ಬೆಂಗಳೂರು: ಬರಹಗಾರ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಕುವೆಂಪು ಅವರನ್ನು ಪಠ್ಯಪುಸ್ತಕದಲ್ಲಿ ನೀರಸವಾಗಿ ಪರಿಚಯಿಸಿದ್ದಾರೆ ಎಂಬ ವಿಚಾರವಾಗಿ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಈ ವಿಚಾರವನ್ನು ಪ್ರಸ್ತಾಪಿಸಿ ರೋಹಿತ್ ಚಕ್ರತೀರ್ಥ ವಿರುದ್ಧ ಟೀಕೆ ಮಾಡಿದ್ದಾರೆ.
Advertisement
ತನ್ನ ವಿರುದ್ಧ ಬಂದ ಟೀಕೆಗೆ ಪ್ರತಿಕ್ರಿಯೆ ನೀಡಿದ ರೋಹಿತ್ ಚಕ್ರತೀರ್ಥ, ಈ ಪರಿಚಯವನ್ನು ನಾವು ಮಾಡಿಲ್ಲ. ಬರಗೂರು ರಾಮಚಂದ್ರದಪ್ಪನವರ ತಂಡ ಈ ಪರಿಷ್ಕರಣೆ ಮಾಡಿದ್ದನ್ನು ಹಾಗೆಯೇ ಉಳಿಸಲಾಗಿದೆ. ಆಗ ವ್ಯಕ್ತವಾಗದ ಟೀಕೆ ಈಗ ಯಾಕೆ ವ್ಯಕ್ತವಾಗುತ್ತಿದೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದಾರೆ.
Advertisement
Advertisement
ಯತೀಂದ್ರ ಸಿದ್ದರಾಮಯ್ಯ ಹೇಳಿದ್ದೇನು?
ಅಪ್ಪಟ ಕನ್ನಡದಲ್ಲಿ ಶ್ರೀ ರಾಮಾಯಣದರ್ಶನ ಮಹಾಕಾವ್ಯ ರಚಿಸಿದ ರಸಋಷಿ, ಜಾತಿ ಧರ್ಮ ಗಡಿಗಳನ್ನು ಮೀರಿದ ವಿಶ್ವಮಾನವತ್ವವನ್ನು ಸಾರಿದ ಪ್ರಗತಿಪರ ಕವಿ ಕುವೆಂಪುರವರನ್ನು ಪಠ್ಯಪುಸ್ತಕದಲ್ಲಿ ಪರಿಚಯಿಸುವ ನೀರಸ ಪರಿ ಹೇಗಿದೆ ನೋಡಿ. ಅಲ್ಲದೆ ಮೋದಿ ಬಗ್ಗೆ ಅತಿರಂಜಿತ ಸುಳ್ಳುಗಳನ್ನು ಹೇಳಿ ಜನರನ್ನು ವಂಚಿಸುವ ಚಕ್ರವರ್ತಿ ಸೂಲಿಬೆಲೆಯವರ ಲೇಖನವನ್ನು. ಮಕ್ಕಳ ಪಠ್ಯದಲ್ಲಿ ಸೇರಿಸಲಾಗಿದೆ. ಇದು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಬೌದ್ಧಿಕ ಹಾಗು ನೈತಿಕ ದಿವಾಳಿತನವನ್ನು ತೋರುತ್ತಿದೆ. ಇದನ್ನೂ ಓದಿ: ಆರ್‌ಎಸ್‌ಎಸ್ ಸಂಸ್ಥಾಪಕ ಹೆಡ್ಗೆವಾರ್ ಭಾಷಣವನ್ನು ಓದಲಿದ್ದಾರೆ 10ನೇ ತರಗತಿ ವಿದ್ಯಾರ್ಥಿಗಳು
Advertisement
ಮಕ್ಕಳ ಪಠ್ಯದಲ್ಲಿ ಸೇರಿಸಲಾಗಿದೆ. ಇದು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಬೌದ್ಧಿಕ ಹಾಗು ನೈತಿಕ ದಿವಾಳಿತನವನ್ನು ತೋರುತ್ತಿದೆ#RejectRSSTextBooks
— Dr Yathindra Siddaramaiah (@Dr_Yathindra_S) May 23, 2022
ರೋಹಿತ್ ಚಕ್ರತೀರ್ಥ ಹೇಳಿದ್ದೇನು?
ಇಂದು ಬೆಳಗ್ಗೆ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿದ್ದೆ. ಫೋನು ರಿಂಗಣಿಸಿತು. ಎತ್ತಿದರೆ ಒಂದು ಟಿವಿ ಚಾನೆಲಿನಿಂದ ಕರೆ. ಏನು ವಿಷಯ, ಕೇಳಿದೆ. ಕುವೆಂಪು ಅವರಿಗೆ ಅವಮಾನವಾಗಿದೆ ಎಂದರು. ಎಲ್ಲಿ ಎಂದರೆ ಪಠ್ಯಪುಸ್ತಕದಲ್ಲಿ ಎಂಬ ಉತ್ತರ ಬಂತು. ಏನು ಅವಮಾನವಾಗಿದೆ ಎಂದು ಕೇಳಿದರೆ ʼಕುವೆಂಪು ಅವರು ಇತರರ ಪ್ರೋತ್ಸಾಹದಿಂದ ದೊಡ್ಡ ಕವಿಯಾಗಿ ಬೆಳೆದರು ಎಂದು ಹಾಕಿದ್ದೀರಿ, ಒಬ್ಬ ಮಹಾಕವಿಯ ವಿಚಾರದಲ್ಲಿ ಹೀಗೆ ಬರೆಯಬಹುದೆ?ʼ ಎಂದು ಕೇಳಿದರು ಆಂಕರ್. ಒಂದು ಕ್ಷಣ ಇವರು ಏನು ಹೇಳುತ್ತಿದ್ದಾರೆಂದು ಗೊತ್ತಾಗಲಿಲ್ಲ. ಇತರರ ಪ್ರೋತ್ಸಾಹದಿಂದ ಕವಿಯಾಗಿ ಬೆಳೆದರು ಎಂಬುದರಲ್ಲಿ ಅವಮಾನ ಆಗುವಂಥಾದ್ದು ಏನಿದೆ? ಆಂಕರಿಗಾಗಲೀ ಪಕ್ಕದಲ್ಲಿ ಕೂತಿದ್ದ ಮತ್ತೊಬ್ಬ ವಾದಿಗಾಗಲೀ ನಾನು ಅದೆಷ್ಟು ವಿವರಿಸಿ ಹೇಳಿದರೂ ಕೇಳಿದರೂ ಮಾತಿನ ತಿರುಳು ಅರ್ಥವಾಗಲಿಲ್ಲ. ʼಅವಮಾನ ಆಗಿದೆಯಲ್ವ ಸಾರ್…ʼ – ಒಂದೇ ರಾಗ, ಒಂದೇ ಮಂತ್ರ!
