ಬೆಂಗಳೂರು: ಸಾವನ್ನಪ್ಪಿದ ವ್ಯಕ್ತಿಯ ಎಡವಟ್ಟಿನಿಂದಾಗಿ ಈಗ ಟಿಪ್ಪು ನಗರಕ್ಕೆ ಕೊರೊನಾ ಕಂಟಕ ಎದುರಾಗಿದೆ.
ಹೌದು. ಏ.12 ಭಾನುವಾರದಂದು ಟಿಪ್ಪು ನಗರ ವೃದ್ಧನಿಗೆ ಉಸಿರಾಟದ ತೊಂದರೆ ಶುರುವಾಗಿದೆ. ಆರಂಭದಲ್ಲಿ ರಾಜೀವ್ ಗಾಂಧಿ ಆಸ್ಪತ್ರೆ ಗೆ ತೆರಳಿದ್ದಾನೆ. ಅಲ್ಲಿ ವೈದ್ಯರು ಕೊರೊನಾ ಟೆಸ್ಟ್ ಮಾಡಿಸಬೇಕು, ಆಡ್ಮಿಟ್ ಆಗಬೇಕು ಎಂದಾಗ ನಿರಾಕರಿಸಿದ್ದಾನೆ. ಆದಾದ ಬಳಿಕ ನೇರವಾಗಿ ವಾಹನದ ಮೂಲಕ ಜಯದೇವ ಆಸ್ಪತ್ರಗೆ ಬಂದಿದ್ದಾನೆ.
Advertisement
Advertisement
ಜಯದೇವ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ ಮತ್ತೆ ರಾಜೀವ್ ಗಾಂಧಿ ಆಸ್ಪತ್ರೆಗೆ ತೆರಳುವಂತೆ ಸೂಚಿಸುತ್ತಾರೆ. ಆದರೆ ವೃದ್ಧ ರಾಜೀವ್ ಗಾಂಧಿಗೆ ಹೋಗದೇ ಖಾಸಗಿ ಆಸ್ಪತ್ರೆಗೆ ಹೋಗಿದ್ದಾನೆ. ಖಾಸಗಿ ಆಸ್ಪತ್ರೆಯವರು ದಾಖಲಿಸಿಕೊಳ್ಳದೇ ರಾಜೀವ್ ಗಾಂಧಿ ಆಸ್ಪತ್ರೆಗೆ ತೆರಳುವಂತೆ ಹೇಳಿದ್ದಾರೆ.
Advertisement
ಮೂರು ಆಸ್ಪತ್ರೆಗೆ ಅಲೆದಾಡಿದ್ದ ವ್ಯಕ್ತಿ ನಂತರ ನೇರವಾಗಿ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗುತ್ತಾನೆ. ಈ ವೇಳೆ ನ್ಯೂಮೋನಿಯಾ ಬಂದಿರುತ್ತದೆ. ವೆಂಟಿಲೇಟರ್ ನಲ್ಲಿದ್ದರೂ ಸಾವನ್ನಪ್ಪುತ್ತಾನೆ.
Advertisement
ಒಂದು ವೇಳೆ ಆರಂಭದಲ್ಲೇ ಆ ವ್ಯಕ್ತಿ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರೆ ಪ್ರಾಥಮಿಕ ಸಂಪರ್ಕದ ಸಂಪೂರ್ಣ ವಿವರ ಲಭ್ಯವಾಗುತ್ತಿತ್ತು. ಆಸ್ಪತ್ರೆಯವರಿಗೆ ಒತ್ತಾಯಪೂರ್ವಕವಾಗಿ ದಾಖಲು ಮಾಡಿಕೊಳ್ಳುವ ಹಕ್ಕು ಇದ್ದರೂ ರಾಜೀವ್ ಗಾಂಧಿ ಆಸ್ಪತ್ರೆಯವರು ದಾಖಲಿಸದೇ ಹಿಂದೇಟು ಹಾಕಿದ್ದರು. ಅಷ್ಟೇ ಅಲ್ಲದೇ ಆತ ತೆರಳಿದ ಖಾಸಗಿ ಆಸ್ಪತ್ರೆ ಯಾವುದು ಎನ್ನುವುದು ತಿಳಿದಿಲ್ಲ. ಒಟ್ಟಿನಲ್ಲಿ ಕೊರೊನಾ ಪರೀಕ್ಷೆಗೆ ಹೆದರಿ ಅಡ್ಮಿಟ್ ಆಗದೇ ವ್ಯಕ್ತಿ ಸಾವನ್ನು ಆಹ್ವಾನಿಸಿ ಬಲಿಯಾಗಿದ್ದಾನೆ.
ಈ ವ್ಯಕ್ತಿಯ ಸಂಪರ್ಕಕ್ಕೆ ಯಾರೆಲ್ಲ ಬಂದಿದ್ದಾರೆ ಎನ್ನುವ ಮಾಹಿತಿ ಕಲೆ ಹಾಕುವುದೇ ದೊಡ್ಡ ಸವಾಲಾಗಿದ್ದು, ಮೃತ ವೃದ್ಧನಿಂದ ಗುರುವಾರ ಕುಟುಂಬದ ಇನ್ನಿಬ್ಬರಿಗೂ ಸೋಂಕು ತಗಲಿತ್ತು. ಇಂದು ಮೊಮ್ಮಗನಿಗೂ ಸೋಂಕು ಬಂದಿದೆ. ಕುಟುಂಬಸ್ಥರೂ ಸೇರಿ ಇಡೀ ಕಟ್ಟಡದಲ್ಲಿ 70 ಮಂದಿ ವಾಸವಿದ್ದು, ಎಲ್ಲ 70 ಮಂದಿಯನ್ನು ಆರೋಗ್ಯ ಇಲಾಖೆ ಪ್ರತ್ಯೇಕವಾಗಿಟ್ಟಿದೆ. ಈ ಮೂಲಕ ಟಿಪ್ಪು ನಗರ ಈಗ ಕೊರೊನಾ ಹಾಟ್ ಸ್ಪಾಟ್ ಆಗಿ ಪರಿವರ್ತನೆಯಾಗಿದೆ.