ಮೈಸೂರು: ಮುಖ್ಯಮಂತ್ರಿಗಳ ವಿರುದ್ಧ ಮಾತನಾಡಿದ್ದಕ್ಕೆ ಪಬ್ಲಿಕ್ ಟಿವಿಯ ಸಂದರ್ಶನ ಕಾರ್ಯಕ್ರಮದಲ್ಲಿ ಮರಿಸ್ವಾಮಿ ಮೇಲೆ ಸಿಎಂ ಬೆಂಬಲಿಗರು ಮುಗಿಬಿದ್ದಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಹಳೆಕೆಸರೆ ಗ್ರಾಮದಲ್ಲಿ ಪ್ರಚಾರ ನಡೆಸುತ್ತಿದ್ದಾಗ ಗ್ರಾಮ ಪಂಚಾಯಿತಿಯ ಜೆಡಿಎಸ್ ಸದಸ್ಯ ಮರಿಸ್ವಾಮಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಮಾತಿನ ಜಟಾಪಟಿ ನಡೆಯಿತು.
Advertisement
ಒಂದು ಕಾಲದಲ್ಲಿ ಸಿಎಂ ಅವರ ಆಪ್ತನಾಗಿದ್ದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಮರಿಸ್ವಾಮಿ ಅವರ ಜೊತೆ ಮಧ್ಯಾಹ್ನ ಸಂದರ್ಶನ ನಡೆಸುತಿತ್ತು. ಈ ವೇಳೆ ಸಂದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಸಿಎಂ ಬೆಂಬಲಿಗರು ದರ್ಬಾರ್ ನಡೆಸಿದ್ದಾರೆ. ಕಿವಿಗೆ ಹಾಕಿದ್ದ ಇಯರ್ ಫೋನ್ ಕಿತ್ತಾಕಿ ಸಂದರ್ಶನಕ್ಕೆ ಅಡ್ಡಿ ಪಡಿಸಿದ್ದಾರೆ. ಇದನ್ನೂ ಓದಿ: ನಿಮ್ ಜೊತೆ ಬರಲ್ಲ, ವೋಟು ಹಾಕಲ್ಲ- ಪ್ರಚಾರದ ವೇಳೆ ಸಿದ್ದು ಮರಿಸ್ವಾಮಿ ಮಾತಿನ ಜಟಾಪಟಿ
Advertisement
ಪಬ್ಲಿಕ್ ಟಿವಿಯ ಮೈಕ್ ಕೂಡ ಕಿತ್ತೆಸೆದ ಬೆಂಬಲಿಗರು ಸಂದರ್ಶನ ನೀಡುತ್ತಿದ್ದ ಮರಿಸ್ವಾಮಿಯನ್ನು ಕರೆದೊಯ್ದಿದ್ದಾರೆ.
Advertisement