ಬೆಂಗಳೂರು: ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯು (Second PUC) ಪರೀಕ್ಷೆ ವ್ಯವಸ್ಥೆಯಲ್ಲಿ ಹೊಸ ವಿಧಾನ ಜಾರಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಇನ್ಮುಂದೆ ಒಂದು ವರ್ಷದಲ್ಲಿ ಮೂರು ವಾರ್ಷಿಕ ಪರೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿದೆ.
ದ್ವೀತಿಯ ಪಿಯುಸಿ ಮತ್ತು SSLC ಪರೀಕ್ಷೆಗಳನ್ನ ವರ್ಷದಲ್ಲಿ 3 ಬಾರಿ ಮಾಡಲು ನಿರ್ಧರಿಸಲಾಗಿದೆ. ವಾರ್ಷಿಕ ಪರೀಕ್ಷೆ, ಪೂರಕ ಪರೀಕ್ಷೆ ವ್ಯವಸ್ಥೆ ಕೈಬಿಡಲಾಗುವುದು. ಪರೀಕ್ಷೆ 1, ಪರೀಕ್ಷೆ 2, ಪರೀಕ್ಷೆ 3 ಹೆಸರಿನಲ್ಲಿ ಪರೀಕ್ಷೆ ನಡೆಸಲಾಗುವುದು. ಈ ವರ್ಷದಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಿಳಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ಪ್ರಥಮ 500 ಕೆವಿಎ ಭೂಗತ ಪರಿವರ್ತಕ ಕೇಂದ್ರದ ಲೋಕಾರ್ಪಣೆ
Advertisement
Advertisement
ಹೊಸ ವ್ಯವಸ್ಥೆ ಹೇಗೆ?
* ವಿದ್ಯಾರ್ಥಿಗಳು ಒಂದು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದರೆ ಇನ್ನೊಂದು ಪರೀಕ್ಷೆ ಬರೆಯಬಹುದು. ಅದರಲ್ಲಿ ಕಡಿಮೆ ಬಂದರೆ 3 ನೇ ಪರೀಕ್ಷೆ ಬರೆಯಬಹುದು.
* 2 ಮತ್ತು 3 ನೇ ಪರೀಕ್ಷೆಯಲ್ಲಿ ಮೊದಲ ಪರೀಕ್ಷೆಗಿಂತ ಕಡಿಮೆ ಅಂಕ ಬಂದಿದ್ದರೆ, ಎರಡು ಪರೀಕ್ಷೆ ಬರೆದರೂ ಮೊದಲ ಪರೀಕ್ಷೆಯ ಅಂಕಗಳನ್ನೆ ಉಳಿಸಿಕೊಳ್ಳಬಹುದು.
* ಯಾವುದಾದರೂ ಒಂದು ವಿಷಯದಲ್ಲಿ ಕಡಿಮೆ ಅಂಕ ಬಂದಿದೆ ಅಂತ ಅನ್ನಿಸಿದರೆ ಅ ವಿದ್ಯಾರ್ಥಿಯೂ 2 ಮತ್ತು ಮೂರನೇ ಪರೀಕ್ಷೆಯಲ್ಲಿ ಆ ಒಂದು ವಿಷಯವನ್ನು ಪ್ರತ್ಯೇಕವಾಗಿ ಬರೆದು ಹೆಚ್ಚು ಅಂಕ ಪಡೆದುಕೊಳ್ಳಬಹುದು.
* ಮೊದಲ ಪರೀಕ್ಷೆಯಲ್ಲಿ ಫೇಲ್ ಆದರೂ ಅ ವಿದ್ಯಾರ್ಥಿಯನ್ನ ಫೇಲ್ ಅಂತ ಕರೆಯುವುದಿಲ್ಲ. ಆತ 2, 3 ನೇ ಪರೀಕ್ಷೆ ಬರೆದು ಪಾಸ್ ಆಗಬಹುದು.
* ವಿದ್ಯಾರ್ಥಿ 1, 2, 3 ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿ ಪಾಸ್ ಆಗಿರುತ್ತಾನೋ ಅ ಪರೀಕ್ಷೆಯಲ್ಲಿ ಪಾಸ್ ಅಂತ ಅಂಕಪಟ್ಟಿ ನೀಡಲಾಗುತ್ತದೆ.
* 2023-24ನೇ ಸಾಲಿನಿಂದ ಹೊಸ ವ್ಯವಸ್ಥೆ ಜಾರಿಯಾಗಲಿದೆ. ಇದನ್ನೂ ಓದಿ: ಕೇವಲ 5 ತಿಂಗಳಲ್ಲೇ ಮಂಗಳೂರು ಪೊಲೀಸ್ ಕಮಿಷನರ್ ಟ್ರಾನ್ಸ್‌ಫರ್
Advertisement
Advertisement
ಹೊಸ ಪರೀಕ್ಷೆ ವ್ಯವಸ್ಥೆ ವೇಳಾಪಟ್ಟಿ
SSLC ಪರೀಕ್ಷೆಗಳು
ಪರೀಕ್ಷೆ 1
ಮಾರ್ಚ್ 31 ರಿಂದ ಏಪ್ರಿಲ್ 15ರ ವರೆಗೆ
ಫಲಿತಾಂಶ ಮೇ 8
ಪರೀಕ್ಷೆ 2
ಜೂನ್ 12 ರಿಂದ ಜೂನ್ 19
ಜೂನ್ 29 ಫಲಿತಾಂಶ
ಪರೀಕ್ಷೆ 3
ಜುಲೈ 29 ರಿಂದ ಆಗಸ್ಟ್ 5
ಆಗಸ್ಟ್ 19 ಫಲಿತಾಂಶ
ದ್ವೀತಿಯ ಪಿಯುಸಿ ವೇಳಾಪಟ್ಟಿ
ಪರೀಕ್ಷೆ 1
ಮಾರ್ಚ್ 1 ರಿಂದ ಮಾರ್ಚ್ 25
ಫಲಿತಾಂಶ ಏಪ್ರಿಲ್ 22
ಪರೀಕ್ಷೆ 2
ಮೇ 15 ರಿಂದ ಜೂನ್ 5
ಜೂನ್ 21 ಫಲಿತಾಂಶ
ಪರೀಕ್ಷೆ 3
ಜುಲೈ 12 ರಿಂದ ಜುಲೈ 30
ಆಗಸ್ಟ್ 16 ಫಲಿತಾಂಶ
Web Stories