ಬೆಂಗಳೂರು: ದೆಹಲಿ ಹೊರವಲಯದ ನಿಜಾಮುದ್ದೀನ್‍ನ ಮರ್ಕಜ್ ಮಸೀದಿಯಲ್ಲಿ ಮಾರ್ಚ್ ತಿಂಗಳ ಎರಡನೇ ವಾರದಲ್ಲಿ ನಡೆದ ಜಮಾತ್ ಕಾರ್ಯಕ್ರಮದಿಂದ ಕೇವಲ ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶಕ್ಕೆ ಅಷ್ಟೇ ಅಲ್ಲ, ಕರ್ನಾಟಕಕ್ಕೆ ಗಂಡಾಂತರ ಎದುರಾಗಿದೆ.
ದಿನ ಕಳೆದಂತೆ ರಾಜ್ಯದಲ್ಲಿಯೂ ತಬ್ಲಿಘಿಗಳಿಂದ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ರಾಜ್ಯದಿಂದ 1,300ಕ್ಕೂ ಹೆಚ್ಚು ಮಂದಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿದ್ದರು. ಇದರಲ್ಲಿ 800 ಮಂದಿ ಪತ್ತೆ ಆಗಿದ್ದಾರೆ. ಉಳಿದ 580ಕ್ಕೂ ಹೆಚ್ಚು ಮಂದಿ ಪತ್ತೆಯಾಗಿಲ್ಲ. ಪತ್ತೆ ಆದವರಿಂದ, ಪತ್ತೆ ಆಗದವರಿಂದಲೂ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ತಬ್ಲಿಘಿಗಳ ಸಂಪರ್ಕದಲ್ಲಿದ್ದವರಿಗೂ ಸೋಂಕು ಹರಡುತ್ತಿದೆ.
Advertisement
Advertisement
ಒಟ್ಟು 92 ಮಂದಿ ತಬ್ಲಿಘಿ ಮತ್ತು ಅವರ ಸಂಪರ್ಕದಲ್ಲಿದ್ದವರಿಗೆ ಸೋಂಕು ಹಬ್ಬಿದ್ದು, ಇದು ಇನ್ನೂ ಹೆಚ್ಚಾಗಬಹುದು ಎನ್ನುವ ಆತಂಕ ಎದುರಾಗಿದೆ. ರಂಜಾನ್ ಆಚರಿಸಲು ಮಸೀದಿಗೆ ಹೋಗಬೇಡಿ, ಮನೆಯಲ್ಲಿ ಆಚರಿಸಿ. ಸರ್ಕಾರದ ಆದೇಶಗಳನ್ನು ಪಾಲಿಸಿ ಎಂದು ವಕ್ಫ್ ಬೋಡ್ ಕರೆ ನೀಡಿದೆ. ತಬ್ಲಿಘಿಗಳೇ ಬೇರೆ, ಮುಸ್ಲಿಮರೇ ಬೇರೆ. ಜಮಾತ್‍ಗೂ ವಕ್ಫ್ ಬೋರ್ಡಿಗೂ ಯಾವುದೇ ಸಂಬಂಧ ಇಲ್ಲ ಎಂದಿದೆ.
Advertisement
Advertisement
ರಾಜ್ಯಕ್ಕೆ ತಬ್ಲಿಘಿ ಕಂಟಕ..!
ಜಿಲ್ಲೆ ಒಟ್ಟು ಸೋಂಕಿತರು ತಬ್ಲಿಘಿ ಸೋಂಕಿತರು
> ಬೆಳಗಾವಿ 36 36
> ಬೀದರ್ 13 13
> ಕಲಬುರಗಿ 20 13
> ಮೈಸೂರು 61 08
> ಮಂಡ್ಯ 08 07
> ತುಮಕೂರು 02 02
> ಬಾಗಲಕೋಟೆ 09 02
> ಮಂಗಳೂರು 11 02
> ಬಳ್ಳಾರಿ 06 01
> ಚಿಕ್ಕಬಳ್ಳಾಪುರ 13 01
> ಬೆಂಗಳೂರು 76 07