ಬೆಂಗಳೂರು: ಕೋವಿಡ್ 19 ಲಸಿಕಾಕರಣ ಹೆಚ್ಚಿಸುವ ನಿಟ್ಟಿನಲ್ಲಿ ಶುಕ್ರವಾರ ರಾಜ್ಯಾದ್ಯಂತ ಕೋವಿಡ್ 19 ಲಸಿಕಾ ಮೇಳವನ್ನು ಆಯೋಜಿಸಿದ್ದು, ಲಸಿಕಾ ಮೇಳದ ಅಂಗವಾಗಿ ಬಿಪಿಎಂಪಿ ವ್ಯಾಪ್ತಿಯಲ್ಲಿ 1.25 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಪಾಲಿಕೆಯ ಆಯಾ ವಲಯ ಮಟ್ಟದಲ್ಲಿ ನಿಗದಿತ ಗುರಿ ಸಾಧಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಲಸಿಕೆ ನೀಡುವ ಸ್ಥಳದಲ್ಲಿ ಯಾವುದೇ ಸಮಸ್ಯೆಯಾಗಂತೆ ಲಸಿಕೆ ನೀಡಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
Advertisement
Advertisement
ನಗರದ ಆಯಾ ವಾರ್ಡ್‍ಗಳಿಗೆ ಅವಶ್ಯಕ ಲಸಿಕೆಗಳನ್ನು ಮುಂಚಿತವಾಗಿಯೇ ಪೂರೈಸಲಾಗುವುದು. ಲಸಿಕೆ ನೀಡುವ ಸಲುವಾಗಿ ಹೆಚ್ಚು ಸೆಷನ್‍ಗಳನ್ನು ಮಾಡಿಕೊಂಡು ಅಗತ್ಯ ಸಿಬ್ಬಂದಿನ್ನು ನಿಯೋಜಿಸಿಕೊಂಡು ಲಸಿಕೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ. ಲಸಿಕಾ ಮೇಳ ಹಮ್ಮಿಕೊಂಡಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ, ಲಸಿಕೆ ನೀಡುವ ಸ್ಥಳದಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಲು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ – ವರದಕ್ಷಿಣೆ ಕಿರುಕುಳ- ಪತಿಯಿಂದಲೇ ಪತ್ನಿ ಹತ್ಯೆ
Advertisement
Advertisement
ಆದ್ಯತೆ ಯಾರಿಗೆ?
ಇದುವರೆಗೆ ಒಂದೂ ಡೋಸ್ ಲಸಿಕೆ ಪಡೆಯದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ. 2ನೇ ಡೋಸ್‍ಗೆ ಬಾಕಿ ಇರುವ ಆರೋಗ್ಯ ಕಾರ್ಯಕರ್ತರ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ.
60 ವರ್ಷ ಮೇಲ್ಪಟ್ಟವರಿಗೆ 1ನೇ ಡೋಸ್ ಹಾಗೂ 2ನೇ ಡೋಸ್ ಕೊಡಲಾಗುತ್ತದೆ. ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 1 ರಿಂದ 10 ನೇ ತರಗತಿ, ಪದವಿ ಪೂರ್ವ ಕಾಲೇಜಿನ(11ನೇ ಹಾಗೂ 12ನೇ ತರಗತಿ ಅನ್ವಯಿಸುವಲ್ಲಿ) ಭೋದಕ ಭೋದಕೇತರ ಸಿಬ್ಬಂದಿ ಇನ್ನೂ ಕೋವಿಡ್-19 ಲಸಿಕೆ ಪಡೆಯದಿದ್ದಲ್ಲಿ ಅವರಿಗೆ ನೀಡಲಾಗುವುದು. ಇತರೇ 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗುತ್ತದೆ. ಇದನ್ನೂ ಓದಿ – ಮತ್ತೊಂದು ರೇಪ್ ಕೇಸ್- ಸಿದ್ದಾಪುರದಲ್ಲಿ 11ರ ಬಾಲೆ ಮೇಲೆ ಮಾವನಿಂದಲೇ ಅತ್ಯಾಚಾರ