ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮತ್ತೊಬ್ಬ ಮಹಿಳೆಗೆ ಕೊರೋನಾ ಪಾಸಿಟಿವ್ ಬಂದಿದೆ.
ಕಳೆದವಾರ ಪಾಸಿಟಿವ್ ಬಂದಿದ್ದ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ಬಂಟ್ವಾಳದ 67 ವರ್ಷದ ವೃದ್ಧೆ(ರೋಗಿ409) ಸಂಪರ್ಕದಿಂದ 33 ವರ್ಷದ ಮಗಳಿಗೆ ಸೋಂಕು ಬಂದಿದೆ.
Advertisement
ಬಂಟ್ವಾಳದ ಕಸಬಾ ಬಳಿಯ ನಾಲ್ಕು ಮಂದಿಗೆ ಪಾಸಿಟಿವ್ ಆಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಒಂದೇ ಕುಟುಂಬದ ಇಬ್ಬರಿಗೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಪಾಸಿಟಿವ್ ಆದ ಮಹಿಳೆಗೆ ಏ.19ರಂದೇ ಮಂಗಳೂರಿನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
Advertisement
Advertisement
ಏ.19ರಂದು ಬಂಟ್ವಾಳದಲ್ಲಿ ಮಹಿಳೆ ಬಲಿಯಾಗಿದ್ದರು. ಏ.23 ರಂದು ಮಹಿಳೆಯ ಅತ್ತೆಯೂ ಕೊರೋನಾಗೆ ಸಾವನ್ನಪ್ಪಿದ್ದರು. ಮೊದಲು ಮೃತಪಟ್ಟ ಮಹಿಳೆಯಿಂದ ನೆರೆಮನೆ 67 ವರ್ಷದ ವೃದ್ಧೆಗೆ ಸೋಂಕು ತಗುಲಿತ್ತು.
Advertisement
ಇಂದಿನ ಪ್ರಕರಣ ಸೇರಿದಂತೆ ದಕ್ಷಿಣ ಕನ್ನಡದಲ್ಲಿ ಒಟ್ಟು 17 ಮಂದಿಗೆ ಸೋಂಕು ಬಂದಿದ್ದು, 11 ಮಂದಿ ಬಿಡುಗಡೆಯಾಗಿದ್ದಾರೆ. 4 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.