ಕುವೆಂಪು ಅವರು ತನ್ನ ಶ್ರೀರಾಮಾಯಣದರ್ಶನಮ್ ಮಹಾಕಾವ್ಯವನ್ನು ಅರ್ಪಿಸಿದ್ದು ಗುರುಗಳಾದ ವೆಂಕಣ್ಣಯ್ಯನವರಿಗೆ. ಕುವೆಂಪು ಅವರಿಗೇನೂ ಹೀಗೆ ತನಗೆ ಮಾರ್ಗದರ್ಶನ ಮಾಡಿದವರನ್ನು ಮರೆಯಬೇಕು ಅನ್ನಿಸಲಿಲ್ಲ. ತನ್ನ ಬದುಕಿನಲ್ಲಿ ಸ್ಫೂರ್ತಿದೇವತೆಗಳಾಗಿ ಬಂದ ಎಲ್ಲರನ್ನೂ ಅವರು ʼನೆನಪಿನ ದೋಣಿಯಲ್ಲಿʼ ನೆನಪಿಸಿಕೊಂಡಿದ್ದಾರೆ. ಆದರೆ ಅವರಿಗೆ ಇತರರು ಪ್ರೋತ್ಸಾಹಿಸಿದರು ಎಂಬ ಅಂಶ ನಮ್ಮ ಮಾಧ್ಯಮಗಳಿಗೆ ಮಾತ್ರ ಅವಮಾನವಾಗಿ ಕಂಡಿದೆ! ವಿಪರ್ಯಾಸ!
ತಮಾಷೆ ಏನು ಗೊತ್ತಾ? ಈ ಪಠ್ಯ ಇರುವುದು 4ನೇ ತರಗತಿಯ ಪರಿಸರ ಅಧ್ಯಯನ ಪಠ್ಯಪುಸ್ತಕದಲ್ಲಿ. ಕೆಲವು ಪ್ರಸಿದ್ಧ ವ್ಯಕ್ತಿಗಳು ಎಂಬ ವಿಷಯವನ್ನು ತಿಳಿಸುವಾಗ ಪುಟದಲ್ಲಿ ಮೂರ್ನಾಲ್ಕು ವ್ಯಕ್ತಿಗಳ ಪರಿಚಯ ಮಾಡುವಾಗ ಕುವೆಂಪು ಅವರ ಪರಿಚಯವೂ ಬಂದಿದೆ. ಇದು ಯಾವುದೇ ಬರಹದ ನಂತರ ಬಂದಿರುವ ʼಕವಿಕಾವ್ಯ ಪರಿಚಯʼ ಅಲ್ಲ. ಮತ್ತು ಇದನ್ನು ನಮ್ಮ ಪರಿಷ್ಕರಣ ಸಮಿತಿ ಬರೆದದ್ದೂ ಅಲ್ಲ. ಇನ್‌ಫ್ಯಾಕ್ಟ್, ನಾವು ಪರಿಸರ ಅಧ್ಯಯನ ಪುಸ್ತಕಗಳನ್ನು ಪರಿಷ್ಕರಣ ಮಾಡಿಯೂ ಇಲ್ಲ. ಇದು ಹಿಂದೆ ಬರಗೂರು ಗ್ಯಾಂಗ್ ಹೇಗೆ ಪರಿಷ್ಕರಣೆ ಮಾಡಿತ್ತೋ ಹಾಗೆಯೇ ಮುಂದುವರಿದಿದೆ. ಆದರೆ ಅದೇ ಬರಗೂರು ಗ್ಯಾಂಗ್ ಈಗ ಈ ಸಾಲುಗಳಲ್ಲಿ ಕುವೆಂಪು ಅವರಿಗೆ ಅವಮಾನವಾಗಿದೆ ಎಂದು ಗೋಳಾಡುತ್ತಿದೆ. ಶಬ್ದಗಳ ಶಕ್ತಿ ನೋಡಿ – ಅವೇ ಶಬ್ದಗಳು, ಅವೇ ವಾಕ್ಯಗಳು, ಅವೇ ಸಾಲುಗಳು – ಬರಗೂರು ಕಾಲದಲ್ಲಿ ಆ ಸಾಲುಗಳಲ್ಲಿ ಕುವೆಂಪು ಅವರಿಗೆ ಅವಮಾನ ಆಗಿರಲಿಲ್ಲ, ಈಗ ಆಗಿದೆ! ಹೇಗಿದೆ!