ಬೆಂಗಳೂರು: ಮಳೆಯ ಅಬ್ಬರ ಹೆಚ್ಚಾಗಿದ್ದು, ರಾಜ್ಯಾದ್ಯಂತ ಇರುವ ಜಲಾಶಯಗಳಿಗೆ ಜೀವಕಳೆ ಬಂದಿದೆ. ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದ್ದು, ತುಂಬಿ ತುಳುಕುತ್ತಿವೆ. ಮಂಡ್ಯದ ಕೆಆರ್‌ಎಸ್ (KRS Reservoir) ಮಟ್ಟ 103.90 ಅಡಿ ಭರ್ತಿಯಾಗಿದ್ದು, ಕಬಿನಿ ಜಲಾಶಯದಲ್ಲಿ (Kabini Reservoir) 2,282.68 ಅಡಿಗಳಷ್ಟು ನೀರು ಭರ್ತಿಯಾಗಿದೆ. 2,284 ಅಡಿ ನೀರು ಸಂಗ್ರಹ ಸಾಮರ್ಥ್ಯದ ಡ್ಯಾಂ ಭರ್ತಿಗೆ ಇನ್ನೆರಡು ಅಡಿಯಷ್ಟೇ ಬಾಕಿಯಿದೆ. ಹಾಗಾದ್ರೆ ರಾಜ್ಯಾದ್ಯಂತ ಪ್ರಮುಖ ಜಲಾಶಯಗಳ ಇಂದಿನ ಮಟ್ಟ ಹೇಗಿದೆ ಎಂಬುದನ್ನು ನೋಡೋಣ…
ಯಾವ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ?
ಕೆಆರ್‌ಎಸ್ ಜಲಾಶಯ
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 103.90 ಅಡಿ.
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
ಇಂದಿನ ಸಾಮರ್ಥ್ಯ – 26.023 ಟಿಎಂಸಿ
ಒಳ ಹರಿವು – 5,666 ಕ್ಯೂಸೆಕ್
ಹೊರ ಹರಿವು – 581 ಕ್ಯೂಸೆಕ್
ಕಬಿನಿ ಜಲಾಶಯ
ಗರಿಷ್ಟ ಮಟ್ಟ : 2284 ( 19.52 ಟಿಎಂಸಿ)
ಇಂದಿನ ಮಟ್ಟ : 2282.68 ( 18.52ಟಿಎಂಸಿ)
ಹೊರ ಹರಿವು : 4667 ಕ್ಯೂಸೆಕ್.
ಒಳ ಹರಿವು : 6453 ಕ್ಯೂಸೆಕ್
ಆಲಮಟ್ಟಿ ಲಾಲಬಾಹ್ದೂರ ಶಾಸ್ತ್ರಿ ಜಲಾಶಯ
ಗರಿಷ್ಠ ಮಟ್ಟ – 519.60 ಅಡಿ
ಇಂದಿನ ಮಟ್ಟ – 516.51 ಅಡಿ
ಗರಿಷ್ಠ ಸಾಂದ್ರತೆ – 123.081 ಟಿಎಂಸಿ
ಇಂದಿನ ಸಾಂದ್ರತೆ – 78.618 ಟಿಎಂಸಿ
ಒಳ ಹರಿವು – 84.645 ಕ್ಯೂಸೆಕ್
ಹೊರ ಹರಿವು – 430 ಕ್ಯೂಸೆಕ್
ಹೇಮಾವತಿ ಜಲಾಶಯದ
ಗರಿಷ್ಠ ಮಟ್ಟ – 2922.00 ಅಡಿ
ಇಂದಿನ ಮಟ್ಟ – 2899.30 ಅಡಿ
ಒಳಹರಿವು – 6767 ಕ್ಯೂಸೆಕ್
ಹೊರಹರಿವು – 250 ಕ್ಯೂಸೆಕ್
ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ
ಸದ್ಯ ಜಲಾಶಯದಲ್ಲಿರುವ ನೀರು – 19.369 ಟಿಎಂಸಿ
ಹಾರಂಗಿ ಜಲಾಶಯದ
ಗರಿಷ್ಠ ಮಟ್ಟ – 2,859 ಅಡಿ
ಇಂದಿನ ಮಟ್ಟ – 2,850.03 ಅಡಿ
ಇಂದಿನ ನೀರಿನ ಒಳಹರಿವು – 2,377 ಕ್ಯುಸೆಕ್
ಹೊರ ಹರಿವು ನದಿಗೆ – 466 ಕ್ಯುಸೆಕ್
ಒಟ್ಟು ಸಾಂದ್ರತೆ – 8.5 ಟಿಎಂಸಿ
ಇಂದಿನ ಸಾಂದ್ರತೆ – 5.92 ಟಿಎಂಸಿ
ತುಂಗಭದ್ರಾ ಜಲಾಶಯ
ಗರಿಷ್ಠ ಮಟ್ಟ – 1,633 ಅಡಿ
ಇಂದಿನ ಮಟ್ಟ – 1,602.67ಅಡಿ
ಗರಿಷ್ಠ ಸಾಂದ್ರತೆ – 105.788 ಟಿಎಂಸಿ
ಇಂದಿನ ಸಾಂದ್ರತೆ – 25.173 ಟಿಎಂಸಿ
ಒಳ ಹರಿವು – 20,285 ಕ್ಯೂಸೆಕ್
ಹೊರ ಹರಿವು – 199 ಕ್ಯೂಸೆಕ್