ಬೆಂಗಳೂರು: ರಾಜ್ಯದಲ್ಲಿ ಕೊರೊನಾಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
66 ವರ್ಷದ ವ್ಯಕ್ತಿ ವಿಕ್ಟೋರಿಯಾ ಆಸ್ಪತ್ರೆ ಯಲ್ಲಿ ಸಾವನ್ನಪ್ಪಿದ್ದಾರೆ. 195ನೇ ರೋಗಿ ಮಣಿಪುರದಿಂದ ಬೆಂಗಳೂರಿಗೆ ಮಾರ್ಚ್ 12 ರಂದು ಆಗಮಿಸಿದ್ದರು. ಬಿಬಿಎಂಪಿ ನಿವಾಸಿಯಾಗಿದ್ದ ಇವರು ಏ.10 ರಿಂದ ವೆಂಟಿಲೇಟರ್ ನಲ್ಲಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
Advertisement
ಮೊದಲು ಬ್ಯಾಪಿಸ್ಟ್ ಆಸ್ಪತ್ರೆ ಗೆ ದಾಖಲಾಗಿದ್ರು. ಬಳಿಕ ಕೊರೊನಾ ಐಸೋಲೇಷನ್ ಆಸ್ಪತ್ರೆಗೆ ದಾಖಲಾಗಿದ್ದರು.
Advertisement
ರಾಜ್ಯದಲ್ಲಿ ಒಟ್ಟು 279 ಮಂದಿಗೆ ಕೊರೊನಾ ಬಂದಿದ್ದು ಈ ಪೈಕಿ 80 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ರೋಗಿ ಸಂಖ್ಯೆ 43 ಮತ್ತು 101 ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.