ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ ಪ್ರಮಾಣ ಇಳಿಮುಖವಾಗುತ್ತಿದ್ದು, ರಾಜ್ಯದಲ್ಲಿ ಮತ್ತೆ ಮೂಲಸ್ಥಿತಿ ಮರಳುತ್ತೆ ಎಂಬ ಭರವಸೆ ಮೂಡಿದೆ. ಇಂದು ರಾಜ್ಯದಲ್ಲಿ 89 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕಿನಿಂದ 4 ಜನರು ಸಾವನ್ನಪ್ಪಿದ್ದಾರೆ.
Advertisement
ಇಲ್ಲಿವರೆಗೂ ರಾಜ್ಯದಲ್ಲಿ 1792 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇಂದು ಆಸ್ಪತ್ರೆಯಿಂದ 85 ಜನ ಡಿಸ್ಚಾರ್ಜ್ ಆಗಿದ್ದು, ಕೊರೊನಾ ಪ್ರಕರಣದ ಪ್ರಮಾಣ 0.28% ಇದೆ. ಮರಣ ಪ್ರಮಾಣ 4.49% ಇದೆ. ಇದನ್ನೂ ಓದಿ: ಕೊಡಗಿನಲ್ಲೂ ಹೊತ್ತಿದ ಧರ್ಮದ ಕಿಡಿ – ಮುಸ್ಲಿಂ ವ್ಯಾಪಾರಸ್ಥ ಅಂಗಡಿ ಖಾಲಿ ಮಾಡಿಸಿದ ಭಜರಂಗದಳ
Advertisement
Advertisement
ರಾಜ್ಯದಲ್ಲಿ ಇಂದು 94,371 ಜನರಿಗೆ ಲಸಿಕೆಯನ್ನು ಹಾಕಿಸಲಾಗಿದೆ. ಬೆಂಗಳೂರು ನಗರದಲ್ಲಿ 73 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.
Advertisement
ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 1, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 73, ಬೀದರ್ 0, ಚಾಮರಾಜನಗರ 0, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 0, ಚಿತ್ರದುರ್ಗ 4, ದಕ್ಷಿಣ ಕನ್ನಡ 0, ದಾವಣಗೆರೆ 0, ಧಾರವಾಡ 0, ಗದಗ 0, ಹಾಸನ 0, ಹಾವೇರಿ 0, ಕಲಬುರಗಿ 1, ಕೊಡಗು 1, ಕೋಲಾರ 0, ಕೊಪ್ಪಳ 0, ಮಂಡ್ಯ 0, ಮೈಸೂರು 2, ರಾಯಚೂರು 0, ರಾಮನಗರ 1, ಶಿವಮೊಗ್ಗ 0, ತುಮಕೂರು 4, ಉಡುಪಿ 2, ಉತ್ತರ ಕನ್ನಡ 1, ವಿಜಯಪುರ 0, ಯಾದಗಿರಿಯಲ್ಲಿ 0 ಪ್ರಕರಣ ವರದಿಯಾಗಿದೆ. ಇದನ್ನೂ ಓದಿ: ವಿಚ್ಛೇದನದ ವಿಚಾರಣೆ ಮುಗಿಸಿ ತವರಿಗೆ ಹೋಗುತ್ತಿದ್ದ ಪತ್ನಿ – ರಸ್ತೆಯಲ್ಲೇ ಕೊಚ್ಚಿ ಕೊಂದ ಪತಿ