗಳೂರು: ಇವತ್ತು ಕರ್ನಾಟಕದ ಪಾಲಿಗೆ ನಿರ್ಣಾಯಕ ದಿನ. ಮುಂದಿನ ಸರ್ಕಾರ ಯಾರದ್ದು ಎಂದು ಗೊತ್ತಾಗಲಿರುವ ಮಹತ್ವದ ದಿನ. ಸಿಎಂ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ, ಕುಮಾರಸ್ವಾಮಿ ಸೇರಿ ಹಲವು ಘಟಾನುಘಟಿ ರಾಜಕಾರಣಿಗಳ ರಾಜಕೀಯ ಭವಿಷ್ಯ ಇಂದು ನಿರ್ಧಾರ ಆಗಲಿದೆ.
ಬೆಳಗ್ಗೆ 8 ಗಂಟೆಯಿಂದ ರಾಜ್ಯದ 38 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಶುರುವಾಗಿದ್ದು, ಬೆಳಗ್ಗೆ 11 ಗಂಟೆ ಹೊತ್ತಿಗೆ ಸ್ಪಷ್ಟ ಫಲಿತಾಂಶ ಲಭ್ಯವಾಗಲಿದೆ. ಹೀಗಾಗಿ ಕರ್ನಾಟಕ ಚುನಾವಣೆಗೆ ಸಂಬಂಧಿಸಿದ ಲೈವ್ ಮಾಹಿತಿ ಇಲ್ಲಿದೆ.
Advertisement
ಬೆಳಗ್ಗೆ 8.40: ಬೀದರ್ ದಕ್ಷಿಣದಲ್ಲಿ ಅಶೋಕ್ ಖೇಣಿಗ ಹಿನ್ನಡೆ
Advertisement
ಬೆಳಗ್ಗೆ 8.35: ದಕ್ಷಿಣ ಕನ್ನಡದ 5 ಜಿಲ್ಲೆಗಳಲ್ಲಿ ಬಿಜೆಪಿಗೆ ಮುನ್ನಡೆ
Advertisement
ಬೆಳಗ್ಗೆ 8.33: 4ರಲ್ಲಿ ಜೆಡಿಎಸ್, 2ರಲ್ಲಿ ಕಾಂಗ್ರೆಸ್, 1ರಲ್ಲಿ ಬಿಜೆಪಿಗೆ ಮುನ್ನಡೆ
Advertisement
ಬೆಳಗ್ಗೆ 8.20: ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರಿಗೆ 3479 ಮತಗಳಿಂದ ಹಿನ್ನಡೆ
ಬೆಳಗ್ಗೆ 8.14: ದಕ್ಷಿಣ ಕನ್ನಡದಲ್ಲಿ ಬಿಜೆಪಿ-2, ಮೂರರಲ್ಲಿ ಕಾಂಗ್ರೆಸ್ ಗೆ ಮುನ್ನಡೆ
ಬೆಳಗ್ಗೆ 8.12: ಉಡುಪಿಯ 5 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ
ಬೆಳಗ್ಗೆ 8.05: ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರಿಗೆ ಆರಂಭಿಕ ಹಿನ್ನಡೆ – ಜಿ. ಟಿ ದೇವೇ ಗೌಡರಿಗೆ ಮುನ್ನಡೆ
ಬೆಳಗ್ಗೆ 8.05: ಬೆಂಗಳೂರಿನಲ್ಲಿ ಶಾಂತಿನಗರದ ಹ್ಯಾರಿಸ್ ಗೆ ಮುನ್ನಡೆ, ಮಂಗಳೂರಿನಲ್ಲಿ ರಮಾನಾಥ್ ರೈಗೆ ಮುನ್ನಡೆ
ಬೆಳಗ್ಗೆ 7.52: ಕಾಂಗ್ರೆಸ್-08, ಬಿಜೆಪಿ-07, ಜೆಡಿಎಸ್-01 ಅಂಚೆ ಮತಗಳಲ್ಲಿ ಮುನ್ನಡೆಯನ್ನು ಸಾಧಿಸಿವೆ.
