ರಾಶಿ ರಾಶಿ ವೋಟರ್ ಐಡಿ ಪತ್ತೆ ಪ್ರಕರಣ – ಆರ್ ಆರ್ ನಗರ ಚುನಾವಣೆ ಮುಂದೂಡಿಕೆ

Public TV
1 Min Read
RR NAGAR ELEC TION VOTER ID

ಬೆಂಗಳೂರು: ಮತದಾನಕ್ಕೆ ಕೆಲವೇ ಗಂಟೆಗಳು ಇರುವಾಗ ರಾಜ್ಯ ರಾಜಕೀಯದಲ್ಲಿ ಭಾರೀ ಬೆಳವಣಿಗೆ ನಡೆದಿದೆ. ಒಂದೇ ಕಡೆ ರಾಶಿ ರಾಶಿ ವೋಟರ್ ಐಡಿ ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ ರಾಜರಾಜೇಶ್ವರಿ ನಗರ ವಿಧಾನಸಭೆ ಚುನಾವಣೆಯನ್ನು ಮುಂದೂಡಿದೆ.

ನಾಳೆ ಬದಲು ಮೇ 28ಕ್ಕೆ ಆರ್ ಆರ್ ನಗರ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. ಮೇ 31 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬೃಹತ್ ಮತಚೀಟಿ ಹಗರಣ ಸ್ಫೋಟ – ರಾಜಕಾರಣದಲ್ಲಿ ಮಿಡ್‍ನೈಟ್ ಹೈಡ್ರಾಮ

ಮೇ 8ರಂದು ಜಾಲಹಳ್ಳಿ ಬಳಿಯ ಅಪಾರ್ಟ್‍ಮೆಂಟ್ ಒಂದರಲ್ಲಿ 9,800ಕ್ಕೂ ಹೆಚ್ಚು ವೋಟರ್ ಐಡಿಗಳು ಪತ್ತೆಯಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿತ್ತು. ಚುನಾವಣಾ ಆಯೋಗದ ಮೊರೆ ಕೂಡ ಹೋಗಿದ್ವು. ಕೇಂದ್ರ ಚುನಾವಣಾ ಆಯೋಗ, ಉಪ ಆಯುಕ್ತರನ್ನು ಬೆಂಗಳೂರಿಗೆ ಕಳುಹಿಸಿ ತನಿಖೆ ಮಾಡಿಸಿತ್ತು. ಇದನ್ನೂ ಓದಿ: ನನ್ನ ವಿರುದ್ಧ ಮುನಿರಾಜು, ಕೈ ಮಹಿಳಾ ಕಾರ್ಪೋರೇಟರ್ ಷಡ್ಯಂತ್ರ: ಮುನಿರತ್ನ

Share This Article
Leave a Comment

Leave a Reply

Your email address will not be published. Required fields are marked *