471 ಪಾಸಿಟಿವ್, ಕೊರೊನಾ ಪರೀಕ್ಷೆ ಮಾಡಿಸಿಕೊಂಡ 21,927 ಮಂದಿ

Public TV
1 Min Read
corona 1

ಬೆಂಗಳೂರು: ರಾಜ್ಯದಲ್ಲಿ ಇಂದು 471 ಕೇಸ್ ದಾಖಲಾಗಿದ್ದು, 21,927 ಮಂದಿ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾರೆ.

corona 3 2

214 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ.1.73 ದಾಖಲಾಗಿದ್ದು, ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ರೇಟ್ ಶೂನ್ಯ ಪ್ರಮಾಣದಲ್ಲಿದೆ. ರಾಜಧಾನಿ ಬೆಂಗಳೂರಿನಲ್ಲಿ 458 ಮಂದಿಗೆ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.

corona 1 2

51,173 ಮಂದಿ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಒಟ್ಟು 21,927 ಸ್ಯಾಂಪಲ್ (ಆರ್‌ಟಿ ಪಿಸಿಆರ್ 15,737 + 6190 ರ‍್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಗೋವಾಕ್ಕೆ ಹೊರಟವ ಸ್ಮಶಾನಕ್ಕೆ – ಸ್ನೇಹಿತರ ಸುತ್ತ ಅನುಮಾನದ 

corona 2 2

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು ಗ್ರಾಮಾಂತರ 03, ಬೆಂಗಳೂರು ನಗರ 458, ಬೀದರ್ 02, ದ.ಕನ್ನಡ 03, ಧಾರವಾಡ 03, ಕಲಬುರಗಿ 01 ಮತ್ತು ಉಡುಪಿ 01 ಕೊರೊನಾ ಪ್ರಕರಣಗಳು ದಾಖಲಾಗಿವೆ.

Share This Article
Leave a Comment

Leave a Reply

Your email address will not be published. Required fields are marked *