ಬೆಳಗ್ಗೆ 744: ದೆಹಲಿಯ ಎಐಸಿಸಿ ಕಚೇರಿಯಲ್ಲಿ ಹೋಮ-ಹವನ
ಬೆಳಗ್ಗೆ 7.41: ಇವಿಎಂಗೂ ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ಮಂಗಳೂರಲ್ಲಿ ಆರಂಭ, ರಾಜ್ಯಾದ್ಯಂತ ಅಂಚೆ ಮತಗಳ ಎಣಿಕೆ ಕಾರ್ಯ ಪ್ರಾರಂಭ
ಬೆಳಗ್ಗೆ 7.35: ಮುಖ್ಯಮಂತ್ರಿಗಳ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸ್ಟ್ರಾಂಗ್ ರೂಂ ಓಪನ್
ಬೆಳಗ್ಗೆ 7.31: ಕಾರವಾರದಲ್ಲಿ ಅರ್ಧ ಗಂಟೆಗೂ ಮೊದಲೇ ಮತ ಎಣಿಕೆ ಆರಂಭ, ಜೆಡಿಎಸ್ ನ ಆನಂದ್ ಅಸ್ನೋಟಿಕರ್, ಭಟ್ಕಳದಲ್ಲಿ ಕಾಂಗ್ರೆಸ್ ಗೆ ಮುನ್ನಡೆ
ಬೆಳಗ್ಗೆ 7.14: ಕರ್ನಾಟಕ ಫಲಿತಾಂಶ- ಎಣಿಕೆ ಕೇಂದ್ರಗಳತ್ತ ಅಭ್ಯರ್ಥಿಗಳು
ಬೆಳಗ್ಗೆ 6:40 -ಮತ ಎಣಿಕೆ ಕಾರ್ಯಕ್ಕಾಗಿ ಸುಮಾರು 16,662 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಪೈಕಿ 3,410 ಮತ ಎಣಿಕೆ ಮೆಲ್ವೀಚಾರಕರು, 3,410 ಎಣಿಕೆ ಸಹಾಯಕರು ಮತ್ತು 3,410 ಮೈಕ್ರೋ ಅಬ್ಸರ್‍ವರ್ ಗಳು ಇರಲಿದ್ದಾರೆ. ಸುಮಾರು 888 ಮಂದಿ ಅಂಚೆ ಮತಪತ್ರಗಳನ್ನು ಎಣಿಸಲಿದ್ದಾರೆ. ಇವರುಗಳ ಜೊತೆಗೆ ಹೆಚ್ಚುವರಿಯಾಗಿ 5,544 ಮಂದಿ ಭದ್ರತಾ ಕೊಠಡಿಯಿಂದ ಇವಿಎಂಗಳನ್ನು ಮತ ಎಣಿಕೆ ಕೇಂದ್ರಕ್ಕೆ ತರಲು ನಿಯೋಜಿಸಲಾಗಿದೆ.
ಬೆಳಗ್ಗೆ 6:37 – 222 ಮತಕ್ಷೇತ್ರಗಳ ಮತ ಎಣಿಕೆಗಾಗಿ ರಾಜ್ಯಾದ್ಯಂತ 38 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಪೈಕಿ ಬೆಂಗಳೂರಿನಲ್ಲಿ 5 ಕಡೆ, ತುಮಕೂರಿನಲ್ಲಿ 3 ಕಡೆ ಹಾಗೂ ಚಿತ್ರದುರ್ಗ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ತಲಾ 2 ಕಡೆಗಳಲ್ಲಿ ಹಾಗೂ ಇನ್ನುಳಿದ ಜಿಲ್ಲೆಗಳಲ್ಲಿ ತಲಾ ಒಂದೊಂದು ಕಡೆ ಮತ ಎಣಿಕೆ ಕಾರ್ಯ ನಡೆಯಲಿದೆ.