ಬೆಂಗಳೂರು: ರಾಜಧಾನಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಲಸಿಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಇಂದು 41,652 ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ. 767 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
ಆರೋಗ್ಯ ಇಲಾಖೆ ಪ್ರಕಾರ ಇಂದು ರಾಜ್ಯದಲ್ಲಿ 617 ಜನರಿಗೆ ಕೊರೊನಾ ವೈರಸ್ ಇರುವುದು ದೃಢವಾಗಿದೆ. 767 ಜನರು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದನ್ನೂ ಓದಿ: ಇದು ಮೋದಿ ಓಡಾಡಿದ ರಸ್ತೆಯೇ ಅಲ್ಲ – BBMP ಹೈಡ್ರಾಮಾ
Advertisement
Advertisement
ಇದುವರೆಗೆ 39,21,050 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ರಾಜ್ಯದಲ್ಲಿ ಶೂನ್ಯ ಮರಣ ಪ್ರಕರಣ ದಾಖಲಾಗಿದೆ. ಕೋವಿಡ್ ಪಾಸಿಟಿವಿಟಿ ದರ ಶೇ.3.12 ಇದ್ದು, ಮೃತರ ಪ್ರಮಾಣ ಶೇ.0.00 ಇದೆ. ಒಟ್ಟು 19,757 ಸ್ಯಾಂಪಲ್(ಆರ್‌ಟಿಪಿಸಿಆರ್ 15,342 + 4,415 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
Advertisement
ಹೆಲ್ತ್ ಬುಲೆಟಿನ್ ವರದಿಗಳ ಪ್ರಕಾರ ಬೆಂಗಳೂರು ನಗರದಲ್ಲಿಯೇ 592 ಪ್ರಕರಣಗಳು ಪತ್ತೆಯಾಗಿದ್ದು, ಬಳ್ಳಾರಿ 3, ಬೀದರ್ 01, ದ.ಕನ್ನಡ 07, ಹಾಸನ 01, ಹಾವೇರಿ 01, ಕಲಬುರಗಿ 01, ಕೋಲಾರ 01, ಮೈಸೂರು 04, ಉಡುಪಿ 03, ಉತ್ತರಕನ್ನಡ 03 ಕೊರೊನಾಗಳು ಪ್ರಕರಣ ಪತ್ತೆಯಾಗಿವೆ.