ಬೆಂಗಳೂರು/ದಾವಣಗೆರೆ/ಬೆಳಗಾವಿ: ಚುನಾವಣಾ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಗಳೂರಿನ ನೆಲಮಂಗಲದ ತ್ಯಾಮಗೊಂಡ್ಲು ಸಮೀಪದ ಮುದ್ದಲಿಂಗಹಳ್ಳಿ ಹಾಗೂ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಿಲುನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾಹನ ತಪಾಸಣೆ ವೇಳೆ ಬೈಕ್ ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಮುದ್ದಲಿಂಗನಹಳ್ಳಿ ತಪಾಸಣಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿಗಳ ತಂಡ ಕಾರ್ಯಚರಣೆ ನಡೆಸಿದ್ದಾರೆ. ತುಮಕೂರಿನ ಕೊಳಾಲ ಬಳಿಯ ಎಲೆರಾಂಪುರದ ಸ್ವಾಮಿ ಎಂಬವರ ಬಳಿಯಲ್ಲಿನ ಕೈ ಚೀಲದಲ್ಲಿದ್ದ 1 ಲಕ್ಷ 52 ಸಾವಿರ ಹಣವನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಮದುವೆ ಸಾಮಾಗ್ರಿಗಳನ್ನು ಖರೀದಿಸಲು ಹಣ ಸಾಗಾಟ ಮಾಡುತ್ತಿರುವುದಾಗಿ ಸ್ವಾಮಿ ಹೇಳಿಕೆ ನೀಡಿದ್ದಾರೆ. ಚುನಾವಣಾಧಿಕಾರಿಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Advertisement
Advertisement
ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಲವಾಗಿಲುನಲ್ಲಿ ಖಾಸಗಿ ಬಸ್ ಮೇಲೆ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ಬಸ್‍ನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 2.48 ಲಕ್ಷ ಹಣ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಹಣವನ್ನು ತಾಲೂಕು ಖಜಾನೆಯಲ್ಲಿ ಅಧಿಕಾರಿಗಳು ಇರಿಸಲಾಗಿದೆ.
Advertisement
ಬೆಳಗಾವಿ: ಖಾಸಗಿ ಬಸ್ ನಲ್ಲಿ ಸಾಗಿಸುತ್ತಿದ್ದ ಬಿಜೆಪಿಯ 3 ಸಾವಿರ ಶಾಲು ಮತ್ತು ಎಂಇಪಿ ಪಕ್ಷಕ್ಕೆ ಸೇರಿದ 40 ಸಾವಿರ ಕ್ಯಾಪ್ ಗಳನ್ನು ಜಿಲ್ಲೆಯ ನಿಪ್ಪಾಣಿಯ ಕರ್ನಾಟಕ ಮತ್ತು ಮಹಾ ಗಡಿಯ ಚೆಕ್ ಪೋಸ್ಟ್ ನಲ್ಲಿ ನಿಪ್ಪಾಣಿ ಪೊಲೀಸ್ರು ವಶ ಪಡಿಸಿಕೊಂಡಿದ್ದಾರೆ. ಶಾಲು ಮತ್ತು ಕ್ಯಾಪ್ ಗಳನ್ನು ಮುಂಬೈನಿಂದ ಬೆಳಗಾವಿಗೆ ತರಲಾಗುತ್ತಿತ್ತು ಎಂಬ ಮಾಹಿತಿಗಳು ಲಭ್ಯವಾಗಿದ್ದು, ಬಸ್ ಡ್ರೈವರ್, ಕ್ಲೀನರ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.